ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿರಬೇಕಾದರೆ ಕ್ರೀಡೆ ಮುಖ್ಯ: ರೂಪಾ ನಾಯ್ಕ
ಬನವಾಸಿ: ವಿದ್ಯಾರ್ಥಿಗಳಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿರಬೇಕಾದರೆ ಕ್ರೀಡೆ ಮುಖ್ಯ ಎಂದು ಜಿ.ಪಂ ಸದಸ್ಯೆ ರೂಪಾ ನಾಯ್ಕ ಹೇಳಿದರು.
ಅವರು ಬನವಾಸಿ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಕಾರವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯವರು ಮಂಜೂರು ಮಾಡಿದ 2019-20ನೇ ಸಾಲಿನ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡುತ್ತ ವಿದ್ಯಾಥಿಗಳು ಇಲಾಖೆಯೂ ಒದಗಿಸಿದ ಕ್ರೀಡಾ ಉಪಕರಣಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಜೊತೆಗೆ ಓದಿನ ಕಡೆಗೂ ಗಮನಹರಿಸಬೇಕು ಎಂದರು.
ಕಾಲೇಜು ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಸಿದ್ದಲಿಂಗಣ್ಣ ಉಗ್ರಾಣದ ಮಾತಾನಾಡಿ, ಬನವಾಸಿ ಕಾಲೇಜಿನಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು ಸಹಜವಾಗಿ ಅಗತ್ಯವಿರುವ ಭೌತಿಕ ವಸ್ತುಗಳ ಬೇಡಿಕೆಯೂ ಹೆಚ್ಚುತ್ತಿದೆ. ಸರಕಾರ ಮತ್ತು ಸಮಾಜದ ಸಹಾಯದಿಂದ ಅವೆಲ್ಲ ಒದಗಬೇಕಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಎಂ.ಕೆ. ನಾಯ್ಕ್ ಹೊಸಳ್ಳಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾಲೇಜಿನ ಆಸ್ತಿಯ ಸದ್ಬಳಕೆಯ ಜೊತೆಗೆ ರಕ್ಷಣೆಯ ಹೊಣೆಗಾರಿಕೆಯೂ ಇರಬೇಕು ಎಂದರು.
ಕಾರ್ಯಕ್ರಮವನ್ನು ತನುಜಾ ನಾಯ್ಕ ನಿರೂಪಿಸಿದರು. ಉಪನ್ಯಾಸಕ ದೇವೆಂದ್ರ ಹಡಪದ ಸ್ವಾಗತಿಸಿದರು.