Breaking News
Home / Recent Posts / ಮಕ್ಕಳು ಬೆಳೆಸಿದಂತೆ ಬೆಳೆಯುವಂತಹ ಗುಣವುಳ್ಳವರು. ಅದ್ದರಿಂದಲೇ ಸಣ್ಣವರಿರುವಾಗಲೇ ಉತ್ತಮ ಗುಣಗಳನ್ನು ಒಳ್ಳೆಯ ಪರಿಸರದಲ್ಲಿ ಬೆಳೆಸಬೇಕು- ಬಿ.ಬಿ. ಹಂದಿಗುಂದ

ಮಕ್ಕಳು ಬೆಳೆಸಿದಂತೆ ಬೆಳೆಯುವಂತಹ ಗುಣವುಳ್ಳವರು. ಅದ್ದರಿಂದಲೇ ಸಣ್ಣವರಿರುವಾಗಲೇ ಉತ್ತಮ ಗುಣಗಳನ್ನು ಒಳ್ಳೆಯ ಪರಿಸರದಲ್ಲಿ ಬೆಳೆಸಬೇಕು- ಬಿ.ಬಿ. ಹಂದಿಗುಂದ

Spread the love

ಮೂಡಲಗಿ : ಮಕ್ಕಳು ಬೆಳೆಸಿದಂತೆ ಬೆಳೆಯುವಂತಹ ಗುಣವುಳ್ಳವರು. ಅದ್ದರಿಂದಲೇ ಸಣ್ಣವರಿರುವಾಗಲೇ ಉತ್ತಮ ಗುಣಗಳನ್ನು ಒಳ್ಳೆಯ ಪರಿಸರದಲ್ಲಿ ಬೆಳೆಸಬೇಕು. ಅವೇ ಗುಣಗಳು ಜೀವನದುದ್ದಕ್ಕೂ ಇದ್ದು ದೇಶದ ಭವಿಷ್ಯವನ್ನು ಉಜ್ಜಲ ಗೊಳಿಸುವ ನಾಗರಿಕರು ನಿರ್ಮಾಣವಾಗುವರು ಎಂದು ಬಿ.ಬಿ. ಹಂದಿಗುಂದ ಹೇಳಿದರು.
ಅವರು ಮಂಜುನಾಥ ಸೈನಿಕ ತರಬೇತಿ ಕೇಂದ್ರ ಹಾಗೂ ಎಲ್.ವಾಯ್.ಅಡಿಹುಡಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮಂಜುನಾಥ ಮೋಟಾರ ಡ್ರೈವಿಂಗ್ ಸೂಲ್ಕ್ ಇವುಗಳ ವಾರ್ಷಿಕೊತ್ಸವ ಸಭೆಯಲ್ಲಿ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡುತ ದೇಶಕ್ಕಾಗಿ ಗಡಿಯನ್ನು ಕಾಯುವ ವೀರ ಯೋಧರಿಗೆ ಪೂರ್ವಭಾವಿ ತರಬೇತಿಯನ್ನು ಕೊಟ್ಟು ಸಾವಿರಾರು ಶಿಭಿರಾರ್ಥಿಗಳು ಈ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ಆರ್ಮಿ ಮತ್ತು ಪೋಲಿಸ್ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಮಂಜುನಾಥ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಸಸಿಗೆ ನೀರು ಹಾಕುವ ಮೂಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮೂಡಲಗಿ ಶಿಕ್ಷಣ ಸಂಸ್ಥಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ ಮಾತನಾಡುತ ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಅಂದಾಗ ಮಾತ್ರ ನಮ್ಮ ಗುರಿಯನ್ನು ನಾವು ಸರಳವಾಗಿ ಮುಟ್ಟಬಹುದು ಎಂದರು
ಉತ್ತರ ಕರ್ನಾಟಕ ಜಾನಪದ ಜಾಣ ಹಾಗೂ ಚಲನ ಚಿತ್ರ ಗಾಯಕ ಶಬ್ಬೀರ ಡಾಂಗೆ ಸ್ಥಳದಲ್ಲಿಯೇ ಕವಿತೇಯನ್ನು ರಚಿಸಿ ಸಂಸ್ಥೆಯ ಬೆಳೆದು ಬಂದ ದಾರಿಯನ್ನು ತಮ್ಮ ಗಾಯನ ಮೂಲಕ ವ್ಯಕ್ತ ಪಡಿಸಿದರು
ಕಾರ್ಯಕ್ರಮದಲ್ಲಿ ಅಯುಬ ಕಲಾರಕೊಪ್ಪ ಮಹಾರಾಜ ಸಿದ್ದು ಐಶ್ವರ್ಯ ತಳವಾರ ಅನೀತಾ ಒಂಟಗೂಡಿ ಬೀಮಶೇನ ದುರದುಂಡಿ ಆಯ್. ಎಮ್. ಹಿರೇಮಠ ಎಸ್.ವಾಯ್.ಸಣ್ಣಕ್ಕಿ ಕಾರ್ಯಕ್ರಮದಲ್ಲಿ ವಿವಿಧ ದೇಶ ಭಕ್ತಿ ಹಾಡುಗಳನ್ನು ಹಾಡಿದರು. ಎಸ್.ಎಲ್.ಜೋಡಟ್ಟಿ ಶಿವಬಸು ಕಂಕಣವಾಡಿ ಶಿವರಾಯ ಕಂಕಣವಾಡಿ ಹನಮಂತ ಕಂಕಣವಾಡಿ ಹಾಲಪ್ಪ ಅಂತರಗಟ್ಟಿ ಈಶ್ವರ ಕಂಕಣವಾಡಿ ರಾಘವೇಂದ್ರ ಕಂಕಣವಾಡಿ ಮಾರುತಿ ಶಿಳನ್ನವರ ಬಸಪ್ಪ ಕಂಕಣವಾಡಿ ಶಿವಬಸು ಮೆಳವಂಕಿ ಸುಭಾಷ ಕಂಕಣವಾಡಿ ಮಲ್ಲಪ್ಪ ಕಂಕಣವಾಡಿ .ಶಶಿಧರ ಆರಾಧ್ಯ ಲಕ್ಮ್ಮಣ ವಾಯ್ ಅಡಿಹುಡಿ. ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ