ಮೂಡಲಗಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಆಚರಿಸಿದ ಕನಕ ಜಯಂತಿ ಸಮಾರಂಭದಲ್ಲಿ ಪ್ರೊ. ಸಂಗಮೇಶ ಗುಜಗೊಂಡ ಮಾತನಾಡಿದರು
ಕನಕದಾಸರು ದಾಸ ಪರಂಪರೆಯ ಅಗ್ರಗಣ್ಯರು
ಮೂಡಲಗಿ: ಇಲ್ಲಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಕನಕದಾಸರ ಜಯಂತಿಯನ್ನು ಆಚರಿಸಿದರು.
ಮುಖ್ಯ ಅತಿಥಿಯಾಗಿ ಉಪನ್ಯಾಸ ನೀಡಿದ ಪ್ರೊ. ಸಂಗಮೇಶ ಗುಜಗೊಂಡ ‘ಕನಕದಾಸರು ದಾಸ ಪರಂಪರೆಯ ಅಗ್ರಗಣ್ಯರಾಗಿದ್ದರು, ತಮ್ಮ ಸಾಹಿತ್ಯದ ಮೂಲಕ ಮಾನವ ಕುಲಕ್ಕೆ ಅಮೂಲ್ಯ ಸಂದೇಶವನ್ನು ನೀಡಿದ್ದಾರೆ’ ಎಂದರು.
ವರ್ಗ, ವರ್ಣ, ಜಾತಿಭೇದವನ್ನು ತಿರಸ್ಕರಿದ್ದ ಕನಕದಾಸರು ತಮ್ಮ ನೂರಾರು ಕೀರ್ತನೆ ಮತ್ತು ಪದ್ಯಗಳಲ್ಲಿ ಅವುಗಳನ್ನು ಪ್ರಸ್ತುತಪಡಿಸಿದ್ದಾರೆ ಎಂದರು.
ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಡಾ. ಆರ್.ಎ. ಶಾಸ್ತ್ರೀಮಠ ಮಾತನಾಡಿ ಕನಕದಾಸರು ಸಾರಿದ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.
ಕಾರ್ಯಕ್ರಮದಲ್ಲಿ ಡಾ. ಬಿ.ಸಿ. ಪಾಟೀಲ, ಪ್ರೊ. ಜಿ.ಸಿದ್ರಾಮರಡ್ಡಿ, ಪ್ರೊ. ಎ.ಪಿ. ರಡ್ಡಿ, ಪ್ರೊ. ಎಸ್.ಜಿ. ನಾಯಿಕ, ಪ್ರೊ. ಎಸ್.ಬಿ. ಖೋತ, ಪ್ರೊ. ಎಸ್.ಎ. ಶಾಸ್ತ್ರೀಮಠ, ಡಾ. ಎಸ್.ಎಲ್. ಚಿತ್ರಗಾರ, ಪ್ರೊ. ಜಿ.ವಿ. ನಗಾರಾಜ, ಪ್ರೊ. ವಿ.ಆರ್. ದೇವರಡ್ಡಿ, ಪ್ರೊ. ಎಸ್.ಸಿ. ಮಂಟೂರ, ಭಾರತಿ ತಳವಾರ ಇದ್ದರು.
Check Also
ತಾಯಿಯ ಎದೆ ಹಾಲಿನ ಮಹತ್ವ” ಬಗ್ಗೆ ಜಾಗೃತಿ ಕಾರ್ಯಕ್ರಮ
Spread the love ಮೂಡಲಗಿ : ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು …