Breaking News
Home / Recent Posts / ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ ಸಿಐಟಿಯು ಮೂಡಲಗಿ ತಾಲೂಕ ಸಮೀತಿಯ ಕಾರ್ಯಕರ್ತರು

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ ಸಿಐಟಿಯು ಮೂಡಲಗಿ ತಾಲೂಕ ಸಮೀತಿಯ ಕಾರ್ಯಕರ್ತರು

Spread the love

ಮೂಡಲಗಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಮೂಡಲಗಿ ತಾಲೂಕ ಸಮೀತಿಯ ಕಾರ್ಯಕರ್ತರು ಕೇಂದ್ರ-ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಹಾಕುತ್ತಾ ಮೆರವಣಿಗೆ ಮೂಲಕ ಪಟ್ಟಣದ ಶಿವಬೋದರಂಗ ಕಾಲೇಜದಿಂದ ತಾಪಂ ಹಾಗೂ ತಹಶೀಲ್ದಾರ ಕಚೇರಿಗೆ ಆಗಮಿಸಿ ಸರ್ಕಾರದ ವಿರುದ್ದ ಪ್ರತಿಭಟಿಸಿ, ಸ್ಥಳೀಯ ತಹಶೀಲ್ದಾರ, ತಾಪಂ, ಸಿಡಿಪಿಒ ಅಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸಿಐಟಿಯು ನೀಡಿದ ಅಖಿಲ ಭಾರತ ಮುಷ್ಠರ ಹಿನ್ನಲೆಯಲ್ಲಿ ತಾಲೂಕಿನ ಅಂಗನವಾಡಿ, ಕರ್ನಾಟಕ ರಾಜ್ಯ ಗ್ರಾಪಂ ನೌಕರರು, ಅಕ್ಷರದಾಸೋಹ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಅಪಾಯಕಾರಿ ಕೃಷಿ ಮಸೂದೆಗಳನ್ನು ಹಾಗೂ ಕಾರ್ಮಿಕರ ವಿರೋಧಿ ನೀತಿಗಳನ್ನು ಜಾರಿಗೆ ತಂದಿರುವ ತಿದ್ದುಪಡಿ ಕಾಯ್ದೆಯಿಂದ ಕಾರ್ಮಿಕರನ್ನು ಹಾಗೂ ರೈತರ ಗೋಳು ಹೇಳ ತೀರದು. ಸರ್ಕಾರಗಳು ಯಾವುದೇ ಕಾನೂನುಗಳನ್ನು ಜಾರಿಗೊಳಿಸುವ ಮೊದಲು ಅದಕ್ಕೆ ಸಂಬಂಧಪಟ್ಟ ಸಮುದಾಯದವರ ಜೊತೆ ಚರ್ಚಿಸಿ ಸಮಾಲೋಚಿಸಿ ಅವರಿಂದ ಬರುವ ಸಲಹೆ ತಿದ್ದುಪಡಿ ಮತ್ತು ವಿಚಾರಗಳನ್ನು ಪರಿಗಣಿಸುವದು ಪ್ರಜಾತಾಂತ್ರಿಕ ರೂಡಿಯಾಗಿದೆ ಎಂದು ಸರ್ಕಾರಗಳ ವಿರುದ್ದ ಪ್ರತಿಭಟನಾಕಾರರು ಕಿಡಿಕಾರಿದರು.
ಆದಾಯ ತೇರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲಾ ಕುಟುಂಬಗಳಿಗೆ ತಿಂಗಳಿಗೆ 7500 ರೂ, ನಗದು ನೀಡುವದು, ಅಗತ್ಯ ಇರುವ ಎಲ್ಲರಿಗೂ ತಿಂಗಳಿಗೆ 10ಕೆಜಿ ಉಚಿತ ಪಡಿತರ ನೀಡಬೇಕು, ಗ್ರಾಮೀಣ ಪ್ರಧೇಶದಲ್ಲಿ 200 ದಿನಗಳ ಕೆಲಸವನ್ನು ಉದ್ಯೋಗ ಖಾತ್ರಿಯೋಜನೆಯಲ್ಲಿ ನೀಡುವುದು, ಇಲ್ಲಿವರೆಗೆ ಜಾರಿಗೆ ತಂದಿರುವ ಎಲ್ಲ ರೈತ ಹಾಗೂ ಕಾರ್ಮಿಕರ ವಿರೋಧ ಶಾಸನಗಳನ್ನು ಕೂಡಲೇ ಹಿಂದಕ್ಕೆ ಪಡೆಯುವುದು, ಹಣಕಾಸು ವಲಯ ಸೇರಿದಂತೆ ಸಾರ್ವಜನಿಕ ವಲಯದ ಖಾಸಗೀಕರಣ ನಿಲ್ಲಿಸಬೇಕು. ಎಲ್ಲ ಕಾರ್ಯಕರ್ತರಿಗೆ ಮತ್ತು ಅಸಂಘಟಿತ ವಲಯದ ಕಾರ್ಮಿಕರನ್ನು ಸಂರಕ್ಷಿಸಿಬೇಕು, 21 ಸಾವಿರ ಸಮಾನ ಕನಿಷ್ಠ ವೇತನ ನಿಗದಿ ಮಾಡುವುದು, ಅನುಕಂಪ ಆಧಾರದ ಮೇಲೆ ನೇಕಮ ಮಾಡಿಕೊಳ್ಳುವುದು ಹೀಗೇ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ತಾಲೂಕಾ ಅಧ್ಯಕ್ಷ ರಮೇಶ ಹೊಳಿ, ಉಪಾಧ್ಯಕ್ಷ ರಾಜು ದೊಡಮನಿ, ಪ್ರಧಾನ ಕಾರ್ಯದರ್ಶಿ ಬಸಪ್ಪ ರೋಡ್ಡನ್ನವರ, ಖಜಾಂಚಿ ವಿಠ್ಠಲ ಕಂಬಳೆ, ಸಹಕಾರ್ಯದರ್ಶಿ ಮಹಾಂತೇಶ ಸಂತಿ, ರೆವಪ್ಪ ಬಿಳ್ಳೂರ, ಮಹಾದೇವ ಮಾದರ, ಶ್ರೀಕಾಂತ ಭಜಂತ್ರಿ, ಗುಲಾಬ ಪಿರಜಾದೆ, ಕಿಶೋರ ಗಣಾಚಾರಿ, ಹಣಮಂತ ಮೂಲಿಮನಿ, ಗುಳಪ್ಪ ಹೊಸುರ, ಸಿದ್ರಾಮ ಬಡಕುರಿ ಹಾಗೂ ಅಂಗನವಾಡಿ, ಬಿಸಿಊಟ ಕಾರ್ಯಕರ್ತೆಯರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ