ಶಿವಾಪೂರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಯೋಜನೆ ಹಾಗೂ ಶಿವಾಪೂರ ಗ್ರಾಮ ಪಂಚಾಯತ ಇವುಗಳ ಸಂಯುಕ್ತ ಆಶ್ರಯದಲ್ಲಿ ಶುದ್ದಗಂಗಾ ನೀರಿನ ಘಟಕದ ಉದ್ಘಾಟನೆ
ಮೂಡಲಗಿ – ನೀರಿನ ಘಟಕಗಳನ್ನು ಲಾಭಕೋಸ್ಕರ ಮಾಡುತ್ತಿಲ್ಲಾ ಕೇವಲ ಜನರಿಗೆ ಉತ್ತಮ ಆರೋಗ್ಯ ಉಳಿಸಿಕೋಳ್ಳಲು ನೀರನ್ನು ಶುದ್ದಿಕರಿಸಿ ಕೋಡುತ್ತಿದ್ದೆವೆ, ಮೂಡಲಗಿ ತಾಲೂಕಿನ ಕುಲಗೋಡ, ನಾಗನೂರ ಸೇರಿ ಮೂರನೇಯ ಘಟಕ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಸಂಘ ರಚನೆ ಮಾಡುವದರ ಆರ್ಥೀಕ ವವ್ಯಸ್ಥೆ ಸುದಾರಣೆಗೋಸ್ಕರ ಬ್ಯಾಂಕಿನ ಮೂಲಕ ಸಾಲ ಕೋಡಿಸಿ ಸ್ವ ಉದ್ಯೋಗಕ್ಕೆ ಪೂgಕÀವಾಗಿ ಮಾಹಿತಿ ಮಾರ್ಗದರ್ಶನ ತರಬೇತಿಗಳನ್ನು ನೀಡುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ಧೇಶಕ ಕೇಶವ ದೇವಾಂಗ ಹೇಳಿದರು,
ಸಮೀಪದ ಶಿವಾಪೂರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಯೋಜನೆ ಹಾಗೂ ಶಿವಾಪೂರ ಗ್ರಾಮ ಪಂಚಾಯತ ಇವುಗಳ ಸಂಯುಕ್ತ ಆಶ್ರಯದಲ್ಲಿ ಶುದ್ದಗಂಗಾ ನೀರಿನ ಘಟಕದ ಉದ್ಘಾಟನೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು,
ನಿರ್ಗತಿಕರಾದವರಿಗೆ ಪ್ರತಿ ತಿಂಗಳು 750 ರಿಂದ 3000 ವರಗೆ ಮಾಸಾಶನ ವಿತರಿಸುವ ವವ್ಯಸ್ಥೆಯಾಗಿದೆ ಮತ್ತು ಅವರಿಗಾಗಿ ಮೂಡಲಗಿ ತಾಲೂಕಿನಲ್ಲಯೇ 29 ಜನರಿಗೆ ವಾತ್ಸಲ ಕಾರ್ಯಕ್ರಮದ ಅಡಿಯಲ್ಲಿ ಹಾಸಿಗೆ ಹೊದಿಗೆ, ಅಡುಗೆ ಮಾಡಲು ಪಾತ್ರೆ ಹಾಗೂ ಧರಿಸಲು ಬಟ್ಟೆಗಳನ್ನು ಧರ್ಮಸ್ಥಳ ಯೋಜನೆಯಿಂದ ಕಳಿಸಿದ ವಸ್ತುಗಳನ್ನು ಸದ್ಯ ವಿತರಿಸುತ್ತೆವೆ, ಕೃಷಿಕರಿಗೆ ಪ್ರಗತಿ ನಿಧಿ ನೀಡಿ ಮಾಹಿತಿ ತರಬೇತಿ ಪ್ರೇರಣೆಯ ಜೊತೆಗೆ ಅನುದಾನವನ್ನು ನೀಡಲಾಗುತ್ತಿದೆ ಎಂದರು
ವಿಕಲಚೇತನರಿಗೆ ವ್ಹೀಲ ಚೇರ ಹಾಗೂ ವಾಟರ ಬೆಡ್ ಊರುಗೋಲು ಇನ್ನಿತರ ಅಗತ್ಯ ಸಲಕರಣೆಗಳನ್ನು ಉಚಿತವಾಗಿ ವಿತರಿಸಲಾಗುವದು ಎಂದರು, ಶೇ 99ರಷ್ಟು ಕಾರ್ಯಕ್ರಮಗಳು ಸಮಾಜಕ್ಕೆ ಹಾಗೂ ಸಮಾಜದ ಒಳಿತಿಗಾಗಿ ಪೂಜ್ಯ ವೀರೇಂದ್ರ ಹೆಗಡೆಯವರು ರೂಪಿಸಿದ ಯೋಜನೆಗಳನ್ನು ಪ್ರತಿ ಹಳ್ಳಗಳಲ್ಲಿ ಶುದ್ದ ನೀರು, ಬಯಲು ಶೌಚಾಲಯಗಳ ಮುಕ್ತ ಗ್ರಾಮ ನಿರ್ಮಾನಗಳಂತ ಯೋಜನೆಗಳು ಜಾರಿ ಇವೇ ಎಂದರು,
ಶಾಸಕರ ಆಪ್ತ ಕಾರ್ಯದರ್ಶಿ ದಾಸಪ್ಪ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಗ್ರಾಮ ಪಂಚಾಯತದಿಂದ ವಿಕಲಚೇತನರಿಗೆ ವ್ಹೀಲ ಚೇರ ವಿತರಿಸಿದರು,
ಮುಖ್ಯ ಅಥಿತಿಗಳಾಗಿ ಶಂಕರಗೌಡ ಪಾಟೀಲ್, ಶಿವನಗೌಡ ಪಾಟೀಲ್, ತಾ,ಪಂ ಸದಸ್ಯ ಕೆಂಪ್ಪಣ್ಣ ಮುಧೋಳ, ಗ್ರಾ ಪಂ ಸದಸ್ಯ ಹಣಮಂತ ತೇರದಾಳ, ಸತೀಶ ಜುಂಜರವಾಡ, ಕೆಂಪ್ಪನ ಮುಧೋಳ ಶಿವಬಸು ಜುಂಜರವಾq,ಸುರೇಶ ಡಬ್ಬನ್ನವರÀ ಆಗಮಿಸಿದರು,
ತಾಲೂಕಾ ಯೋಜನಾಧಿಕಾರಿ ದೇವರಾಜ, ಮೂಡಲಗಿ ವಲಯ ಮೇಲ್ವಿಚಾರಕಿ ಮಾನಶಿ ಪಾಟೀಲ್, ಸೇವಾ ಪ್ರತಿನಿಧಿ ಕಸ್ತೂರಿ, ಸವಿತಾ ಹಾಗೂ ಮಹಾದೇವಿ ಉಪಸ್ಥಿತರಿದ್ದರು,
ಎಸ್ ಎಮ್ ಜುಂಜರವಾಡ ಸ್ವಾಗತಿಸಿದರು, ಎ ಜಿ ಗೀರೆನ್ನವರ ನಿರೋಪಿಸಿದರು, ಪಿ ಡಿ ಓ ಶ್ರೀಶೈಲ ತಡಸನ್ನವರ ವಂದಿಸಿದರು,