ಮೂಡಲಗಿ: ಗ್ರಾಮ ಪಂಚಾಯತಗಳು ಲೋಕಸಭೆ ಇದ್ದಂತೆ, ಗ್ರಾಮ ಪಂಚಾಯತಗಳನ್ನು ಮಾದರಿ ಗ್ರಾಮಗಳನ್ನಾಗಿ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ನೂತನ ಗ್ರಾಮ ಪಂಚಾಯತ ಸದಸ್ಯರಿಗೆ ಕಿವಿ ಮಾತು ಹೇಳಿದರು.
ಕಲ್ಲೋಳಿ ಪಟ್ಟಣದಲ್ಲಿ ಸೋಮವಾರ ಜ.25 ರಂದು ರಾಜ್ಯಸಭಾ ಸಂಸದರ ಮನೆಗೆ ಕುಲಗೋಡ ಗ್ರಾಮ ಪಂಚಾಯತ ಸದಸ್ಯರು ಭೇಟಿ ನೀಡಿದ ಸಂದರ್ಭದಲ್ಲಿ ನೂತನ ಗ್ರಾಮ ಪಂಚಾಯತ ಸದಸ್ಯರನ್ನು ಅಭಿನಂದಿಸಿ, ಸನ್ಮಾನಿಸಿ ಮಾತನಾಡಿದ ಈರಣ್ಣ ಕಡಾಡಿ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮ ಅಭಿವೃದ್ದಿಗಾಗಿ ಹಾಗೂ ಜನ ಸಾಮಾನ್ಯರ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಗ್ರಾಮ ಪಂಚಾಯತಗಳಿಗೆ ನೀಡುತ್ತಿವೆ. ಅವುಗಳನ್ನು ಕಾರ್ಯರೂಪಕ್ಕೆ ತರುವು ನೂತನ ಗ್ರಾಮ ಪಂಚಾಯತ ಸದಸ್ಯರ ಕರ್ತವ್ಯವಾಗಿದೆ ಎಂದರಲ್ಲದೇ ಪ್ರತಿಯೊಂದು ಯೋಜನೆಗಳನ್ನು ಜನರಿಗೆ ಮುಟ್ಟುವಂತೆ ನೋಡಿಕೊಳ್ಳುವುದು ತಮ್ಮ ಜವಾಬ್ದಾರಿಯಾಗಿದೆ, ಜನಸಾಮಾನ್ಯರು ಕೂಡಾ ಸರ್ಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಮಾದರಿ ಗ್ರಾಮ ಪಂಚಾಯತಗಳನ್ನಾಗಿ ಮಾಡಬೇಕೆಂದು ಕರೆ ನೀಡಿದರು.
ಸುಭಾಸ ವಂಟಗೂಡಿ, ಬಸನಗೌಡ ಪಾಟೀಲ, ಅಶೋಕ ನಾಯಕ, ಅರಭಾವಿ ಮಂಡಲ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತ ಸದಸ್ಯ ತಮ್ಮಣ್ಣ ದೇವರ, ಸತೀಶ ವಂಟಗೂಡಿ, ರಾಮಣ್ಣ ಬೈರನಟ್ಟಿ, ಪ್ರಶಾಂತ ವಂಟಗೂಡಿ, ಭೀಮಶಿ ಪೂಜೇರಿ, ಲಕ್ಷ್ಮೀಬಾಯಿ ಬಾಗಿಮನಿ, ಶೋಭಾ ಪೂಜೇರಿ, ಶಂಕರ ಹಾದಿಮನಿ, ಸದಾಶಿವ ಗುಡುಗುಡಿ ಸೇರಿದಂತೆ ಗ್ರಾಮ ಮುಂಖಡರ ಉಪಸ್ಥಿತರಿದ್ದರು.
