ಮೂಡಲಗಿಯಲ್ಲಿ ಕಾರ್ಮಿಕ ಇಲಾಖೆ ಪ್ರಾರಂಭಿಸುವಂತೆ ಶಾಸಕರಿಗೆ ಮನವಿ
ಮೂಡಲಗಿ :-ತಾಲೂಕಾಗಿ ಮೂರು ವರ್ಷ ಕಳೆದರೂ ಇಲ್ಲಿ ಕಾರ್ಮಿಕ ಇಲಾಖೆ ಕಚೇರಿ ಪ್ರಾರಂಭವಾಗದೆ ಕಾರ್ಮಿಕರಿಗೆ ತೊಂದರೆಯಾಗುತ್ತಿದ್ದು ಶೀಘ್ರ ಕಚೇರಿ ಪ್ರಾರಂಭಿಸುವಂತೆ ಸಮರ್ಥ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ವತಿಯಿಂದ ಶಾಸಕ ಮತ್ತು ಕೆ.ಎಮ್.ಎಫ್.ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರಿಗೆ ಮನವಿ ನೀಡಿದರು.
ತಾಲೂಕಾ ವ್ಯಾಪ್ತಿಯಲ್ಲಿ ಸುಮಾರು ಎರಡರಿಂದ ಮೂರು ಸಾವಿರ ಕಾರ್ಮಿಕರುರಿದ್ದು ಈಗಾಗಲೇ ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯನ್ನೂ ಕೂಡ ಮಾಡಿದ್ದಾರೆ. ಇನ್ನೂ ಕೆಲ ಕಾರ್ಮಿಕರು ನೊಂದಣಿ ಮಾಡಿಸುವವರಿದ್ದು ಗೋಕಾಕದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿ 30ಕಿ.ಮಿ ದೂರು ಆಗುತ್ತಿದ್ದು ಕಾರ್ಮಿಕರಿಗೆ ಸಕಾಲದಲ್ಲಿ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಲಾಗುತ್ತಿಲ್ಲ ಇದರಿಂದ ಸೌಲಭ್ಯದಿಂದ ವಂಚಿತರಾಗುತ್ತಿದ್ದೆವೆ. ಕಾರಣ ಮೂಡಲಗಿಯಲ್ಲಿ ಕಾರ್ಮಿಕ ಇಲಾಖೆ ಪ್ರಾರಂಭಿಸಿ ಇಲಾಖೆಯಿಂದ ಸೀಗಬೇಕಾದ ಸೌಲಭ್ಯವನ್ನು ಪಡೆದುಕೊಳ್ಳಲು ಅನುಕೂಲ ಮಾಡಿ ಕೊಡಬೇಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು ಶೀಘ್ರ ನಿಮ್ಮಗಳ ಬೇಡಿಕೆ ಈಡೆರಿಸುವುದಾಗಿ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಸವರಾಜ ಪೋಳ, ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ, ಸದಸ್ಯರಾದ ಬಸವರಾಜ ಗಂಗೂರಿ, ಮಂಜು ಮಠದ, ಪುರಸಭೆ ಸದಸ್ಯ ಶಿವಾನಂದ ಚಂಡಕಿ, ಮುಖಂಡರಾದ ಮರೆಪ್ಪ ಮರೆಪ್ಪಗೋಳ, ಈರಪ್ಪ ಢವಳೇಶ್ವರ, ಯಲ್ಲಾಲಿಂಗ ವಾಳದ,ಸಿದ್ದಣ್ಣ ದುರದುಂಡಿ, ಚಿನ್ನಪ್ಪ ಝಂಡೆಕುರಬರ, ಕಲ್ಲಪ್ಪ ತಳವಾರ, ಸತ್ಯೆಪ್ಪ ದಳವಾಯಿ, ಗಜಾನನ ಗಾಣಿಗೇರ,ದಸ್ತಗೀರಸಾಬ ಕೆರಿಪಳ್ಳಿ ಇನ್ನಿತರರು ಇದ್ದರು.