ಕೊರೊನಾ ಭೀತಿಗೆ ಮನೆ ಸೇರಿದ ಜನ, ಸಂಕೇಶ್ವರ ನಗರಕ್ಕೆ ಬಂದ ಕಾಡು ಎಮ್ಮೆಗಳು..!
ಸಂಕೇಶ್ವರ : ಕೊರೊನಾ ಭೀತಿ ಹಿನ್ನೆಲೆ ಇಡೀ ದೇಶವೇ ಲಾಕ್ಡೌನ್ ಆಗಿದೆ. ಸರ್ಕಾರದ ಆದೇಶದ ಮೇರೆಗೆ ಜನ ಮನೆಯಿಂದ ಹೊರಬರುತ್ತಿಲ್ಲ. ಆದರ್ರೇ ಕಾಡು ಎಮ್ಮೆಗಳು ನಿರಾತಂಕವಾಗಿ ನಗರದ ರಸ್ತೆಯಲ್ಲಿ ಓಡಾಡುತ್ತಿವೆ.

ಸಂಕೇಶ್ವರ ನಗರದ ಪ್ರದೇಶದಲ್ಲಿನ ರಸ್ತೆಯಲ್ಲಿ ಕಾಡು ಎಮ್ಮೆಗಳು ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದೆ.
ನಿನ್ನೆ ನಗರದ ಸಮೀಪದ ಅಂಕಲಿ ಗ್ರಾಮದಲ್ಲಿ ಕಾಣಿಸಿಕೊಂಡ ಕಾಡು ಎಮ್ಮೆಗಳು ಸುಮಾರು ಎಂಟು ಇವೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದರು. ಈಗ ನಗರದೆಲ್ಲೆಡೇ ಮೂರು ಕಾಡು ಎಮ್ಮೆಗಳು ಮಾತ್ರ ರಸ್ತೆಯಲ್ಲಿ ಸುತ್ತುತ್ತಿದ್ದು ಜನರಲ್ಲಿ ಆತಂಕವನ್ನು ಉಟುಮಾಡಿವೆ.ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
IN MUDALGI Latest Kannada News