Breaking News
Home / ತಾಲ್ಲೂಕು / ಕೊರೋನಾ,ಕರ್ತವ್ಯ ನಿರತರಿಗೆ ಪುರಿ,ಪಲ್ಯ ಊಟ ಬಡಿಸಿದ ಶ್ರೀನಾಥ

ಕೊರೋನಾ,ಕರ್ತವ್ಯ ನಿರತರಿಗೆ ಪುರಿ,ಪಲ್ಯ ಊಟ ಬಡಿಸಿದ ಶ್ರೀನಾಥ

Spread the love

ಮೂಡಲಗಿ: ಕೊರೋನಾ ಸೋಂಕು ತಡೆಗಟ್ಟುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪೋಲಿಸ ಇಲಾಖೆ,ವೈದ್ಯಕೀಯ ಸೇವಾ ಸಿಬ್ಬಂದಿ,ಆಶಾ ಕಾರ್ಯಕರ್ತೆಯರು,ಪುರಸಭೆ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಪಟ್ಟಣದ ಹೃದಯ ಸಿರಿವಂತ ಜನತೆ ದಿನಕ್ಕೊಬ್ಬರಂತೆ ವಿವಿಧ ಬಗೆಯ ಭೋಜನ ಉಣ ಬಡಿಸುತ್ತಿರುವುದು,ನೀರು ಪೊರೈಸುತ್ತಿರುವುದು ಶ್ಲಾಘನೀಯ ಎನ್ನುವುದಕ್ಕಿಂತ ಮಾನವೀಯತೆಗೆ ಮಾದರಿಯಾಗುತ್ತಿದ್ದಾರೆ

ಆ ಸಾಲಿನಲ್ಲಿ ಇಲ್ಲಿಯ ಡಿ.ಕೆ.ಶಿವಕುಮರ ಅಸೋಸಿಯೇಷನ್ ಬೆಳಗಾವಿ ಜಿಲ್ಲಾದ್ಯಕ್ಷ ಶ್ರೀನಾಥ ಕರಿಹೊಳಿ ಎಂಬ ಯುವಕ ಸೇವಾ ನಿರತರಿಗೆ ಪುರಿ,ಪಲ್ಯ,ಮೈಸೂರು ಪಾಕ್ ಉಣಬಡಿಸಿ, “ಕೊರೋನಾ ಮಹಾಮಾರಿಯಿಂದ ಪರದಾಡಿತ್ತಿರುವ ಕೂಲಿ ಕಾರ್ಮಿಕರು,ಬಡಬಗ್ಗರಿಗೆ ಇಲ್ಲಿಯ ಜನತೆ ಅವರಿಗೆ ಅಗತ್ಯ ವಸ್ತುಗಳನ್ನು ನೀಡಿ ಸಹಾಯ ಮಾಡುತ್ತಿದ್ದಾರೆ.ಆನಿಟ್ಟಿನಲ್ಲಿ ನನ್ನದೂ ಕೂಡ ಒಂದು ಚಿಕ್ಕ ಅಲ್ಪ ಸೇವೆ ಸಲ್ಲಿಸಿದ್ದೇನೆ” ಎನ್ನುತ್ತಾರೆ ಈ ಯುವಕ.
ಈ ಸಂದರ್ಭದಲ್ಲಿ ಸಿದ್ದಗೌಡ ಕರಿಹೊಳಿ,ಮಲ್ಲಪ್ಪ ಮದಗುಣಕಿ,ಚೇತನ್ ಹೊಸಕೋಟಿ,ಸಂಜು ಕಮತೆ,ಮಲ್ಲಿಕಾರ್ಜುನ ಖಾನಟ್ಟಿ,ರಂಗಪ್ಪ ಮೆಳವಂಕಿ,ಹೊಳೆಪ್ಪ ಶಿವಾಪೂರ ಇನ್ನಿತರರು ಇದ್ದರು.

ಲಾಕ್ ಡೌನ್ ದಿಂದ ಬಡ ಕೂಲಿ ಕಾರ್ಮಿಕರು,ನಿರ್ಗತಿಕರು,ಅಲೆಮಾರಿಗಳು,ಹೊರ ರಾಜ್ಯದಿಂದ ಬಂದು ತಂಗಿದ ಕಾರ್ಮಿಕರು ಆಹಾರ ಸಾಮಗ್ರಿಗಳು ಇಲ್ಲದೆ ಹಸಿವಿನಿಂದ ಪರದಾಡ ಬಾರದೆಂದು ಸ್ಥಳೀಯ ಕೆ.ಎಮ್.ಎಫ್.ಅದ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಭಿಮಾನಿ ಬಳಗದ ಮರೆಪ್ಪ ಮರೆಪ್ಪಗೋಳ ಅವರು ವಿವಿಧ ವಾರ್ಡುಗಳಲ್ಲಿ ಸಂಚರಿಸಿ 50 ಸಾವಿರ ಮೌಲ್ಯದ 200 ಜನರಿಗೆ ತಮ್ಮ ಸ್ವಂತ ಖರ್ಚಿನಿಂದ ಅಗತ್ಯ ವಸ್ತುಗಳ ಕಿಟ್ಟ್ ವಿತರಿಸುವುದರೊಂದಿಗೆ ಕಾನೂನು ಉಲ್ಲಂಘನೆ ಮಾಡದೆ ಸರಕಾರದ ನಿಯಮ ಪಾಲಿಸಿ,ಮಾಸ್ಕ ಧರಿಸಿ,ಸಾಮಜಿಕ ಅಂತರ ಪಾಲಿಸಿ ನಿಮ್ಮ ಸಮಸ್ಯೆ ಆಲಿಸಲು ಶಾಸಕರಿದ್ದಾರೆ ನಿಮ್ಮೊಂದಿಗೆ ನಾವಿದ್ದೇವೆ ಆತಂಕ ಪಡದಿರಿ ಎಂದು ಧೈರ್ಯ ನೀಡಿದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಕರ್ಯದಶಿ ನಾಗಪ್ಪ ಶೇಖರಗೋಳ,ದಾಸಪ್ಪ ನಾಯ್ಕ, ವೆಂಕಟೇಶ ಮುರನಾಳ,ಪಿ.ಎಸ್.ಐ.ಮಲ್ಲಿಕಾರ್ಜುನ ಸಿಂಧೂರ,ರಮೇಶ ಸಣ್ಣಕ್ಕಿ,ಪುರಸಭೆ ಸದಸ್ಯರಾದ ಹಣಮಂತ ಗುಡ್ಲಮನಿ, ಅನ್ವರ ನದಾಫ,ಶಂಕರ ತುಕ್ಕನ್ನವರ,ಯಲ್ಲಾಲಿಂಗ ವಾಳದ,ಮಲೀಕ ಹುಣಶ್ಯಾಳ,ಈರಪ್ಪ ಡವಳೇಶ್ವರ ಮತ್ತಿತರು ಇದ್ದರು


Spread the love

About inmudalgi

Check Also

ತಾಯಿಯ ಎದೆ ಹಾಲಿನ ಮಹತ್ವ” ಬಗ್ಗೆ ಜಾಗೃತಿ ಕಾರ್ಯಕ್ರಮ

Spread the love ಮೂಡಲಗಿ : ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ