ನದಾಫ, ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ
ಮೂಡಲಗಿ: ಕರ್ನಾಟಕ ರಾಜ್ಯದಲ್ಲಿ ನದಾಫ್, ಪಿಂಜಾರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು ಎಂದು ಮೂಡಲಗಿ ತಾಲ್ಲೂಕು ನದಾಫ, ಪಿಂಜಾರ ಸಂಘದ ಪದಾಧಿಕಾರಿಗಳು ಮಂಗಳವಾರ ತಹಶೀಲ್ದಾರ್ ಅವರಿಗೆ ಮನವಿ ಅರ್ಪಿಸಿದರು.
ಕರ್ನಾಟಕ ರಾಜ್ಯದಲ್ಲಿರುವ ನದಾಫ, ಪಿಂಜಾರ ಸಮಾಜದ ಜನರು ಆರ್ಥಿಕ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದವರಾಗಿದ್ದು, ಕೇಂದ್ರ ಸರ್ಕಾರವು ಒಬಿಸಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ. ಹಿಂದುಳಿದ ಕಾಯ್ದೆಯಲ್ಲಿ ಸಹ ನದಾಫ ಸಮಾಜವು ಅತ್ಯಂತ ಹಿಂದುಳಿದಿರುವ ಬಗ್ಗೆ ಸ್ಪಷ್ಟವಾಗಿ ಗುರುತಿಸಿದ್ದಾರೆ. ಕರ್ನಾಟಕ ಸರ್ಕಾರವು ಸಮಾಜದ ಅಭಿವೃದ್ಧಿಗೆ ನಿಗಮವನ್ನು ಸ್ಥಾಪಿಸಬೇಕು ಎಂದು ಮನವಿಯಲ್ಲಿ ವಿನಂತಿಸಿಕೊಂಡಿದ್ದಾರೆ.
ನದಾಫ, ಪಿಂಜಾರ ಜನರು ಗಾದಿ, ಗುಡಾರಗಳನ್ನು ತಹಾರಿಸುವ ಅಲೆಮಾರಿಗಳಾಗಿ ಬದುಕು ಸಾಗಿಸುತ್ತಿದ್ದಾರೆ. ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪನೆಗಾಗಿ ಬಹು ದಿನಗಳ ಬೇಡಿಕೆಯಾಗಿದೆ. ಈ ಹಿಂದೆ ನಿಗಮ ಸ್ಥಾಪನೆಗಾಗಿ ಸಮಾಜದಿಂದ ಮನವಿಯನ್ನು ಸರ್ಕಾರಕ್ಕೆ ನೀಡಲಾಗಿದೆ ಎಂದು ತಾಲ್ಲೂಕಾ ಅಧ್ಯಕ್ಷ ಅನ್ವರ ನದಾಫ ಹೇಳಿದರು.
ನದಾಫ, ಪಿಂಜಾರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ನೀಡಿದರು. ತಹಶೀಲ್ದಾರ್ ಡಿ.ಜಿ. ಮಹಾತ್ ಅವರು ಮನವಿ ಸ್ವೀಕರಿಸಿ ಸರ್ಕಾರಕ್ಕೆ ಕಳಿಸಿಕೊಡುವುದಾಗಿ ತಿಳಿಸಿದರು.
ತಾಲ್ಲೂಕು ಸಂಘದ ಅಧ್ಯಕ್ಷ ಅನ್ವರ ನದಾಫ, ಮೀರಾಸಾಬ ನದಾಫ, ಮಲಿಕಜಾನ ನದಾಫ, ಇಸಾಕಅಹ್ಮದ ನದಾಫ, ದಸ್ತಗೀರ ನದಾಫ, ಮೀರಾಸಾಬ ನದಾಫ, ರಫೀಕ ನದಾಫ, ಅಪ್ಪಾಸಾಬ ನದಾಫ, ನೂರಸಾಬ ನದಾಫ, ಮಹ್ಮದ ನದಾಫ, ಮುಬಾರಕ ಪಿಂಜಾರ, ಶಬ್ಬೀರ ನದಾಫ, ಬಾಬುಸಾಬ ನದಾಫ, ಬಾಪು ನದಾಫ ಭಾಗವಹಿಸಿದ್ದರು.