ಪಾಲಕರು ಕರೊನಾ ಭಯದಿಂದ ಹೊರಬನ್ನಿ-ಕಡಾಡಿ
ಮೂಡಲಗಿ: ಕರೊನಾ ಭಯದಿಂದ ಹೊರಬಂದು ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ಮೂಲಕ ಶಿಕ್ಷಣ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಹೇಳಿದರು.
ಸಮೀಪದ ನಾಗನೂರ ಪಟ್ಟಣದ ಶತಮಾನ ಕಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ಜ.18 ಭೇಟಿ ನೀಡಿ ವಿದ್ಯಾಗಮ ಕಾರ್ಯಕ್ರಮ ವೀಕ್ಷಣೆ, ಮಕ್ಕಳೊಂದಿಗೆ ಸಂವಾದ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು ದೇಶದಲ್ಲಿ ಅತಿ ದೊಡ್ಡ ಕೋವಿಡ್-19 ಲಸಿಕಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಚಾಲನೆ ನೀಡಿದ್ದಾರೆಂದರಲ್ಲದೇ ನಿರಂತರ ಶ್ರಮಿಸಿದ ಸಂಶೋಧಕರು, ಕೋವಿಡ್ ವಾರಿಯರ್ಸ್ ಕಾರ್ಯವನ್ನು ಶ್ಲಾಘಿಸಿದರು.
ದೇಶವ್ಯಾಪಿ ಅಭಿಯಾನ ಯಶಸ್ವಿಯಾಗಲಿ, ಭಾರತ ಕೊರೊನಾ ಮುಕ್ತವಾಗಲಿ ಎಂದರು. ಮಕ್ಕಳೊಂದಿಗೆ ಸಂವಾದ ನಡೆಸಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ವಿದ್ಯಾರ್ಥಿಗಳು ಕರೊನಾ ಭಯದಿಂದ ತಾವು ಕೂಡ ಹೊರಬಂದು ಶಾಲಾ ಚಟುವಟಿಕೆಗಳಲ್ಲಿ ದೈರ್ಯದಿಂದ ಭಾಗವಹಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸತೀಶ ಕಡಾಡಿ, ರಾಮಣ್ಣ ಹುಕ್ಕೇರಿ, ಯಲ್ಲಪ್ಪಾ ಕಪ್ಪಲಗುದ್ದಿ, ಪ್ರಧಾನ ಗುರುಗಳಾದ ಬಿ.ಬಿ. ಸಸಾಲಟ್ಟಿ, ಕೆ.ಬಿ. ಪಾಸಪ್ಪಗೋಳ, ಎನ್. ಆಯ್. ಕೊರಿ, ಪಿ.ಡಿ ಅಳಗೋಡೆ, ಎಸ್.ಬಿ ಹಿರೇಮಠ ಸೇರಿದಂತೆ ಅನೇಕ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.