ಮೂಡಲಗಿ : ಮನುಷ್ಯನ ಅಂತರಂಗದ ಅಜ್ಞಾನದ ಕತ್ತಲೆಯನ್ನು ಹೊಡೆದು ಓಡಿಸುವುದೇ ಈ ಕಾರ್ತಿಕ ದೀಪೋತ್ಸವ, ಈ ಹಿನ್ನೆಲೆಯಲ್ಲಿ ತಾಲೂಕಿನ ಹಳ್ಳೂರ ಗ್ರಾಮದ ಮೂರು ಗ್ರಾಮಗಳ ದೇವತೆಯಾದ ಮಹಾಲಕ್ಷ್ಮೀಯ ಕಾರ್ತಿಕೋತ್ಸವ ನಿಮಿತ್ಯ ಭಕ್ತರು ಅತ್ಯಂತ ಭಕ್ತಿ ಭಾವದಿಂದ ದೀಪಗಳನ್ನು ಹಚ್ಚಿ ಭಕ್ತಿ ಪರಾಕಾಷ್ಠೆಯನ್ನು ಮೆರೆದಿದ್ದಾರೆ.
ಶುಕ್ರವಾರ ರಾತ್ರಿ ಒಂದಕ್ಕಿಂತ ಒಂದು ಅಂದವಾಗಿ ಬೆಳಗುತ್ತಿರುವ ದೀಪಗಳು, ಭಕ್ತಿಭಾವದಿಂದ ದ್ವೀಪಗಳನ್ನು ಹಚ್ಚುತ್ತಿರುವ ಭಕ್ತರು ವಿವಿಧ ತರಹದ ದೀಪಗಳು ನೋಡುಗರ ಕಣ್ಮನ ಸೇಳೆದವು. ಶನಿವಾರ ಬೆಳಗ್ಗೆಯಿಂದಲೇ ಹಳ್ಳೂರ, ಶಿವಾಪೂರ, ಕಪ್ಪಲಗುದ್ದಿ ಮೂರು ಗ್ರಾಮದ ಭಕ್ತರು ಆದಿಶಕ್ತಿ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿದ ಬಳಿಕ ನೈವೇದ್ಯ ಅರ್ಪಿಸಿದರು. ದೇವಿಗೆ ನಾನಾ ಹೂವುಗಳಿಂದ ಸಿಂಗರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದೇವಸ್ಥಾನದಲ್ಲಿ ಡೊಳ್ಳು ಕುಣಿತ ಸೇರಿ ನಾನಾ ವಾದ್ಯ ಮೇಳಗಳ ಜೊತೆಗೆ ಪಲ್ಲಕ್ಕಿ ಉತ್ಸವ ಜರುಗಿತು.
ಗ್ರಾಮದಲ್ಲಿ ಸಂಭ್ರಮದ ಕಳೆ : ಕಳೆದ ಏಳೆಂಟು ತಿಂಗಳಿಂದ ಮಹಾಮಾರಿ ಕೊರೋನಾದಿಂದ ಜನರ ನಗುವಿನ ಚಿತ್ತ ಬದಲಾಗಿ, ಆತಂಕದ ಭಾಯೆ ಮೂಡಿ ಜನರ ಜೀವನ ಅಸ್ತವ್ಯಸ್ತವಾಗಿತ್ತು. ಆದರೆ ಅದನ್ನೆಲ್ಲ ಮರೆತು ಮಹಿಳೆಯರು, ಪುರುಷರು, ಯುವಕ ದಂಡು ಆದಿಶಕ್ತಿ ಮಹಾಲಕ್ಷ್ಮೀಯ ಕಾರ್ತಿಕೋತ್ಸವದಲ್ಲಿ ಭಾಗಿಯಾಗಿದ ಭಕ್ತರು ಇನ್ನೂ ಕೊರೋನಾ ಭಯ ಇದ್ದರು ಸಹ ಮಾಸ್ಕ್ ಹಾಕಿಕೊಳ್ಳದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ತಮ್ಮ ಕಷ್ಟಕಾರ್ಪಣ್ಯಗಳನ್ನು ದೂರ ಮಾಡೆಂದು ಆ ದೇವಿಯ ಪಲಕ್ಕಿಗೆ ಭಂಡಾರ ಎರಚುವ ಮೂಲಕ ಭಕ್ತರು ದೇವಿಯ ಮೊರೆಹೋದರು.