ಮಹಾಲಕ್ಷ್ಮೀ ಸೊಸಾಯಿಟಿಗೆ ಅಧ್ಯಕ್ಷ -ಉಪಾಧ್ಯಕ್ಷ ಅವಿರೋಧ ಆಯ್ಕೆ
ಮೂಡಲಗಿ: ಪಟ್ಟಣದ ಪ್ರತಿಷ್ಠತಿ ಸಹಕಾರಿ ಸಂಸ್ಥೆಯಗಳಲ್ಲಿ ಒಂದಾದ ಶ್ರೀ ಮಹಾಲಕ್ಷ್ಮೀ ಅರ್ಬನ್ ಕೊ-ಆಪ್ ಕ್ರೆಡಿಟ್ ಸೊಸಾಯಿಟಿಗೆ ಬುಧವಾರ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಅಧ್ಯಕ್ಷರಾಗಿ ಪರಪ್ಪ ಯಲ್ಲಪ್ಪ ಮುನ್ಯಾಳ ಮತ್ತು ಉಪಾಧ್ಯಕ್ಷರಾಗಿ ಪ್ರಕಾಶ ಶಿವಪ್ಪ ನಿಡಗುಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಬೈಲಹೊಂಗಲದ ಎಸ್.ಬಿ.ಬಿರಾದರ ಪಾಟೀಲ ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಸೊಸೈಟಿ ನಿರ್ದೇಶಕರಾದ ಮುತ್ತಪ್ಪ ಭೀಮಪ್ಪ ಈಪ್ಪನ್ನವರ, ಮಹಾದೇವ ಚೆನ್ನಪ್ಪ ಗೋಕಾಕ, ಗೌರವ್ವ ಗಿರಿಗೌಡ ಪಾಟೀಲ, ಶಿವಬಸಪ್ಪ ರಾಮಪ್ಪ ಖಾನಟ್ಟಿ, ಭಾರತಿ ರಮೇಶ ಪಾಟೀಲ, ಸಂತೋಷ ತಮ್ಮಣ್ಣ ಪಾರ್ಶಿ, ಮಲ್ಲಪ್ಪ ಗುರುಪ್ಪ ಗಾಣಿಗೇರ, ವಿದ್ಯಾ ಸುರೇಶ ಮುರಗೋಡ, ಸಾಂವಕ್ಕ ಮುರಗೆಪ್ಪ ಶೆಕ್ಕಿ, ಶೋಭಾ ಮಾನಕು ಕದಂ ಮತ್ತು ಸೊಸೈಟಿ ಪ್ರಧಾನ ಕಾರ್ಯದರ್ಶಿ ಸಿ. ಎಸ್. ಬಗನಾಳ ಮತ್ತಿತರು ಇದ್ದರು.
ನೂತನ ಅಧ್ಯಕ ಮತ್ತು ಉಪಾಧ್ಯಕ್ಷರನ್ನು ಸೊಸೈಟಿಯ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಹೂ ಮಾಲೆ ಹಾಕಿ ಅಭಿನಂದಿಸಿದರು.
IN MUDALGI Latest Kannada News