Breaking News
Home / Recent Posts / ರಾಮ ಮಂದಿರ ನಿರ್ಮಾಣದ ಮೂಲಕ ರಾಮರಾಜ್ಯ ನಿರ್ಮಾಣವಾಗಲಿದೆ- ಚುನಮರಿ

ರಾಮ ಮಂದಿರ ನಿರ್ಮಾಣದ ಮೂಲಕ ರಾಮರಾಜ್ಯ ನಿರ್ಮಾಣವಾಗಲಿದೆ- ಚುನಮರಿ

Spread the love

ರಾಮ ಮಂದಿರ ನಿರ್ಮಾಣದ ಮೂಲಕ ರಾಮರಾಜ್ಯ ನಿರ್ಮಾಣವಾಗಲಿದೆ- ಚುನಮರಿ

ಮೂಡಲಗಿ : ಪ್ರಭು ಶ್ರೀರಾಮಚಂದ್ರ ಭಾರತದ ಅಸ್ಮಿತೀಯ ಸಂಕೇತವಾಗಿದ್ದಾನೆ, ಅಯೋಧ್ಯಯಲ್ಲಿ ಪ್ರಭು ಶ್ರೀರಾಮಚಂದ್ರನ ಮಂದಿರ ನಿರ್ಮಿಸುವ ಮೂಲಕ ಹಿಂದೂ ಸಮಾಜ ಬಾಂಧವರು ರಾಮರಾಜ್ಯ ಸ್ಥಾಪನೆಗೆ ನಾಂದಿ ಹಾಡಲಿದ್ದಾರೆ ಎಂದು ರಾಷ್ಠ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಚಾಲಕರಾದ ಎಮ್. ಡಿ. ಚುನಮರಿ ಹೇಳಿದರು
ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ರವಿವಾರ ಜ-03 ರಂದು ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಮೂಡಲಗಿ ಹೊಬಳಿಯ ವಿಸ್ತøತ ಬೈಠಕ್ ನಲ್ಲಿ ಭಾರತ ಮಾತೆ, ಶ್ರೀ ರಾಮಚಂದ್ರ ಮತ್ತು ಆಂಜನೇಯನ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಿ ಮಾತನಾಡುತ್ತಿದ್ದ ಅವರು ಜ-17 ರಂದು ನಡೆಯಲಿರುವ ನಿಧಿ ಸಮರ್ಪಣಾ ಅಭಿಯಾನದಲ್ಲಿ ಹಿಂದೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳ್ಳುವ ಮೂಲಕ ಪ್ರಭು ಶ್ರೀ ರಾಮಚಂದ್ರನ ಭವ್ಯ ಮಂದಿರ ನಿರ್ಮಾಣ ಕಾರ್ಯದಲ್ಲಿ ತನು-ಮನ ಧನದಿಂದ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬೈಠಕ್ ಉದ್ದೇಶಿಸಿ ಮಾತನಾಡಿದ ಡಿ.ಸಿ.ಸಿ ಬ್ಯಾಂಕ ನಿರ್ದೇಶಕ ಸತೀಶ ಕಡಾಡಿ ರಾಮ ಮಂದಿರ ಕೇವಲ ಒಂದು ಮಂದಿರವಾಗದೆ ರಾಷ್ಠ್ರೀಯತೆಯ ಪ್ರತೀಕವಾಗಲಿದೆ ಭಾರತದ ಮುಂದಿನ ತಲೆ ತಲೆಮಾರುಗಳಿಗೂ ರಾಷ್ಟø ಪ್ರೇಮ ಜಾಗೃತಗೊಳಿಸುವ ಕೇಂದ್ರವಾಗಲಿದೆ ಎಂದರು.


ಸಹದೇವ ಖಾನಾಪೂರ, ಕೃಷ್ಣಾ ಕುರಬಗಟ್ಟಿ, ಮಹಾಂತೇಶ ಮೆಳವಂಕಿ, ಬಸವರಾಜ ಮಾಳೇದವರ, ನೀಲಕಂಠ ಕಪ್ಪಲಗುದ್ದಿ, ಶಿವಪ್ಪ ಬೆಳಕೂಡ, ಮಹಾದೇವ ಶೇಕ್ಕಿ, ಪ್ರಮೋದ ನುಗ್ಗಾನಟ್ಟಿ, ಪರಸಪ್ಪ ಬಬಲಿ, ಪುಂಡಲೀಕ ಅರಭಾಂವಿ, ಸುರೇಶ ಮಠಪತಿ, ಮಂಜುಳಾ ಹಿರೇಮಠ, ಸುನೀಲ ಈರೇಶನ್ನವರ, ಗೌಡಪ್ಪ ಕೋಟಗಿ, ಮಹಾದೇವ ಮಸರಗುಪ್ಪಿ, ಶ್ರೀಕಾಂತ ಕೌಜಲಗಿ, ಮಹಾಂತೇಶ ಕುಡಚಿ, ಸಿದ್ದು ಉಳ್ಳಾಗಡ್ಡಿ ಸೇರಿದಂತೆ ಅನೇಕ ಬಿಜೆಪಿ, ಆರ್.ಎಸ್.ಎಸ್, ವಿಶ್ವ ಹಿಂದೂ ಪರಿಷತ್, ಭಜರಂಗ ದಳ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About inmudalgi

Check Also

ಬೆಟಗೇರಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಈ ಸಲ ಸಂಘದ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆಯುವುದೇ.?

Spread the loveಬೆಟಗೇರಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಈ ಸಲ ಸಂಘದ ಆಡಳಿತ ಮಂಡಳಿ ಸದಸ್ಯರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ