ಹಳ್ಳೂರ ಗ್ರಾಪಂ ಚುನಾವಣೆ : ಭೀಮಶಿ ಮಗದುಮ ನೇತೃತ್ವವದ ಗುಂಪಿಗೆ ಜಯ
ಮೂಡಲಗಿ: ತಾಲೂಕಿನಲ್ಲಿಯೇ ತೀವ್ರ ಜಿದ್ದಾ ಜಿದ್ದಿಯೊಂದಿಗೆ ಕುತೂಹಲಕ್ಕೆ ಕಾರಣವಾಗಿದ್ದ ಹಳ್ಳೂರ ಗ್ರಾಮ ಪಂಚಾಯತ್ ಚುನಾವಣೆಯು ನೇರವಾಗಿ ಹನಮಂತ ತೇರದಾಳ ಹಾಗೂ ಮಾಜಿ ಜಿಪಂ ಸದಸ್ಯ ಭೂ ನ್ಯಾಯ ಮಂಡಳಿ ಸದಸ್ಯ ಭೀಮಶಿ ಮಗದುಮ ಗುಂಪುಗಳ ನಡುವೆ ನಡೆದಿತ್ತು. ಫಲಿತಾಂಶದಲ್ಲಿ 25 ಸದಸ್ಯರಲ್ಲಿ ಭೀಮಶಿ ಬೆಂಬಲಿತ 18 ಸದಸ್ಯರು ಹಾಗೂ ಹನಮಂತ ತೇರದಾಳ ಬೆಂಬಲಿತ 7 ಜನ ಆಯ್ಕೆಯಾಗುವ ಮೂಲಕ ಭೀಮಶಿ ಮಗದುಮ ಮತ್ತೊಮ್ಮೆ ತಮ್ಮಯ ಪ್ರಾಬಲ್ಯವನ್ನು ಮೇರೆದಿದ್ದಾರೆ.
IN MUDALGI Latest Kannada News