ಮೂಡಲಗಿ : ಸಂವಿಧಾನವೇ ಧರ್ಮಗ್ರಂಥ ನನ್ನ ಪ್ರಕಾರ ಸಂವಿಧಾನವೆಂದರೆ ಈ ದೇಶದ ಧರ್ಮಗ್ರಂಥ. ಅದು ನಿರ್ದಿಷ್ಟ ಧಾರ್ಮಿಕ ಸ್ವರೂಪಕ್ಕೆ ಸೀಮಿತವಾಗಿಲ್ಲವಾದರೂ ನಮ್ಮ ಸಂಸ್ಕøತಿ, ಸಂಪ್ರದಾಯ, ಯಾವುದು ಮಾನ್ಯ, ಯಾವುದು ಅಮಾನ್ಯ ಎಂಬೆಲ್ಲದರ ಕುರಿತಾದ ಮಾರ್ಗದರ್ಶಿ ಸೂತ್ರ. ಎಂದು ಸ್ಥಳಿಯ ದಿವಾಣಿ ಹಾಗೂ ಜೆ.ಎಮ್.ಎಫ್.ಸಿ. ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಶ್ರೀ ಸುರೇಶ.ಎಸ್,ಎನ್, ಹೇಳಿದರು.
ಅವರು ದಿವಾಣಿ ಹಾಗೂ ಜೆ.ಎಮ್.ಎಫ್.ಸಿ. ನ್ಯಾಯಾಲಯದಲ್ಲಿ ಆಚರಿಸಿದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ದ್ವಜಾರೋಹಣ ಕಾರ್ಯಕ್ರಮ ನೇರವೆರಿಸಿ ಮಾತನಾಡುತ ಈ ರೀತಿಯ ಧಾರ್ಮಿಕ ಸಂವಿಧಾನಗಳು ಭಾರತದಲ್ಲಿ ಪುರಾತನ ಕಾಲದಿಂದಲೂ ಇದ್ದವು. ಜನರ ಬದುಕನ್ನು ನಿರ್ಧರಿಸುವ ಹಾಗೂ ಆಡಳಿತ ವ್ಯವಸ್ಥೆಗೆ ಚೌಕಟ್ಟನ್ನು ಕಟ್ಟಿಕೊಡುವ ಪ್ರಯತ್ನಗಳು ಅಲ್ಲಿದ್ದವು ಎಂದರು.
ಪೂಜಾ ಕಾರ್ಯಕ್ರಮ ನೆರವೇರಿಸಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಕೆ.ಪಿ.ಮಗದುಮ ಮಾತನಾಡುತ ಸಂವಿಧಾನದ ಆಶಯ ‘ಏಕರೂಪ ನಾಗರಿಕ ಸಂಹಿತೆ’. ಭಾರತದ ಪ್ರಜೆಗಳಾದ ನಾವೆಲ್ಲರೂ ಒಂದು ನಮಗೆಲ್ಲರಿಗೂ ಸಮಾನ ಸಮಾಜಿಕ, ಆರ್ಥಿಕ, ರಾಜಕೀಯ ನ್ಯಾಯದ ಜತೆಗೆ ವಿಚಾರ. ಅಭಿವ್ಯಕ್ತಿ. ನಂಬಿಕೆ. ಧಾರ್ಮಿಕ, ಆಚರಣೆಗಳಲ್ಲಿ ಸಮಾನ ಅವಕಾಶ ಇರಬೇಕೆಂದು ಸಂವಿಧಾನದ ಪೂರ್ವಪೀಠಿಕೆಯಲ್ಲೇ ಹೇಳಾಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸರಕಾರಿ ಅಭಿಯೋಜಕರಾದ ಅಮರ. ಗಾಳಿ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷರಾದ ಎಸ್.ವಾಯ್. ಹೊಸಟ್ಟಿ ಪ್ರಧಾನ ಕಾರ್ಯದರ್ಶಿಗಳಾದ ಎಲ್.ವಾಯ್.ಅಡಿಹುಡಿ ಸಹಕಾರ್ಯದರ್ಶಿ ಆರ್.ಎಸ್. ರೊಡನ್ನವರ. ಖಂಜಾಚಿ ವಿ.ಕೆ. ಪಾಟೀಲ್. ಹಿರಿಯ ನ್ಯಾಯವಾದಿಗಳಾದ ಆರ್.ಆರ್. ಬಾಗೋಜಿ. ಕೆ.ಎಲ್.ಹುಣಶ್ಯಾಳ ಯು.ಆರ್. ಜೋಕಿ. ವಿ.ವಿ.ನಾಯಕ. ಎಸ್,ಎಲ್, ಪಾಟೀಲ್. ಐ.ಎಮ್.ಹಿರೇಮಠ. ಪಿ.ಎಸ್.ಮಲ್ಲಾಪೂರ. ಬಿ.ವಾಯ್. ಹೆಬ್ಬಾಳ. ಎಸ್.ವಾಯ್.ಸಣ್ಣಕ್ಕಿ ಆರ್.ಆರ್.ಕವಲ್ದಾರ. ಎ.ಎಸ್. ಆನಿಕಿಂಡಿ ವಾಯ್.ಎಸ್. ಖಾನಟ್ಟಿ ಹಾಗೂ ನ್ಯಾಯಾಲಯದ ಸಿಂಬ್ಬಂದಿಗಳು ಉಪಸ್ಥಿತರಿದ್ದರು.
Home / Recent Posts / ಮುಡಲಗಿಯ ದಿವಾಣಿ ಹಾಗೂ ಜೆ.ಎಮ್.ಎಫ್.ಸಿ. ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಶ್ರೀ ಸುರೇಶ.ಎಸ್,ಎನ್, ಅವರಿಂದ ದ್ವಜಾರೋಹಣ
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …