Breaking News
Home / Recent Posts / ‘ಸಾವಿತ್ರಿಬಾಯಿ ಪುಲೆ ಸಮಾಜವನ್ನು ಎದುರಿಸಿ ಅಕ್ಷರ ಕಲಿಸಿದ ಮಹಿಳೆ’

‘ಸಾವಿತ್ರಿಬಾಯಿ ಪುಲೆ ಸಮಾಜವನ್ನು ಎದುರಿಸಿ ಅಕ್ಷರ ಕಲಿಸಿದ ಮಹಿಳೆ’

Spread the love

ರಾಜೀವಗಾಂದಿ ನಗರದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಅವರ 190ನೇ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿದ ನಿವೃತ್ತ ಶಿಕ್ಷಕಿ ಶಾಂತಾ ಕಡಪಟ್ಟಿ ಸಾವಿತ್ರಿಬಾಯಿ ಪುಲೆಯವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು,

‘ಸಾವಿತ್ರಿಬಾಯಿ ಪುಲೆ ಸಮಾಜವನ್ನು ಎದುರಿಸಿ ಅಕ್ಷರ ಕಲಿಸಿದ ಮಹಿಳೆ’

ಮೂಡಲಗಿ: ‘ಮಹಿಳೆ ವಿದ್ಯಾವಂತಳು ಆದರೆ ತನ್ನ ಕುಟಂಬವನ್ನು ಸದಾ ಸಂರಕ್ಷಸಿಸಲು ಸಹಾಯವಾಗುತ್ತದೆ ಎಂಬ ಮೂಲ ಕಲ್ಪನೆಯಿಂದ ಸಮಾಜದಿಂದ ಸಾಕಷ್ಟು ಅಡೆ ತಡೆ ಬಂದರು ಎದೆಗುಂದದೆ ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಅಕ್ಷರದವ್ವ ಎಂಬ ಹೆಗ್ಗಕೆಯನ್ನು ಪಡೆದ ಮಹಿಳೆ ಸಾವಿತ್ರಿಬಾಯಿ ಪುಲೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಮಾತಾವಾದದ ಜಿಲ್ಲಾ ಸಂಚಾಲಕ ರಮೇಶ ಸಣ್ಣಕ್ಕಿ ಹೇಳಿದರು,
ಭಾನುವಾರ ರಾಜೀವಗಾಂದಿ ನಗರದ ಡಾ ಬಿ ಆರ್ ಅಂಬ್ಕೆಂಡರ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಮಾತಾವಾದ ಮೂಡಲಗಿ ತಾಲೂಕಾ ಘಟಕ ಮತ್ತು ಮಾನವ ಬಂಧುತ್ವ ವೇದಿಕೆಯ ಸಹಯೋಗದಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಅವರ 190ನೇ ಜಯಂತಿ ಸಮಾರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದರು,
ತಮ್ಮ ಗಂಡನಿಂದ ಪಡದ ಶಿಕ್ಷಣವನ್ನು ಶಿಕ್ಷಣದಿಂದ ವಂಚಿತರಾದ ಮಹಿಳೆಯರಿಗೆ ದೊರೆಯಲಿ ಎಂಬ ಧೈಯ್ಯ ಹೊಂದಿದವರು ಪುಲೆ ಅವರು ಸತಿ ಸಹಗಮನ, ಬಾಲ್ಯ ವಿವಾಹದಂತಹ ಅನಿಷ್ಠ ಪದ್ದತಿಗಳ ವಿರುದ್ದ ಸದಾ ಹೋರಾಡಿದರು. ಸಾವಿತ್ರಿಬಾಯಿ ಪುಲೆ ಅವರನ್ನು ದೇಶದ ಮೂದಲ ಶಿಕ್ಷಕಿ ಎಂದು ಕರೆಯಲು ಹೆಮ್ಮೆ ಎನಿಸುತ್ತಿದೆ ಎಂದರು.
ಮಾನವ ಬಂದುತ್ವ ವೇದಿಕೆಯ ತಾಲೂಕಾ ಘಟಕದ ಸಂಚಾಲಕ ವಿಲ್ಸನ್ ಖಾನಟ್ಟಿ ಮಾತನಾಡಿ, ಮಹಿಳೆ ಮನೆಗೆ ಸಿಮಿತವಾಗದೆ ಸಮಾಜದ ಒಂದು ಕೊಂಡಿಯಾಗಿ ಕಾರ್ಯ ಮಾಡಲು ಅವರಿಗೆ ಮೂಲ ಶಿಕ್ಷಣದ ಅವಶ್ಯಕತೆ ಇದೆ ಇಂದು ಮಹಿಳೆಯರು ಎಲ್ಲಾ ಕ್ಷೇತ್ರದ ಮುನ್ನಡೆಯಲಿದ್ದು, ಅದು ಸಾವಿತ್ರಿಬಾಯಿ ಪುಲೆ ಅವರ ಪ್ರೇರಣೆಯಾಗಿದೆ ಎಂದರು.
ಬಾಳೇಶ ಬನಹಟ್ಟಿ ಮಾತನಾಡಿ ಹಿಂದುಳಿದ ಜನಾಂಗದ ಮಹಿಳೆಯನ್ನು ಶಿಕ್ಷಣದಿಂದ ಮಾತ್ರ ಉದ್ದಾರ ಮಾಡಬಹುದು ಅದು ಶಿಕ್ಷಣಕ್ಕೆ ಇರುವ ಶಕ್ತಿ ಎಂಬ ಆಘಾದವಾದ ಆಶೆ ಸಾವಿತ್ರಿಬಾಯಿ ಪುಲೆ ಅವರಲ್ಲಿ ಜಾಗೃತವಾಗಿತ್ತು ಇದರಿಂದ ಪತಿ ಜ್ಯೋತಿಬಾ ಪುಲೆ ಅವರ ಮಾರ್ಗದರ್ಶನ ಮತ್ತು ಬ್ರೀಟಿಷರ ಸಹಾಯ ದಿಂದ ಸ್ವಾತಂತ್ಯ ಪೂರ್ವದಲ್ಲಿ ಶಾಲೆ ಪ್ರಾರಂಬಿಸಿದರು ಎಂದರು,
ಸಮಾರಂಭದ ಅಧ್ಯಕ್ಷತೆ ವಹಿಸಿದ ನಿವೃತ್ತ ಶಿಕ್ಷಕಿ ಶಾಂತಾ ಕಡಪಟ್ಟಿ ಸಾವಿತ್ರಿಬಾಯಿ ಪುಲೆಯವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಪುಲೆಯವರು ಅಂದು ನೀಡಿದ ಶಿಕ್ಷಣದಿಂದ ಇಂದು ನಾನು ಶಿಕ್ಷಕಿಯಾಗಿ ಸೇವೆ ಸಲ್ಲಿಸಲು ಪ್ರೇರಣೆಯಾಗಿದೆ ಎಲ್ಲರಿಗೂ ಶಿಕ್ಷಣ ದೊರೆಯಲಿ ಎಂದರು,
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಮಾತಾವಾದದ ತಾಲೂಕಾ ಸಂಘಟನಾ ಸಂಚಾಲಕ ಶಾಬಪ್ಪ ಸಣ್ಣಕ್ಕಿ, ಮರೇಪ್ಪ ಮರೇಪ್ಪಗೋಳ, ವಿಲಾಸ ಸಣ್ಣಕ್ಕಿ, ಲಕ್ಷ್ಮಣ ಕೆಳಗಡೆ, ಯಶವಂತ ಮೇತ್ರಿ, ಯಲ್ಲವ್ವಾ ನಾಗನ್ನವರ, ಹಣಮಂತ ಸಣ್ಣಕ್ಕಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದುಂಡಪ್ಪ ಡವಳೇಶ್ವರ ನಿರೂಪಿಸಿದರು, ಯಾಕುಬ ಸಣ್ಣಕ್ಕಿ ವಂದಿಸಿದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ