ಮೂಡಲಗಿ : ಪ್ರಜಾರಾಜ್ಯವೆಂದರೆ ಪ್ರಜೆಗಳಿಗಾಗಿ, ಪ್ರಜೆಗಳಿಗೊಸ್ಕರ, ಪ್ರಜೆಗಳಿಂದಲೇ ನಡೆಯುವ ಸಾಮ್ರಾಜ್ಯ ಇಲ್ಲಿ ಪ್ರಜೆಗಳೆ ದೇವರು. ತಮಗೆ ಎಂಥ ಆಡಳಿತ ಬೇಕೋ ಅಂಥವರನ್ನು ಆರಿಸುವ ಸ್ವಾತಂತ್ರ್ಯ ಪ್ರಜೆಗಳಿಗಿದೆ ಎಂದು ಪಿಎಸ್‍ಐ ಹಚ್.ವಾಯ್.ಬಾಲದಂಡಿ ಎಂದು ಹೇಳಿದರು.
ಅವರು ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಮತ್ತು ಎಲ್.ವಾಯ್. ಅಡಿಹುಡಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ದ್ವಜಾರೋಹಣ ಕಾರ್ಯಕ್ರಮ ನೇರವೆರಿಸಿ ಮಾತನಾಡುತ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಒಂದು ಮತ್ತೊಂದರ ಮೇಲೆ ಸವಾರಿ ಮಾಡದಂತೆ, ಒಬ್ಬರು ಇನ್ನೊಬ್ಬರನ್ನು ಸರಳವಾಗಿ ಕಿತ್ತೊಗೆಯದಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಪೂಜಾ ಕಾರ್ಯಕ್ರಮ ನೆರವೇರಿಸಿ ಬಿ.ಬಿ. ಹಂದಿಗುಂದ ಮಾತನಾಡುತ ಭಾರತೀಯ ಪ್ರಜೆಗಳಾದ ನಾವು ಭಾರತ ಮಾತೆಯಲ್ಲಿ ಪ್ರಾತಿಸೋನ “ನಮ್ಮನ್ನು ಆಳುವ ರಾಜಕಾರಣೀಗಳಿಗೆ, ಪ್ರಜೆಗಳಿಗೊಸ್ಕರ ಪ್ರಾಮಾಣಿಕವಾಗಿ ಸೇವೆ ಮಾಡುವ ಶಕ್ತಿ ನಿಡಲೆಂದು”, ಗಣರಾಜ್ಯೋತ್ಸವ ಎಲ್ಲರಿಗೂ ಹರುಷ ತರಲಿ. ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಶ್ರೀಎಲ್,ವಾಯ್,ಅಡಿಹುಡಿ. ಈಶ್ವರ ಕಂಕಣವಾಡಿ. ಹಣಮಂತ ಕಂಕಣವಾಡಿ. ಅಜ್ಜಪ್ಪ ಕಂಕಣವಾಡಿ. ಹಾಲಪ್ಪ ಅಂತರಗಟ್ಟಿ. ಪ್ರಧಾನ ಗುರುಮಾತೆಯಾದ ಪಲ್ಲವಿ, ಭಂಡಾರಿ ಶಶಿಧರ ಆರ್ಯಾದ. ರಾಮಣ್ಣ ಮಂಟೂರ. ಮಂಜುನಾಥ ಕುಂಬಾರ. ಸಿದ್ರಾಮ ಡೊಳ್ಳಿ. ಮಾಹಾಂತೇಶ ಕೊಟಬಾಗಿ. ರಾಘು ಗಂಗನ್ನವರ. ಹಾಗೂ ಆರ್ಮಿ ಮತ್ತು ಪೋಲಿಸ್ ಶಿಭಿರಾರ್ಥಿಗಳು ಉಪಸ್ಥಿತರಿದ್ದರು.
