Breaking News
Home / Recent Posts / ಶ್ರೀ ರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನದಲ್ಲಿ ನಿಧಿ ಸಮರ್ಪಣೆಗೊಳಿಸುತ್ತಿರುವುದು. ಸತೀಶ ಕಡಾಡಿ

ಶ್ರೀ ರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನದಲ್ಲಿ ನಿಧಿ ಸಮರ್ಪಣೆಗೊಳಿಸುತ್ತಿರುವುದು. ಸತೀಶ ಕಡಾಡಿ

Spread the love

ಮೂಡಲಗಿ: ಕೋಟ್ಯಾನು ಕೋಟಿ ಹಿಂದೂಗಳ ಸಂಕಲ್ಪಗಳಾಗಿರುವ ರಾಮ ಮಂದಿರ ನಿರ್ಮಾಣ ಕಾರ್ಯ ದೇಶದ ಆತ್ಮಗೌರವದ ಸಂಕೇತವಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಹೇಳಿದರು.
ಕಲ್ಲೋಳಿ ಪಟ್ಟಣದ ರವಿವಾರ ಜ.17 ರಂದು ಹನುಮಂತ ದೇವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಶ್ರೀ ರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಭವ್ಯ ಶ್ರೀರಾಮ ಮಂದಿರವನ್ನು ಹಿಂದೂ ಭಾಂದವರೆಲ್ಲ ಕೂಡಿಕೊಂಡು ನಿರ್ಮಿಸುವ ಮೂಲಕ ಹಿಂದೂ ಸಮಾಜ ಜಾಗೃತಗೊಂಡು ಒಗ್ಗಟಿನಿಂದ ರಾಮರಾಜ್ಯ ನಿರ್ಮಿಸುವ ಸಂಕಲ್ಪ ಪೂರ್ಣಗೊಳಿಸಬೇಕಾಗಿದೆ ಎಂದರು. ವಿಶ್ವ ಹಿಂದೂ ಪರಿಷತ್, ಆರ್.ಎಸ್.ಎಸ್ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಹಿಂದೂ ಸಮಾಜ ಸಹಾಯ ಸಹಕಾರ ನೀಡಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸಹದೇವ ಖಾನಾಪೂರ, ಬಸವರಾಜ ಕಡಾಡಿ, ಈರಣ್ಣ ಮುನ್ನೊಳಿಮಠ, ಅಪ್ಪಾಸಾಬ ಮಳವಾಡ, ಬೋಜರಾಜ ಬೆಳಕೂಡ, ಮಹಾಂತೇಶ ಮಳವಾಡ, ಹಣಮಂತ ಕಲಕುಟ್ರಿ, ಪರಪ್ಪ ಗಿರೆಣ್ಣವರ, ಶಿವಾನಂದ ಬಡಿಗೇರ, ಪ್ರಕಾಶ ಪತ್ತಾರ, ಶಂಕರ ಕೌಜಲಗಿ, ರಮೇಶ ಸಣ್ಣಮನಿ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.


Spread the love

About inmudalgi

Check Also

ರಂಗಭೂಮಿ ಮತ್ತು ಜಾನಪದ ಕಲೆ ನಿತ್ಯ ನೂತನವಾಗಿದೆ : ಶಿವಪುತ್ರ ಪರಮಾನಟ್ಟಿ

Spread the love ಬೆಟಗೇರಿ:ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಮಾತ್ರ ರಂಗಭೂಮಿ ಮತ್ತು ಬೈಲಾಟದ ಕಲೆಗಳನ್ನು ಕಾಣಬಹುದಾಗಿದೆ. ಜಾನಪದ ನಮ್ಮ ಸಂಸ್ಕøತಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ