ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಬಾಗಿಮನಿ ಉಪಾಧ್ಯಕ್ಷ ಶ್ರೀಪತಿ ಗಣಿ ಅವಿರೋಧ ಆಯ್ಕೆ
ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಮಂಗಳವಾರದಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಲಕ್ಷ್ಮೀಬಾಯಿ ಬಾಗಿಮನಿ, ಉಪಾಧ್ಯಕ್ಷರಾಗಿ ಶ್ರೀಪತಿ ಗಣಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಸ್ಥಳೀಯ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಪುರುಷ ಮಿಸಲಾತಿ ಇದ್ದ ಕಾರಣ ಈ ಎರಡು ಸ್ಥಾನಕ್ಕೆ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಉಭಯ ಸ್ಥಾನದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಅಶ್ವಿನ ಎಚ್ ಜಿ ತಿಳಿಸಿದ್ದಾರೆ.
ಈ ವೇಳೆ ಜಿಪಂ ಸದಸ್ಯ ಗೋವಿಂದ ಕೊಪ್ಪದ ಹಾಗೂ ಪಿ.ಕೆ.ಪಿ.ಎಸ್ ಅಧ್ಯಕ್ಷ ಅಶೋಕ ನಾಯಿಕ. ಮಾಜಿ.ತಾಪಂ ಸದಸ್ಯ ಸುಭಾಸ ವಂಟಗೋಡಿ ಮಾತನಾಡಿ , ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರೂ ಒಂದಾಗಿ ಗ್ರಾಮದ ಸಮಗ್ರ ಅಭಿವೃದ್ಧಿಯತ್ತ ಗಮನಹರಿಸಿ, ಮಾದರಿ ಗ್ರಾಮವನ್ನಾಗಿ ಮಾಡಲು ಪ್ರಯತ್ನಿಸಬೇಕು ಎಂದರು.
ಸಂದರ್ಭದಲ್ಲಿ ನೂತನ ಅಧಕ್ಷೆ,ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಗ್ರಾಮದ ಗಂಗಾಮಾತಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಸನ್ಮಾನ ನಡೆಯಿತು.
ಸಂದರ್ಭದಲ್ಲಿ ಜಿಪಂ ಸದಸ್ಯ ಗೋವಿಂದ ಕೊಪ್ಪದ . ಪಿ.ಕೆ.ಪಿ.ಎಸ್ ಅಧ್ಯಕ್ಷ ಅಶೋಕ ನಾಯಿಕ. ಮಾಜಿ.ತಾಪಂ ಸದಸ್ಯ ಸುಭಾಸ ವಂಟಗೋಡಿ. ಸುನೀಲ ವಂಟಗೋಡಿ. ವೆಂಕಣ್ಣಾ ಚನ್ನಾಳ. ಪ್ರಶಾಂತ ವಂಟಗೋಡಿ. ಬಸನಗೌಡ ಪಾಟೀಲ. ಪಿಡಿಓ ಸದಾಶಿವ ದೇವರ. ಸತೀಶ ವಂಟಗೋಡಿ. ಬಸವರಾಜ ಯಕ್ಸಂಬಿ. ತಮ್ಮಣ್ಣಾ ದೇವರ. ಮಾರುತಿ ಬಾಗಿಮನಿ. ಜಗದೀಶ ಬೆಳಗಲಿ. ರಾಜು ಕೊಪ್ಪದ. ಶಾಂತವೀರ ಅಂಗಡಿ. ಹಾಗೂ ನೂತನ ಗ್ರಾಪಂ ಸದಸ್ಯರು ಹಾಗೂ ಗ್ರಾಪಂ ಸಿಬ್ಬಂದಿ ವರ್ಗ, ಜನಪ್ರತಿನಿಧಿಗಳು ಇದ್ದರು.
IN MUDALGI Latest Kannada News