ಬೆಟಗೇರಿ:ಬೆಂಗಳೂರಿನ ನಮ್ಮ ಚಾಲಕರ ಟ್ರೆಡ್ ಯೂನಿಯನ್ ಇದರ ಕೌಜಲಗಿ ಗ್ರಾಮೀಣ ಘಟಕದ ಉದ್ಘಾಟನೆ ಸಮಾರಂಭ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ ವಿಠಲ ಬೀರದೇವರ ದೇವಸ್ಥಾನ ಆವರಣದಲ್ಲಿ ಶನಿವಾರ ಜ.23 ರಂದು ನಡೆಯಿತು.
ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಜ್ಯೋತಿ ಪ್ರಜ್ವಲಿಸುವುದರ ಮೂಲಕ ಕೌಜಲಗಿ ಗ್ರಾಮೀಣ ಘಟಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸ್ಥಳೀಯ ವಿಠಲ ಬೀರದೇವರ ದೇವಸ್ಥಾನದ ವಿಠಲ ದೇವಋಷಿ ಸಾನಿಧ್ಯ, ಬೆಂಗಳೂರಿನ ನಮ್ಮ ಚಾಲಕರ ಟ್ರೆಡ್ ಯೂನಿಯನ್ ಅಧ್ಯಕ್ಷ ಸೋಮಶೇಖರ ಕೆ. ಅಧ್ಯಕ್ಷತೆ ವಹಿಸಿದ್ದರು.
ಕುಲಗೋಡ ಪೊಲೀಸ್ ಠಾಣೆ ಪಿಎಸ್‍ಐ ಹನಮಂತ ನರಳೆ, ನಚಾಟ್ರೆಯೂ ಕೌಜಲಗಿ ಘಟಕ ಅಧ್ಯಕ್ಷ ಪ್ರಕಾಶ ಹುಚ್ಯಾಡಿ, ರಾಮದುರ್ಗ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ರಮೇಶ ಅಣ್ಣಿಗೇರಿ, ರಾಮಣ್ಣ ಮಹಾರಡ್ಡಿ, ಅಜ್ಜಪ್ಪ ಗಿರಡ್ಡಿ, ನೀಲಪ್ಪ ಕೇವಟಿ, ನಚಾಟ್ರೆಯೂ ಕೌಜಲಗಿ ಘಟಕದ ಪದಾಧಿಕಾರಿಗಳು, ಸದಸ್ಯರು, ಸೇರಿದಂತೆ ಗ್ರಾಪಂ ಸದಸ್ಯರು, ಗಣ್ಯರು, ರಾಜಕೀಯ ಮುಖಂಡರು, ಸ್ಥಳೀಯರು ಇದ್ದರು.
