ಶೈಕ್ಷಣಿಕ ಅಭಿವೃದ್ದಿಯಿಂದ ಗ್ರಾಮಾಭಿವೃದ್ಧಿ ಸಾದ್ಯ
ಮೂಡಲಗಿ: ನಾವೆಲ್ಲರೂ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡುವದರಿಂದ ಪ್ರತಿಯೊಬ್ಬರ ಏಳಿಗೆಯ ಜೊತೆಗೆ ಗ್ರಾಮಾಭಿವೃದ್ದಿಯೂ ಸಾದ್ಯ ಎಂದು ತುಕ್ಕಾನಟ್ಟಿ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಎ.ವ್ಹಿ.ಗಿರೆಣ್ಣವರ ಹೇಳಿದರು.
ತಾಲೂಕಿನ ತುಕ್ಕಾನಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತುಕ್ಕಾನಟ್ಟಿ ನೂತನ ಗ್ರಾಮ ಪಂಚಾಯತಿ ನೂತನ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಮದ್ಯಮವರ್ಗದ ಹಾಗೂ ಕೆಳವರ್ಗದ ಮಕ್ಕಳು ನಮ್ಮ ಸರಕಾರಿ ಶಾಲೆಯಲ್ಲಿ. ಕಲಿಯುತ್ತಿರುವದರಿಂದ, ಸರಕಾರದ ಸೌಲಭ್ಯಗಳ ಜೊತೆಗೆ ಗ್ರಮ ಪಂಚಾಯತಿಯೂ ಕೂಡ ಶಾಲೆಗೆ ಬೇಕಾದ ಅನೇಕ ಮೂಲಬೂತ ಸೌಲಭ್ಯಗಳನ್ನು ಒದಗಿಸಬೇಕಲ್ಲದೇ ಸರಕಾರಿ ಶಾಲೆಗೆ ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಹೆಚ್ಚಾಗುವಂತೆ ಶಿಕ್ಷಕರ ಜೊತೆ ಕೈ ಜೋಡಿಸಬೇಕೆಂದು ಹೇಳಿದರು. ಹಾಗೂ ಪಂಚಾಯತಿಯಿಂದ ಸೌಲಭ್ಯಗಳನ್ನು ಬಡಜನರಿಗೆ ತಲುಪುವಂತೆ ಗ್ರಾಮ ಪಂಚಾಯತ ಸದಸ್ಯರು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.
ಗ್ರಾಮ ಪಂಚಾಯತ ಅಧ್ಯಕ್ಷರಾದ ಕುಮಾರ ಮರ್ದಿ ಮಾತನಾಡಿ ನಾವೆಲ್ಲ ಸರಕಾರಿ ಶಾಲೆಯಲ್ಲಿ ಕಲಿತಿರುವದರಿಂದ ಸರಕಾರಿ ಶಾಲೆಯ ಅಭಿವೃದ್ದಿಗೆ ಬದ್ಧರಾಗಿದ್ದೇವೆ ಎಂದರು.
ಗ್ರಾಮ ಪಂಚಾಯತಿಯ ನೂತನ ಸದಸ್ಯರಾದ ಸುನಂದಾ ಭಜಂತ್ರಿ ಮಾತನಾಡಿ ಪಂಚಾಯತಿ ಹಾಗೂ ಧರ್ಮಸ್ಥಳ ಸ್ವ ಸಹಾಯ ಸಂಘದಿಂದ ಶಾಲೆಗೆ ರಂಗಮಂದಿರ ನೀರ್ಮಿಸಿಕೊಡುವದಾಗಿ ಭರವಸೆ ನೀಡಿದರು.
ಸಮಾರಂಭದಲ್ಲಿ ಗ್ರಾಮ ಪಂಚಾಯತಿ ನೂತನ 24 ಸದಸ್ಯರನ್ನು ಸರಕಾರಿ ಶಾಲೆಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕುಮಾರ ಮರ್ದಿ ಉಪಾದ್ಯಕ್ಷರಾದ ಮಹಾದೇವಿ ಗದಾಡಿ ಗ್ರಾಮ ಪಂಚಾಯತ ಮಾಜಿ ಸದಸ್ಯರಾದ ಅಜ್ಜಪ್ಪ ಮನ್ನಿಕೇರಿ ಭರಮಪ್ಪ ಉಪ್ಪಾರ, ರೈತ ಸಂಘದ ಮಂಜುನಾಥ ಗದಾಡಿ, ಹಾಗೂ ಸೋಮು ಹುಲಕುಂದ ಗುರುನಾಥ ಹುಕ್ಕೇರಿ ಉದ್ದಪ್ಪ ದುರದುಂಡಿ ಹಾಗೂ ಎಲ್ಲ ಗ್ರಾಮ ಪಂಚಾಯತ ಸದಸ್ಯರು ಹಾಗೂ ಶಿಕ್ಷಕರು ಉಪಸ್ಥತರಿದ್ದರು.
ಶಿಕ್ಷಕ ಮಹಾದೇವ ಗೋಮಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಕಿರಣ ಭಜಂತ್ರಿ ವಂದಿಸಿದರು.