ಪಿಕೆಪಿಎಸ್‍ಗಳು ರೈತರ ಜೀವನಾಡಿಗಳು : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
42 ಲಕ್ಷ ರೂ. ವೆಚ್ಚದ ಕಲ್ಲೋಳಿ ಪಿಕೆಪಿಎಸ್ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರಿಗೆ ಕಷ್ಟಕರ ಸಮಸ್ಯೆಗಳು ಎದುರಾದಾಗ ಅವರಿಗೆ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ರೈತರ ಜೀವನಾಡಿಗಳು’ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಮಂಗಳವಾರ ಸಂಜೆ ತಾಲೂಕಿನ ಕಲ್ಲೋಳಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಲ್ಲೋಳಿ ಪಿಕೆಪಿಎಸ್ 100 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಈ ಭಾಗದ ರೈತರಿಗೆ ಆಶಾ ಕಿರಣವಾಗಿದೆ ಎಂದು ಹೇಳಿದರು.
ಕಲ್ಲೋಳಿಯಲ್ಲಿ ಇಬ್ಬರು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿರುವುದರಿಂದ ಇಲ್ಲಿನ ಪಿಕೆಪಿಎಸ್‍ಗೆ ಹೆಚ್ಚಿನ ಅನುಕೂಲವಾಗಲಿದೆ. ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯಗಳು ಡಿಸಿಸಿ ಬ್ಯಾಂಕ್‍ನಿಂದ ಸಿಗಲಿವೆ. ರೈತರ ಕಷ್ಟಗಳನ್ನು ಅರಿತು ಅವರಿಗೆ ಸಾಲಗಳನ್ನು ವಿತರಿಸಬೇಕು. ಸಾಲ ಸೌಲಭ್ಯಗಳನ್ನು ಪಡೆದ ರೈತರು ಸಹ ಸಕಾಲಕ್ಕೆ ಸಾಲವನ್ನು ಮರು ಪಾವತಿ ಮಾಡಬೇಕು. ಈ ಮೂಲಕ ಪ್ರಾಥಮಿಕ ಕೃಷಿ ಪತ್ತಿನ ಆರ್ಥಿಕ ನೆರವಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಹೇಳಿದರು.
106 ವಸಂತಗಳನ್ನು ಪೂರೈಸಿರುವ ಇಲ್ಲಿಯ ಪಿಕೆಪಿಎಸ್ ತನ್ನ ಹೊಸ ಕಟ್ಟಡವನ್ನು ಪ್ರಾರಂಭಿಸುತ್ತಿರುವುದು ಶ್ಲಾಘನೀಯವಾಗಿದೆ. ಇದಕ್ಕೆ ಸಂಘದ ಶೇರುದಾರರು, ಸದಸ್ಯರು ಹಾಗೂ ಹಿರಿಯರ ಸಹಕಾರವೇ ಕಾರಣವಾಗಿದೆ ಎಂದು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು 42 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಿರುವ ಸಂಘದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನೀಲಕಂಠ ಕಪ್ಪಲಗುದ್ದಿ, ಸತೀಶ ಕಡಾಡಿ, ಯುವ ಧುರೀಣರಾದ ರಾವಸಾಬ ಬೆಳಕೂಡ, ಸುಭಾಸ ಕುರಬೇಟ, ಮುಖಂಡ ಬಿ.ಬಿ. ದಾಸನವರ, ಪ್ರಭಾಶುಗರ ಮಾಜಿ ನಿರ್ದೇಶಕ ಮಹಾಂತೇಶ ಕಪ್ಪಲಗುದ್ದಿ, ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲಪ್ಪ ಹೆಬ್ಬಾಳ, ಅಶೋಕ ಮಕ್ಕಳಗೇರಿ, ವಸಂತ ತಹಶೀಲ್ದಾರ, ಅಜೀತ ಬೆಳಕೂಡ, ಸಿದ್ದಪ್ಪ ಮುಗಳಿ, ರಾಮಣ್ಣಾ ದಬಾಡಿ, ಮಲ್ಲಪ್ಪ ಖಾನಾಪೂರ, ಪಂಚಪ್ಪ ಹೆಬ್ಬಾಳ, ಪಪಂ ಮುಖ್ಯಾಧಿಕಾರಿ ಅರುಣಕುಮಾರ, ಪಿಕೆಪಿಎಸ್ ಅಧ್ಯಕ್ಷ ಈರಪ್ಪ ಹೆಬ್ಬಾಳ, ಆಡಳಿತ ಮಂಡಳಿ ನಿರ್ದೇಶಕರಾದ ಭೀಮಪ್ಪ ಗೋರೋಶಿ, ಮಲ್ಲಪ್ಪ ಕಡಾಡಿ, ಬಾಳಪ್ಪ ಕಂಕಣವಾಡಿ, ಭೀಮಪ್ಪ ಬಿ.ಪಾಟೀಲ, ಕೆಂಪಣ್ಣಾ ಖಾನಗೌಡರ, ಸಿದ್ದಪ್ಪ ವ್ಯಾಪಾರಿ, ಪ್ರಕಾಶ ಕುರಬೇಟ, ಧರ್ಮಣ್ಣಾ ನಂದಿ, ಯಮನಪ್ಪ ಗೋಕಾಂವಿ, ಬ್ಯಾಂಕ್ ನಿರೀಕ್ಷಕ ಜಿ.ಆಯ್. ಲಂಕೆಪ್ಪನವರ, ಮುಖ್ಯ ಕಾರ್ಯನಿರ್ವಾಹಕ ಬಿ.ಎಸ್. ಬಾಗೇವಾಡಿ, ಪಟ್ಟಣ ಪಂಚಾಯತ ಸದಸ್ಯರು, ಸಹಕಾರಿಗಳು ಉಪಸ್ಥಿತರಿದ್ದರು.