ಮೂಡಲಗಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಮೂಡಲಗಿ ತಾಲೂಕ ಸಮೀತಿಯ ಕಾರ್ಯಕರ್ತರು ಕೇಂದ್ರ-ರಾಜ್ಯ ಸರ್ಕಾರ ರೈತ ಹಾಗೂ ಕಾರ್ಮಿಕರ ವಿರೋಧಿ ಮಸೂಗಳನ್ನು ವಾಪಸ್ಸ್ ಪಡೆಯಬೇಕೆಂದು ಒತ್ತಾಯಿಸಿ ಪಟ್ಟಣದ ಬಿಒಒ ಕಾರ್ಯಲಯದ ಹತ್ತಿರ ಲಕ್ಷ್ಮಣರಾವ್ ಜಾರಕಿಹೊಳಿ ಉದ್ಯಾನವನದಲ್ಲಿ ಪತ್ರಿಭಟ್ಟಿಸಿ ಮೂಡಲಗಿ ತಾಲೂಕಾ ತಾಪಂ ಹಾಗೂ ತಹಶೀಲ್ದಾರ ಕಛೇರಿಯ ಅಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಸಿಐಟಿಯು ನೀಡಿದ ಅಖಿಲ ಭಾರತ ಮುಷ್ಠರ ಹಿನ್ನಲೆಯಲ್ಲಿ ತಾಲೂಕಿನ ಅಂಗನವಾಡಿ, ಕರ್ನಾಟಕ ರಾಜ್ಯ ಗ್ರಾಪಂ ನೌಕರರು, ಅಕ್ಷರದಾಸೋಹ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರಕ್ಕೆ ನೀಡಿದ ಮನವಿಯಲ್ಲಿ ಎಲ್ಲಾ ಕಾರ್ಮಿಕರ ಸಂಹಿತೆಗಳನ್ನು ರದ್ದುಗೋಳಿಸಬೇಕು, ಕೃಷಿ ಕಾನೂನುಗಳನ್ನು ವಾಪಸ್ಸ್ ಪಡೆಯಬೇಕು, ವಿದ್ಯಯತ್ ಮಸೂದೆ-2020ನ್ನು ಹಿಂದಕ್ಕೆ ಪಡೆಯಬೇಕು, ಎಲ್ಲ ರೀತಿಯ ಖಾಸಗಿಗೀಕರಣವನ್ನು ಕೂಡಲೇ ನಿಲ್ಲಸಬೇಕು, ಬಡ ಕುಟುಂಬದ ಪ್ರತಿಯೋಬ್ಬರಿಗೂ ಪ್ರತಿ ತಿಂಗಳು 10 ಕೆ.ಜಿ ಆಹಾರ ಧನ್ಯಾಗಳನ್ನು ಉಚಿತವಾಗಿ ನೀಡಬೇಕು, ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿ, ಹಳೇ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಬೇಕು, ಎಲ್ಲ ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ರಕ್ಷಣಾ ಯಜನೆಗಳನ್ನು ವಿಸ್ತರಿಸಬೇಕು, ಉಚಿತ ಸಾರ್ವತ್ರಿಕ ಆರೋಗ್ಯ ರಕ್ಷಣೆ ಎಲ್ಲರಿಗೂ ಜಾರಿಗೋಳಿಬೇಕು, ಐಸಿಡಿಎಸ್ ಯೋಜನೆಗೆ ಹೆಚ್ಚಿನ ಅನುದಾನ ನೀಡಬೇಕು, ಎಲ್.ಕೆ.ಜಿ ಮತ್ತು ಯು.ಲೆ.ಜಿ ಅಂಗನವಾಡಿ ಕೇಂದ್ರಗಳಲ್ಲಿನಡೆಯಬೇಕು, 21 ಸಾವಿರ ರೂ ಕನಿಷ್ಠ ವೇತನ ಜಾರಿಯಾಗಬೇಕು, ಬಿಸಿ ಅಡುಗಿ ಯೋಜನೆಯನ್ನು ಖಾಸಗೀಕರಣ ಮಾಡಬಾರದು, ಬಿಸಿ ಅಡುಗೆ ನೌಕರರನ್ನು ಖಾಯಂ ಮಾಡಬೇಕು, ಗುತ್ತಿಗೆ ಪದ್ಧತಿ ನಿಲ್ಲಬೇಕು, ಗ್ರಾ.ಪಂ ನೌಕರಿಗೆ ಪೆನಷೆನ್ ಸೌಲಭ್ಯ ಕಲ್ಪಿಸಬೇಕು, ಕಸ ಗುಡಿಸುವ ಮತ್ತು ಸ್ವಚ್ಚತಾಗಾರರಿಗೆ 700 ಜನ ಸಂಖ್ಯೆಗೆ ಒಬ್ಬರಂತೆ ಅನುಮೋದನೆ ನೀಡಬೇಕು, ಬಾಕಿ ಉಳಿದಿರುವ ಎಲ್ಲ ನೌಕರರನ್ನು ಪಂಚತಂತ್ರದಲ್ಲಿ ಅಳವಡಿಸಬೇಕು, ನಿವೃತ್ತಿ ಸೌಲಭ್ಯಕ್ಕಾಗಿ ಗ್ರ್ಯಾಚುಟಿ ಮೊತ್ತ ಸಿಗುವಂತೆ ಹಣಕಾಸಿನ ವ್ಯವಸ್ಥೆ ಮಾಡಬೇಕು ಎಂಬ ಇನ್ನೂ ಅನೇಕ ವಿವಿಧ ಬೇಕೆಗಳನ್ನು ಮನವಿಯಲ್ಲಿ ತಿಳಿಸಿಲಾಗಿದೆ.
ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ತಾಲೂಕಾ ಅಧ್ಯಕ್ಷ ರಮೇಶ ಹೊಳಿ, ಅಂಗನವಾಡಿ ಸಂಘ¸ದ ಜಿಲ್ಲಾಧ್ಯಕ್ಷೆ ದೊಡ್ಡವ್ವಾ ಪೂಜೇರಿ, ಸಿಐಟಿಯು ತಾಲೂಕಾ ಅಧ್ಯಕ್ಷ ಕಲ್ಲಪ್ಪ ಮಾದರ, ಉಪಾಧ್ಯಕ್ಷ ಮಡೆಪ್ಪ ಭಜಂತ್ರಿ, ಬಿಸಿ ಊಟ ಸಂಘಟನೆಯ ಕಾರ್ಯದರ್ಶಿ ಮುನಿರಾ ಮುಲ್ಲಾ ಮಾತನಾಡಿದರು.
ಪ್ರತಿಭಟನಾಕಾರರಿಂದ ತಾಲ್ಲೂಕಾ ಶಿರಸ್ತೆದಾರ ಶಿವಾನಂದ ಬಬಲಿ ಮತ್ತು ತಾ.ಪಂ ಕಾರ್ಯಾಲಯದ ಅಧಿಕಾರಿ ಮಾರುತಿ ಬಳಿಗಾರ ಮನವಿ ಸ್ವೀಕರಿ ತಮ್ಮ ಬೇಡಿಕೆ ªಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಮನವಿಸಲ್ಲಿ ರವಾನಿಸಲ್ಲಾಗುವುದು ಎಂದು.
ಪ್ರತಿಭಟನೆಯಲ್ಲಿ ಕೆಇಬಿ ನೌಕರ ಸಂಘದ ಯುವರಾಜ, ಆನಂದ ಅಂಗಡಿ, ಗ್ರಾ.ಪಂ ನೌಕರ ಸಂಘದ ಕಾರ್ಯದರ್ಶಿ ಬಸವರಾಜ ರೋಡನ್ನವರ, ಉಪಾಧ್ಯಕ್ಷ ಬಸವರಾಜ ಮಿರ್ಜಿ, ಸುಜಾತಾ ಕೊಕಟನ್ನೂರ, ಪಾರ್ವತಿ ಕೌಜಲಗಿ, ಮಾಸಾಬಿ ಡಾಲಾಯ್ತ, ವಿಠ್ಠಲ ಕಾಂಬಳ್ಳೆ, ಮಹಾಂತೇಶ್ ಸಂತಿ, ರೇವಪ್ಪ ಬಿಳ್ಳೂರ, ಆನಂದ ಕೋಟಗಿ, ರಾಜು ದೊಡಮನಿ, ಸಿದ್ದಾರೂಢ ಹುಲಕುಂದ, ಗುಲಬಸಾಬ ಪಿರಜಾದೆ, ಶೇಖರ ತುಬಾಕಿ, ಶ್ರೀಕಾಂತ ಬವಕುರಿ, ರಮೇಶ ಕೆಂಪವ್ವಗೋಳ, ಗುಳಪ್ಪ ಹೊಸೂರ ಮತ್ತು ಅಂಗನವಾಡಿ, ಬಿಸಿ ಊಟ, ಗ್ರಾಮ ಪಂಚಾಯತ ಸೇರಿದಂತೆ ಎಲ್ಲ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದರು.
Home / Recent Posts / ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಮೂಡಲಗಿ ತಾಲೂಕ ಸಮೀತಿಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …