ಬೆಟಗೇರಿ: ಸಮೀಪದ ಕೌಜಲಗಿ ಗ್ರಾಮದಲ್ಲಿ ಗುರುವಾರ ಫೆ.18 ರಂದು ಮುಂಜಾನೆ 11 ಗಂಟೆಗೆ ಸ್ಥಳೀಯ ಕಟ್ಟಿ ಬಸವೇಶ್ವರ ದೇವಸ್ಥಾನ ಹತ್ತಿರ ಮಹಾತ್ಮಾ ಜ್ಯೋತಿಭಾ ಪುಲೆ ಮಾಳಿ, ಮಾಲಗಾರ ಸಮಾಜ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆಯವರ 190 ನೇ ಜಯಂತ್ಯೋತ್ಸವ ಹಾಗೂ ಕೌಜಲಗಿ ಗ್ರಾಮ ಪಂಚಾಯತ ನೂತನ ಅಧ್ಯಕ್ಷ, ಉಪಾಧ್ಯಕ್ಷ, ಮತ್ತು ಸದಸ್ಯರಿಗೆ ಸತ್ಕಾರ ಸಮಾರಂಭ ಜರುಗಲಿದೆ.
ಮುಂಜಾನೆ 10 ಗಂಟೆಗೆ, ನಾಗರಾಳದ ಜ್ಞಾನೇಶ್ವರ ಮಹಾಸ್ವಾಮಿಜಿ, ಅನಂತಾನಂದ ಶರಣರು, ಸ್ಥಳೀಯ ಹಿರಿಯ ನಾಗರಿಕರ ನೇತೃತ್ವದಲ್ಲಿ, ಇಲ್ಲಿಯ ಕಟ್ಟಿ ಬಸವೇಶ್ವರ ದೇವಸ್ಥಾನದಿಂದ ಬಲಭೀಮ, ಬಸವೇಶ್ವರ ಪೇಟೆಯ ಮಾರ್ಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸುಮಂಗಲೆಯರ ಕುಂಭ, ಆರತಿ ವಿವಿಧ ವಾದ್ಯಮೇಳದೊಂದಿಗೆ ಮಾತೆ ಸಾವಿತ್ರಿ ಬಾಯಿ ಪುಲೆಯವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ.
ನಾಗರಾಳದ ಜ್ಞಾನೇಶ್ವರ ಮಹಾಸ್ವಾಮಿಜಿ ಹಾಗೂ ಅನಂತಾನಂದ ಶರಣರು ಸಾನಿಧ್ಯ ವಹಿಸಲಿದ್ದು, ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ. ಜಾರಕಿಹೊಳಿ ಉದ್ಘಾಟನೆ ನೆರವೇರಿಸಲಿದ್ದಾರೆ. ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ನೀಲಪ್ಪ ಕೇವಟಿ ಜ್ಯೋತಿ ಬೆಳಗಿಸಲಿದ್ದಾರೆ.
ಡೆಪ್ಯೂಟಿ ಕಂಟ್ರೋಲರ ಎಸ್.ಆರ್.ಮಾಳಿ, ಬಾಗಲಕೋಟ ಲೋಕಾಯುಕ್ತ ಸಿಪಿಐ ಶಿವಶರಣ ಅವಜಿ, ಲೋಕಾಪುರ ಪಿಎಸ್‍ಐ ಶಿವಶಂಕರ ಮುಕರಿ, ರವಿ ಯಡವಣ್ಣವರ, ಸದಾಶಿವ ಬುಟಾಳಿ, ಡಾ.ಸಿ.ಬಿ.ಕುಲಿಗೋಡ, ಬಸವರಾಜ ಬಾಳಿಕಾಯಿ, ಡಾ.ವಿ.ಎಸ್.ಮಾಳಿ, ಡಾ.ಅಶೋಕ ನರೋಡೆ, ಮುರಿಗೆಪ್ಪ ಮಾಲಗಾರ, ಕರ್ನಾಟಕ ಮಾಳಿ ಸಮಾಜ ಅಧ್ಯಕ್ಷ ಅಶೋಕ ಲಿಂಬಿಗಿಡದ, ಅಶೋಕ ಹೆಗ್ಗನ್ನವರ ಸೇರಿದಂತೆ ರಾಜ್ಯದ ಮಾಳಿ, ಮಾಲಗಾರ ಸಮಾಜದ ಮುಖಂಡರು, ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸುವರೆಂದು ಕೌಜಲಗಿ ಮಾಳಿ ಸಮಾಜದ ಅಧ್ಯಕ್ಷ ನೀಲಪ್ಪ ಕೇವಟಿ ಹಾಗೂ ಅಶೋಕ ಶಿವಾಪೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
