Breaking News
Home / Recent Posts / ಭಾರತ ದೇಶ ಸೈನಿಕರ ಶಕ್ತಿ ಏನು ಎಂಬುದು ಪಕ್ಕದ ದೇಶಗಳಿಗೆ ತೋರಿಸಿಕೊಟ್ಟಿದ್ದಾರೆ- ಕ.ಸಾ.ಪ ಅಧ್ಯಕ್ಷ ಸಿದ್ರಾಮ ದ್ಯಾಗನಟ್ಟಿ .

ಭಾರತ ದೇಶ ಸೈನಿಕರ ಶಕ್ತಿ ಏನು ಎಂಬುದು ಪಕ್ಕದ ದೇಶಗಳಿಗೆ ತೋರಿಸಿಕೊಟ್ಟಿದ್ದಾರೆ- ಕ.ಸಾ.ಪ ಅಧ್ಯಕ್ಷ ಸಿದ್ರಾಮ ದ್ಯಾಗನಟ್ಟಿ .

Spread the love

ಮೂಡಲಗಿ : ದೇಶದೊಳಗಿರುವ ನಮ್ಮ ಜನರು ಚೆನ್ನಾಗಿ ಇರಲಿ ಎಂದು ಭಾರತಿ ಗಡಿಭಾಗದಲ್ಲಿ ನಿದ್ದೆ ಮಾಡದೆ ಕೆಲಸ ಮಾಡುವ ಸೈನಿಕರನ್ನು ನಾವು ಸ್ಮರಿಸುವುದು ಎಲ್ಲರ ಕರ್ತವ್ಯವಾಗಿದೆ. ಈಗಾಗಲೇ ಭಾರತ ದೇಶ ಸೈನಿಕರ ಶಕ್ತಿ ಏನು ಎಂಬುದು ಪಕ್ಕದ ದೇಶಗಳಿಗೆ ತೋರಿಸಿಕೊಟ್ಟಿದ್ದಾರೆ ಎಂದು ಕ.ಸಾ.ಪ ಅಧ್ಯಕ್ಷ ಸಿದ್ರಾಮ ದ್ಯಾಗನಟ್ಟಿ ಹೇಳಿದರು
ಅವರು ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಪುಲ್ವಾಮಾದ ಉಗ್ರ ದಾಳಿಯಲ್ಲಿ ಹುತಾತ್ಮರಾದ ಕೇಂದ್ರೀಯ ಮೀಸಲು ಪೋಲೀಸ್ ಪಡೆಯ ಹುತಾತ್ಮ ಯೋಧರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿ ಮಾತನಾಡುತ ದೇಶಕ್ಕಾಗಿ ಮಡಿದ ವೀರಯೋಧರೇ ನಿಮ್ಮ ತ್ಯಾಗ-ಬಲಿದಾನಗಳನ್ನು ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಂಡಿರುತ್ತೇವೆ ಎಂದರು.
ನಿವೃತ ಸೈನಿಕ ವiಹಾವೀರ ಉಂದ್ರಿ ಮಾತನಾಡುತ ನಮ್ಮ ಭದ್ರತಾ ಪಡೆಗಳ ಬಗ್ಗೆ ನಮಗೆ ಹೆಮ್ಮ ಇದೆ ಅವರ ಧೈರ್ಯ ಮತ್ತು ಶೌರ್ಯವು ಯುವಪೀಳಿಗಿಗೆ ಸ್ಫೂರ್ತಿ ನಿಡುತ್ತದೆ. ಸಶಸ್ತ್ರ ಪಡೆಗಳು ನಮ್ಮ ತಾಯಿನಾಡನ್ನು ರಕ್ಷಿಸುವ ಸಂಪೂರ್ಣ ಸಾಮಥ್ರ್ಯ ಹೊಂದಿವೆ ಎಂದು ಹೇಳಿದರು
ಮಾಲತಿ ಆಶ್ರಿತ ಮಾತನಾಡಿ ಈ ದಾಳಿಯನ್ನು ಎಂದಿಗೂ ಮರೆಯಲಾಗದು ಶೌರ್ಯವು ನಮ್ಮ ರಕ್ತದಲ್ಲಿಯೇ ಇದೆ. ಉಗ್ರರ ಆಟಾಟೋಪಗಳಿಗೆ ನಮ್ಮ ಪಡೆ ತಕ್ಕ ಎದಿರೇಟು ಕೊಟ್ಟಿದೆ ಎಂದರು
ಪತ್ರಕರ್ತ ಮಲ್ಲು ಬೋಳನ್ನವರ ಮಾತನಾಡಿ ಪುಲ್ವಾಮದಲ್ಲಿ ಹುತಾತ್ಮರಾದ ಯೋಧರು ಭಾರತೀಯರ ಪಾಲಿಗೆ ಇನ್ನೂ ಜೀವಂತರಾಗಿಯೇ ಇದ್ದಾರೆ, ಅವರೆಲ್ಲ ಭಾರತೀಯರಿಗೆ ಮಾದರಿಯಾಗಿದ್ದಾರೆ ನೆನಪು ಚಿರಋಣಿ ಮತ್ತು ಉಗ್ರರನ್ನು ಸದೆಬಡಿಯುವಲ್ಲಿ ಭಾರತೀಯ ಸೈನಿಕರು ತೋರಿಸಿದ ಧೈರ್ಯ ಮೆಚ್ಚುವಂಥಹದ್ದು ಎಂದು ಹೇಳಿದರು.
ಸಿದ್ದು ಮಹಾರಾಜ ಮಾತನಾಡಿ ನಮ್ಮ ಸೇನಾಪಡೆಯ ಮೇಲೆ ನಮಗೆ ಹೆಮ್ಮೆಯಿದೆ. ಸೈನಿಕರ ಶೌರ್ಯ ಸಾಹಸ ತಲೆಮಾರುಗಳವರೆಗೆ ದೇಶದ ಜನತೆಗೆ ಅದರಲ್ಲೂ ಯುವಪಡೆಗೆ ಸ್ಫೂರ್ತಿದಾಯಕವಾಗಲಿದ ಎಂದರು.
ಆರ್ಮಿ ಮತ್ತು ಪೋಲೀಸ್ ಪೂರ್ವಬಾವಿ ತರಬೇತಿಯ ಶಿಬಿರಾರ್ಥಿಗಳು ಮತ್ತು ಅತಿಥಿ ಮಹನಿಯರು ಹುತಾತ್ಮ ಯೋಧರಿಗೆ ಗೌರವವನ್ನು ಸಲ್ಲಿಸಿ ಮೌನ ಆಚರಣೆ ಮಾಡಿ ದೀಪ ಬೆಳಗಿಸುವ ಮುಖಾಂತರ ಶ್ರದ್ಧಾಂಜಲಿ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಶಿವಾನಂದ ಸಣಕ್ಕಿ ಪತ್ರಕರ್ತ ಸುಧಾಕರ ಉಂದ್ರಿ ಸುಭಾಸ ಗೋಡ್ಯಾಗೊಳ ಐಯುಬ ಕಲಾರಕೊಪ್ಪ ಅನೀತಾ ಒಂಟಗೊಡಿ ಮಂಜು ರೆಳೇಕರ ಮಂಜು ಕುಂಬಾರ ಮಹಾಂತೇಶ ಕೋಟಬಾಗಿ ರಾಘು ಗಂಗನ್ನವರ ಮಹಾಂತೇಶ ಬೆಳಕೂಡ ಯಲ್ಪಪ ಖಾನಟ್ಟಿ ಪರಶುರಾಮ ಕೊಡಗನೂರ ರಾಜು ಮನ್ಮಮಿ ಹಾಗೂ ಸಂಸ್ಥೆಯ ಸಂಸ್ಥಾಪಕರಾದ ಎಲ್.ವಾಯ್ ಅಡಿಹುಡಿ ಉಪಸ್ಥಿತರಿದ್ದರು


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ