ಬೆಟಗೇರಿ:ಸಮೀಪದ ಮಮದಾಪೂರ ಚಿಂತಾಮಣಿ ಪಾವಟೆ ಹೈಸ್ಕೂಲ್ ಶಾಲೆಗೆ ಅವಶ್ಯಕವಾದ ಝರಾಕ್ಸ್, ಪ್ರಿಂಟರ್ ಸೇರಿದಂತೆ ವಿವಿಧ ಯಂತ್ರೋಪಕರಣ ಮತ್ತು ಕೆಲವು ಉಪಕರಣಗಳನ್ನು 1996-97ನೇ ಸಾಲಿನ ಶಾಲೆಯ ಎಸ್ಸೆಸೆಲ್ಸಿ ಹಳೆಯ ವಿದ್ಯಾರ್ಥಿಗಳ ಗೆಳೆಯರ ಬಳಗ ವತಿಯಿಂದ ಹಾಗೂ ಹೈಸ್ಕೂಲಿನ ಹಳೆಯ ಕೆಲವು ವಿದ್ಯಾರ್ಥಿಗಳು ಜ.26ರಂದು ಶಾಲೆಗೆ ದೇಣಿಗೆ ನೀಡಿದರು.
ಹೈಸ್ಕೂಲ್ ಮುಖ್ಯೋಪಾಧ್ಯಯ ಅಶೋಕ ತೋಟಗಿ, ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್.ಕಮತ ಅವರು ವಿವಿಧ ಯಂತ್ರೋಪಕರಣ ಸೇರಿದಂತೆ ಕೆಲವು ಉಪಕರಣಗಳನ್ನು ದೇಣಿಗೆ ನೀಡಿದ ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಹೈಸ್ಕೂಲ್ ಶಾಲೆಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿದರು.
ಕಾರ್ಯದರ್ಶಿ ಎಸ್.ಎಸ್.ಕೇತನ್ನವರ, ಡಿ.ಐ.ಮುಲ್ತಾನಿ, ಎಂ.ಎಸ್.ಜನ್ಮಟ್ಟಿ, ಡಾ.ರಮೇಶ ದೇಮಶೆಟ್ಟಿ, ಅಶೋಕ ಗೋಪಾಳಿ, ರವಿ ದೇಮಶೆಟ್ಟಿ, ಎಂ.ಬಿ.ಹಾದಿಮನಿ, ಸಿ.ಎಮ್.ಪಟಾತ, ಸ್ಥಳೀಯ ಗ್ರಾಪಂ ನೂತನ ಸದಸ್ಯರು, ಹೈಸ್ಕೂಲಿನ ಹಳೆಯ ವಿದ್ಯಾರ್ಥಿಗಳು, ಶಾಲೆಯ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ, ಶಿಕ್ಷಣಪ್ರೇಮಿಗಳು, ಇತರರು ಇದ್ದರು.