ಮೂಡಲಗಿ: ಕ್ರೀಡಾ ಪಟುಗಳು ಕ್ರೀಡಾ ಮನೋಭಾವನೆಯಿಂದ ಕ್ರೀಡೆಯಲ್ಲಿ ಭಾಗವಹಿಸಿ ಕ್ರೀಡೆಯಲ್ಲಿ ಸೋತರು ಸಹ ಜೀವನದಲ್ಲಿ ಗೆಲುವ ಗುರಿ ಹೊಂದಬೇಕು ಎಂದು ವೆಂಕಟೇಶ ಆಸ್ಪತ್ರೆಯ ಡಾ.ವೀಣಾ ಕನಕರಡ್ಡಿ ಹೇಳಿದರು.
ಅವರು ಪಟ್ಟಣದಲ್ಲಿ ದ್ವಿತೀಯ ಬಾರಿಗೆ ಜೀಸಸ್ ಕಬಡ್ಡಿ ಹಾಗೂ ಎಮ್.ವಾಯ್.ಎಫ್ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ದಿ.ಶ್ರೀಮತಿ ಭಿಮವ್ವಾ ಲ.ಜಾರಕಿಹೊಳಿ ಅವರ ಸ್ಮರಣಾರ್ಥವಾಗಿ ಮತ್ತು ಕ್ರಿಸ್ ಮಸ್ ಹಾಗೂ ಹೊಸ ವರ್ಷ ಅಂಗವಾಗಿ ಹಮ್ಮಿಕೊಂಡ ಹೊನಲು ಬೆಳಕಿನ ಪುರುಷರ 65 ಕೆ.ಜಿ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಕ್ರೀಡಾ ಪಟುಗಳು ತಮ್ಮ ಪ್ರತಿಭೆಯನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಬೇಕೆಂದರು.
ಪುರಸಭೆಯ ಮಾಜಿ ಉಪಾಧ್ಯಕ್ಷ ರವೀಂದ್ರ ಸೋನವಾಲ್ಕರ ಮಾತನಾಡಿ, ಪಾಶ್ಚಮಾತ್ಯರ ಕ್ರೀಡೆಯಿಂದ ಅಪ್ಪಟ ದೇಶಿಯ ಕ್ರೀಡೆಗಳು ಮಾಯವಾಗುತ್ತಿರುವ ಸಂದರ್ಭದಲ್ಲಿ ಜೀಸಸ್ ಕಬಡ್ಡಿ ಹಾಗೂ ಎಮ್.ವಾಯ್.ಎಫ್‍ದವರು ದೇಶಿಯ ಕ್ರೀಡೆಯನ್ನು ಸಂಘಟಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಪಾಸ್ಟರ್ ಹನುಕ್ ಭಂಗೆನ್ನವರ ಮಾತನಾಡಿ, ಕ್ರೀಡಾ ಪಟುಗಳು ಪ್ರೀತಿ ಸಹಬಾಳ್ವೆಯಿಂದ ಮುಂದಕ್ಕೆ ಸಾಗಲು ಯೇಸುವಿನಲ್ಲಿ ಪ್ರಾರ್ಥಿಸಿದರು.
ವೇದಿಕೆಯಲ್ಲಿ ರಮೇಶ ಸಣ್ಣಕ್ಕಿ, ಪ್ರಭು ಭಂಗೆನ್ನವರ, ಮಹೇಶ ಹಳ್ಳೂರ, ಸಾಬು ಸಣ್ಣಕ್ಕಿ, ಮರೆಪ್ಪ ಮರೆಪ್ಪಗೋಳ, ಇಬ್ರಾಹ್ಮಿ ಹುಣಶ್ಯಾಳ, ಬಸು ಝಂಡೆಕುರುಬರ, ರಾಘವೇಂದ್ರ ಸಾವಳೇಕರ, ಅಬ್ದಲ್ ಮದಭಾಂವಿ, ಯಶವಂತ ಮೂಡಲಗಿ, ಹಾಗೂ ಮತ್ತಿತರು ಇದ್ದರು. ದುಂಡಪ್ಪ ಢವಳೇಶ್ವರ ನಿರೂಪಿಸಿ ಸ್ವಾಗತಿಸಿದ್ದರು.