Breaking News
Home / Recent Posts / ಪಿಎಚ್.ಡಿ. ಪದವಿ ಪಡೆದುಕೊಂಡಿರುವ ಡಾ. ಮಹಾದೇವ ಪೋತರಾಜ ಅವರನ್ನು ಸನ್ಮಾನಿಸಿದರು

ಪಿಎಚ್.ಡಿ. ಪದವಿ ಪಡೆದುಕೊಂಡಿರುವ ಡಾ. ಮಹಾದೇವ ಪೋತರಾಜ ಅವರನ್ನು ಸನ್ಮಾನಿಸಿದರು

Spread the love

ಮೂಡಲಗಿಯ ಜೈ ಭವಾನಿ ಗೋಂದಳಿ ಕಲಾ ಸಂಘ ಹಾಗೂ ಇಮಾಮಸಾಬ ಜಾತಿಗಾರ ಸಿದ್ದಿ ಮೇಳ ಕಲಾ ಸಂಘದವರು ಪಿಎಚ್.ಡಿ. ಪದವಿ ಪಡೆದುಕೊಂಡಿರುವ ಡಾ. ಮಹಾದೇವ ಪೋತರಾಜ ಅವರನ್ನು ಸನ್ಮಾನಿಸಿದರು

ಪ್ರೊ. ಸಂಗಮೇಶ ಗುಜಗೊಂಡ ಅಭಿಮತ
‘ಸಂಸ್ಕøತಿಯ ಮೂಲ ಬೇರು ಜನಪದವಾಗಿದೆ

ಮೂಡಲಗಿ: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ‘ಗೋಕಾವಿ ನಾಡಿನ ಜನಪದ ಕಲಾವಿದರು’ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದುಕೊಂಡಿರುವ ಡಾ. ಮಹಾದೇವ ಪೋತರಾಜ ಅವರಿಗೆ ಮೂಡಲಗಿಯ ವಿದ್ಯಾನಗರದ ಜೈ ಭವಾನಿ ಗೋಂದಳಿ ಕಲಾ ಸಂಘ ಹಾಗೂ ಇಮಾಮಸಾಬ ಜಾತಿಗಾರ ಸಿದ್ದಿಸೋಗು ಕಲಾ ಸಂಘದವರು ಪಾಂಡುರಂಗ ಮಂದಿರದ ಆವಣದಲ್ಲಿ ಸನ್ಮಾನಿಸಿ ಗೌರವಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಮಾತನಾಡಿ ‘ಸಂಸ್ಕøತಿಯ ಮೂಲ ಬೇರುವಾಗಿರುವ ಜನಪದ ಮತ್ತು ಜನಪದ ಕಲೆಗಳನ್ನು ಇಂದಿನ ತಂತ್ರಜ್ಞಾನದ ದಿನಮಾನಗಳಲ್ಲಿ ಉಳಿಸಿಕೊಂಡು ಹೋಗುವುದು ಅತ್ಯಂತ ಅವಶ್ಯವಿದೆ’ ಎಂದರು.
ಮಹಾದೇವ ಪೋತರಾಜ ಅವರು ಗೋಕಾಕ ಮತ್ತು ಮೂಡಲಗಿಯಲ್ಲಿರುವ ಒಟ್ಟು ಜಾನಪದ ಕಲಾವಿದರ ಬಗ್ಗೆ ಮಾಡಿರುವ ಸಂಶೋಧನೆಯ ಅವರ ಕಾರ್ಯವು ಜನಪದ ಕಲಾ ಕ್ಷೇತ್ರಕ್ಕೆ ಮಾರ್ಗದರ್ಶಿಯಾಗಲಿದೆ ಎಂದರು.
ಗೋಂದಳಿ ಕಲೆ, ದಟ್ಟಿ ಕುಣಿತ ಮತ್ತು ಸಿದ್ದಿ ಸೋಗು ಇವು ಜನರಿಂದ ದೂರವಾಗುತ್ತಿದ್ದು, ಇಂಥ ಅನೇಕ ಜನಪದ ಕಲೆಗಳಿಗೆ ಪುನ:ಶ್ಚೇತನ ನೀಡಿ, ಕಲಾ ಪೀಳಿಗೆ ಬೆಳೆಸುವುದು ಅವಶ್ಯವಿದೆ ಎಂದರು.
ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ ಜನಪದ ಕಲೆ ಮತ್ತು ಕಲಾವಿದರ ಕುರಿತು ಮಾಡುವ ಸಂಶೋಧನೆಯು ಕಠಿಣ ಪರಿಶ್ರಮದಿಂದ ಕೂಡಿದೆ. ಕ್ಷೇತ್ರಕಾರ್ಯದೊಂದಿಗೆ ಅಧ್ಯಯನಶೀಲತೆ ಒಳಗೊಂಡಿದೆ. ಡಾ. ಮಹಾದೇವ ಪೋತರಾಜ ಅವರು ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದಾರೆ ಎಂದರು.
ಡಾ. ಪೋತರಾಜ ಅವರ ಸಂಶೋಧನಾ ಪ್ರಬಂಧವು ಪುಸ್ತಕ ರೂಪದಲ್ಲಿ ಪ್ರಕಟಿಸಿದರೆ ಗೋಕಾವಿ ನಾಡಿನ ಕಲಾ ಕ್ಷೇತ್ರಕ್ಕೆ ಆಕಾರ ಗ್ರಂಥವಾಗಿ ಬಹುಪಯೋಗಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿ ಡಾ. ಮಹಾದೇವ ಪೋತರಾಜ ಮಾತನಾಡಿ ಸಂಶೋಧನೆ ಮಾಡುವ ಅವಧಿಯಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದು, ಪಿಎಚ್.ಡಿ. ಪದವಿ ದೊರೆಯುವ ಮೂಲಕ ಎಲ್ಲ ಕಷ್ಟ, ನೋವುಗಳು ಮರೆಯಾಗಿವೆ. ಸಂಶೋಧನೆ ಸಂದರ್ಭದಲ್ಲಿ ಕಲಾವಿದರು ನೀಡಿದ ಸಹಕಾರವನ್ನು ಸ್ಮರಿಸಿದರು.
ಅಧ್ಯಕ್ಷತೆವಹಿಸಿದ್ದ ಸಂತ ಭೀಮಶಿ ಮಾನೆ ಮಾತನಾಡಿ ಡಾ. ಪೋತರಾಜ ಅವರು ಗೋಂದಳಿ ಕಲೆಯ ಮಹತ್ವವನ್ನು ತಮ್ಮ ಸಂಶೋಧನೆಯಲ್ಲಿ ಬಳಸಿಕೊಳ್ಳುವ ಮೂಲಕ ಗೋಂದಳಿ ಸಮಾಜವನ್ನು ಸಮಾಜಕ್ಕೆ ಪರಿಚಯಿಸಿದ್ದಾರೆ ಎಂದರು.
ಕಲಾವಿದರಾದ ನಾಗೇಂದ್ರ ಮಾನೆ, ಚುಟುಕುಸಾಬ ಜಾತಿಗಾರ, ಹುಸೇನಸಾಬ ಮನಗೂಳಿ, ಯಾಕೂಬ ಜಾತಿಗಾರ ಅವರು ಡಾ. ಮಹಾದೇವ ಪೋತರಾಜ ಅವರನ್ನು ಸನ್ಮಾನಿಸಿದರು.
ನಾಗೇಂದ್ರ ಮಾನೆ ಮತ್ತು ದತ್ತು ಮಾನೆ ಅವರು ಪ್ರದರ್ಶಿಸಿದ ಗೋಂದಳಿ ಹಾಡು ಮತ್ತು ವಾದ್ಯವು ಎಲ್ಲರ ಗಮನಸೆಳೆಯಿತು.
ಕಾರ್ಯಕ್ರಮದಲ್ಲಿ ದತ್ತು ಮಾನೆ, ಸದಾಶಿವ ಮಾನೆ, ಲಕ್ಷ್ಮಣ ಝಂಡೇಕುರಬರ ಹಾಗೂ ಸಮಾಜದ ಯುವಕರು, ಕಲಾ ಆಸಕ್ತರು ಭಾಗವಹಿಸಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ