ದಾಲ್ಮೀಯಾ ದೀಕ್ಷಾದಿಂದ ಉಚಿತ ಕೌಶಕ್ಯ ಅಭ್ಯವೃದ್ಧಿ ಶಿಕ್ಷಣ ತರಬೇತಿಗೆ ಚಾಲನೆ
ಮೂಡಲಗಿ: ದೇಶದಲ್ಲಿ ತಾಂಡವಾಡುತ್ತಿರು ನಿರುದ್ಯೋಗ ಸಮಸ್ಯೆಗಳನ್ನು ಹೊಗಲ್ಲಾಡಿಸಲು ಕೈಗಾರಿಕೆಗಳು ಅಭಿವೃದ್ದಿ ಹೊಂದಿದರೆ ಮಾತ್ರ ಸಾಧ್ಯ, ನಿರುದ್ಯೋಗ ಸಮಸ್ಯೆಯನ್ನು ಹೊಗಲ್ಲಾಡಿಸಲು ದಾಲ್ಮೀಯಾ ಭಾರತ ಫೌಂಡೇಶನದಿಂದ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಶಿಕ್ಷಣವನ್ನು 3 ತಿಂಗಳ ಕಾಲ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ ಎಂದು ದಾಲ್ಮೀಯಾ ಸಿಮೆಂಟ ಕಾರ್ಖಾನೆಯ ಯಾದವಾಡ ಘಟಕದ ಮುಖ್ಯಸ್ಥ ಪ್ರಭಾತಕುಮಾರ ಸಿಂಗ್ ಹೇಳಿದರು.
ಅವರು ಮೂಡಲಗಿ ತಾಲ್ಲೂಕಿನ ಯಾದವಾಡದ ದಾಲ್ಮೀಯಾ ಭಾರತ ಫೌಂಡೇಶನದ ಧೀಕ್ಷಾ ಸಂಘಟನೆ ಅಡಿಯಲ್ಲಿ ಯಾದವಾಡ ಸಾರ್ಮಾಟ ಐಟಿಐ ಕಾಲೇಜಿನ ಸಹಯೋಗದೊಂದಿಗೆ 3 ತಿಂಗಳ ಅವಧಿ ಉಚಿತ ಅಸಿಸ್ಟಂಟ್ ಎಲೆಕ್ಟ್ರೀಸಿಯನ್ ಕೋರ್ಸ್‍ದ ಪ್ರಾರಂಭೋತ್ಸವದ ಸಮಾರಂಭದಲ್ಲಿ ಮಾತನಾಡಿ, ರಾಜ್ಯದಲ್ಲಿ ದೊಡ್ಡ ಮತ್ತು ಸಣ್ಣ ಪ್ರಮಾಣದಲ್ಲಿ ಕೈಗಾರಿಕೆಗಳು ಬೆಳವಣಿಗೆ ಹಂದುತ್ತಿದು, ಈ ದೀಶೆಯಲ್ಲಿ ವಿದ್ಯಾರ್ಥಿಗಳು ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣದ ನಂತರ ಕೌಶಲ್ಯ ಅಭಿವೃದ್ಧಿ ಶಿಕ್ಷಣವನ್ನು ಪಡೆದುಕೊಂಡು ಸ್ವ-ಉದ್ಯೋಗ ಮತ್ತು ಉದ್ಯೋಗ ಪಡೆದುಕೊಂಡು ಆರ್ಥಿಕತೆಯಲ್ಲಿ ಕೌಟಂಬಿಕ ಜೀವನ ಸಾರ್ಥಕತೆ ಪಡೆದುಕೊಳ್ಳಬೇಕೆಂದರು.
ದಾಲ್ಮೀಯಾ ಕಾರ್ಖಾನೆ ಹಿರಿಯ ಪ್ರಧಾನ ವ್ಯವಸ್ಥಾಪಕ ಮುಖೇಶ ಸಿನ್ಹಾ ಮಾತನಾಡಿ, ವಿದ್ಯಾರ್ಥಿಗಳು ಉಚಿತ ತರಬೇತಿಯ ಸದುಪಯೋಗಪಡಿಸಿಕೊಳ್ಳಬೇಕೆಂದರು.
ಸಮಾರಂಭದ ಅಧ್ಯಕ್ಷತೆವಹಿಸಿದ ಸತ್ತೆವೇದ ಎಜುಕೇಷನ ಚಾರಿಟೆಬಕ್ ಟ್ರಸ್ಟ ಮತ್ತು ಸಾರ್ಮಾಟ ಐಟಿಐ ಕಾಲೇಜಿನ ಅಧ್ಯಕ್ಷ ಅಶೋಕ ಲಗಮಪ್ಪಗೋಳ, ಗೋಕಾಕ ಅಬ್ದುಲ್ ಕಲಾಮ್ ಕಾಲೇಜಿನ ಉಪಾಧ್ಯಕ್ಷ ಎಸ್.ಎಮ್.ಪಿರಜಾದೆ ಮತ್ತು ವಿದ್ಯಾರ್ಥಿಗಳು ಮಾತನಾಡಿದರು.
ದಾಲ್ಮೀಯಾ ಕಾರ್ಖಾನೆಯ ಹಿರಿಯ ಕಾರ್ಯಮ ಅಧಿಕಾರಿ ಚೇತನ ವಾಘಮೋರೆ ಪ್ರಾಸ್ತಾವಿಕವಾಗಿ ಮಾತನಾಡಿ ಉದೇಶಗಳನ್ನು ವಿವರಿಸಿದರು.
ಸಮಾರಂಭದಲ್ಲಿ ದಾಲ್ಮೀಯಾ ಸಿಮೆಂಟ್‍ನ ಕಾರ್ಖಾನೆಯ ಅಧಿಕಾರಿಗಳಾದ ಮನೀಶ ಮಹೇಶ್ವರ, ಧನಂಜಯ ಕುಲಕರ್ಣಿ, ರಮೇಶ ಮಳಲಿ, ಮಲ್ಲೇಶ ಕುಂಬಾರ, ಸಮ್ರಾಟ ಐಟಿಐ ಕಾಲೇಜಿನ ಪ್ರಾಚಾರ್ಯ ಲೋಕೆಶ ಜಾಧವ ಮತ್ತು ಉಪಾನ್ಯಾಸಕರು ಮತ್ತಿತರು ಇದ್ದರು.
ಎಮ್.ಎನ್.ಖಾದ್ರಿ ನಿರೂಪಿಸಿದರು, ಎಲ್.ಕೆ.ತೋಟಗಿ ವಂದಿಸಿದರು.