ಮೂಡಲಗಿ ತಾಲ್ಲೂಕು ಅಸೋಸಿಯೇಶನ್‍ದ ನೂತನ ಪದಾಧಿಕಾರಿಗಳನ್ನು ಕಲಾವಿದರು ಸನ್ಮಾನಿಸಿದರು
ಪ್ರೆಸ್ ಅಸೋಸಿಯೇಶನ್ ಪದಾಧಿಕಾರಿಗಳ ಸನ್ಮಾನ
‘ಕಲಾವಿದರ ಕಲೆ ಮತ್ತು ಹೃದಯ ಶ್ರೀಮಂತವಾದದ್ದು’
ಮೂಡಲಗಿ: ‘ಕಲಾವಿದರು ಆರ್ಥಿಕವಾಗಿ ಬಡವರಾಗಿದ್ದರೂ ಸಹ ಅವರು ನಂಬಿರುವ ಕಲೆ ಮತ್ತು ಹೃದಯವು ಶ್ರೀಮಂತವಾಗಿರುತ್ತದೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.
ಇಲ್ಲಿಯ ಮೂಡಲಗಿ ತಾಲ್ಲೂಕು ಪ್ರೆಸ್ ಅಸೋಸಿಯೇಶನ್‍ಗೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳಿಗೆ ಸ್ಥಳೀಯ ಕಲಾವಿದರು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದ ಅವರು ಕಲೆ, ಸಾಹಿತ್ಯದಿಂದ ನಾಡಿನ ಸಂಸ್ಕøತಿ ಬೆಳೆಯುತ್ತದೆ ಎಂದರು.
ಮೂಡಲಗಿಯ ಭಾಗದಲ್ಲಿ ಹೆಚ್ಚು ಪ್ರಚಲಿತವಿರುವ ಸಿದ್ದಿ ಸೋಗು, ಗೋಂದಳಿ ಕಲೆ, ಭಜನೆ, ಪುರವಂತ ಕಲೆ, ಬಯಲಾಟ, ವೀರಗಾಸೆ, ದಟ್ಟಿ ಕುಣಿತ ಸೇರಿದಂತೆ ವಿವಿಧ ಕಲೆಗಳು ಮರೆಯಾಗುತ್ತಲಿವೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯವರು ಗ್ರಾಮೀಣ ಭಾಗದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಕಲೆಗಳನ್ನು ಉಳಿಸಬೇಕು ಮತ್ತು ಕಲಾವಿದರನ್ನು ಬೆಳೆಸಬೇಕು ಎಂದರು.
ಪತ್ರಕರ್ತರನ್ನು ಸಮಾಜವು ಗಮನಿಸುತ್ತಿರುತ್ತದೆ. ಎಲ್ಲಿಯೂ ಚ್ಯುತಿ ಬಾರದಂತೆ ಪತ್ರಿಕಾ ಧರ್ಮವನ್ನು ಪಾಲಿಸಿಕೊಂಡು ಪತ್ರಕರ್ತರು ಕಾರ್ಯಮಾಡಬೇಕು ಎಂದರು.
ಪ್ರೆಸ್ ಅಸೋಸಿಯೇಶನ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ ಮಾತನಾಡಿ ಪತ್ರಕರ್ತರ ಸಂಘದ ಬೆಳವಣಿಗೆಗೆ ಎಲ್ಲರ ಸಹಕಾರ ಅವಶ್ಯವಿದೆ. ಸಮಾಜದ ಬೆಳವಣಿಗೆಯಲ್ಲಿ ಪತ್ರಕರ್ತರ ಪಾತ್ರ ಮಹತ್ವದಾಗಿದೆ. ಎಲ್ಲರೂ ಶ್ರದ್ಧೆಯಿಂದ ಕೆಲಸ ಮಾಡಿ ಸಮಾಜದಲ್ಲಿ ಉತ್ತಮ ಹೆಸರು ಪಡೆದುಕೊಳ್ಳಬೇಕು ಎಂದರು.
ಮೂಡಲಗಿಯ ಇಮಾಮಸಾಬ ಜಾತಿಗಾರ ಸಿದ್ದಿ ಕಲಾ ತಂಡದ ಅಧ್ಯಕ್ಷ ಚುಟುಕುಸಾಬ ಜಾತಿಗಾರ, ಭಜನಾ ಕಲಾವಿದ ಬಸಪ್ಪ ಮೇಲಾನಟ್ಟಿ, ಗೋಂದಳಿ ಕಲಾವಿದ ನಾಗೇಂದ್ರ ಮಾನೆ, ಹುಸೇನಸಾಬ ಮನಗೂಳಿ, ಸೈಫನ್‍ಸಾಬ ಮಂಟೂರ, ಇನ್ನೂಸ ನಾಗರಾಳ ಇವರು
ಪ್ರೆಸ್ ಅಸೋಸಿಯೇಶನ್ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ, ಉಪಾಧ್ಯಕ್ಷ ಅಲ್ತಾಫ್ ಹವಾಲ್ದಾರ್, ಪ್ರಧಾನ ಕಾರ್ಯದರ್ಶಿ ಸುಭಾಷ ಗೊಡ್ಯಾಗೋಳ, ಖಾಜಾಂಚಿ ಮಹಾದೇವ ನಡುವಿನಕೇರಿ, ಸಹ ಕಾರ್ಯದರ್ಶಿ ಶಿವಾನಂದ ಹಿರೇಮಠ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿದರು.
ಹಿರಿಯ ಪತ್ರಕರ್ತ ವಿ.ಎಚ್. ಬಾಲರಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಶಿವಾನಂದ ಮರಾಠೆ, ಎಸ್.ಎಂ. ಚಂದ್ರಶೇಖರ, ಮಂಜುನಾಥ ರೇಳೆಕರ ಇದ್ದರು.