ಮೂಡಲಗಿ: ಶಿಕ್ಷಕ ಸಮುದಾಯ ನಿರಂತರ ಹಾಗೂ ವ್ಯಾಪಕವಾದ ಜ್ಞಾನಾರ್ಜಯಿಂದ ಕೂಡಿದಾಗ ಮಾತ್ರ ಕಲಿಕೆಯಲ್ಲಿರುವ ಮಗುವಿನ ಸೂಕ್ತ ಬುದ್ದಿವಂತಿಗೆ ಬಲ ದೊರೆಯುತ್ತದೆ. ವಿನೂತನ ಪ್ರಯೋಗಗಳು ಆದಾಗ ಮಾತ್ರ ಮಕ್ಕಳ ಫಲಪ್ರದ ಕಲಿಕೆಯಾಗಲು ಸಾದ್ಯ ಎಂದು ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಹೇಳಿದರು.
ಅವರು ಶುಕ್ರವಾರ ಮೇಘಾ ವಸತಿ ಶಾಲೆಯಲ್ಲಿ ಜರುಗಿದ ವಲಯದ ಪ್ರೌಢ ಶಾಲೆಗಳ ವಿಷಯ ಶಿಕ್ಷಕರ ವೇದಿಕೆಯ ತರಭೇತಿ ಕಾರ್ಯಾಗಾರದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಫಲಿತಾಂಶ ಹೆಚ್ಚಿಸುವ ದೃಷ್ಠಿಯಿಂದ ಇಂತಹ ಕಾರ್ಯಾಗಾರಗಳು ಬಹು ಪ್ರಾಮುಖ್ಯತೆ ಪಡೆದುಕೊಂಡಿವೆ. ಕ್ರೀಯಾ ಯೋಜನೆ ಸಿದ್ದಪಡಿಸಿಂತೆ ಕಾಲ ಕಾಲಕ್ಕೆ ಪರೀಕ್ಷಾ ಸುಧಾರಣೆ, ವಿಷಯವಾರು ವಿಶ್ಲೇಷಣೆ, ಅನುಷ್ಠಾನ ಹಾಗೂ ಅದರ ಫಲಗಳ ಕುರಿತು ಅವಲೋಕನ ಮಾಡಬೇಕು. ಪ್ರತಿ ಶಾಲೆಯು ಪ್ರತಿ ಶತ 100% ರಷ್ಟು ಫಲಿತಾಂಶ ಪಡೆಯುವಲ್ಲಿ ಹೆಚ್ಚಿನ ಗಮನ ನೀಡಬೇಕು ಎಂದರು.
ರಾಷ್ಟ್ರೀಯ ಮಟ್ಟದಲ್ಲಿ ಶೈಕ್ಷಣಿಕವಾಗಿ ಗುರುತಿಸಿಕೊಂಡಿರುವ ಮೂಡಲಗಿ ವಲಯದಲ್ಲಿ ಜೂನ್ 2020 ರಂದ ಕಾರ್ಯಾಗಾರ ಹಮ್ಮಿಕೊಂಡಿದೆ. ತಾಲೂಕಾ ಹಂತದಲ್ಲಿ ಅಭಿನಂದನಾ ಸಮಾರಂಭ, ಉಚಿತ ಶಿಕ್ಷಣಕ್ಕಾಗಿ ಶಿಪಾರಸ್ಸು, ಪೂರಕ ಪರೀಕ್ಷೆ, ವಾಟ್ಸ್‍ಪ್ ಗುಂಪು ರಚನೆ, ಫಲಿತಾಂಶ ವಿಶ್ಲೇಷನ ಕಾರ್ಯಾಗಾರ, ಪ್ರೇರಣಾ ಕಾರ್ಯಾಗಾರ, ನೊಂದಣಿ ಅಭಿಯಾನ, ತ್ರೀ ಸದಸ್ಯ ತಂಡ ಭೇಟಿ, ಶಿಕ್ಷಕರ ಆಪ್ತಸಮಾಲೋಚನೆಗಳು ಹಾಗೂ ಮಕ್ಕಳ ಹಾಜರಾತಿ ಹೆಚ್ಚಿಸಲು ಮನೆ ಮನೆ ಭೇಟಿ ಹಾಗೂ ಇನ್ನಿತರ ಶೈಕ್ಷಣಿಕವಾಗಿ ಪೂರಕ ಕಾರ್ಯ ಚಟುವಟಿಕೆಗಳ ಕಾರ್ಯ ಮೆಚ್ಚುವಂತಹದು. ಬೋಧನೆಗೆ ಸಂಬಂಧಿಸಿದಂತೆ ಪಠ್ಯ ಅಂದಾಜು ಪತ್ರಿಕೆ, ಪಾಠೋಪಕರಣಗಳು, ಮಾದರಿ ಪ್ರಶ್ನೆ ಪತ್ರಿಕೆ, ಕಲಿಕೆಯಲ್ಲಿ ಪ್ರತಿಭಾನ್ವಿತ ಹಿಂದೂಳಿದ ವಿದ್ಯಾರ್ಥಿಗಳ ಆಯ್ಕೆಯನ್ನು ಸರಿಯಾದ ರೀತಿಯಲ್ಲಿ ಜರುಗಿಸಬೇಕು. ಪ್ರಸಕ್ತ ದಿನಮಾನಗಳಲ್ಲಿ ಅಗತ್ಯ ತಂತ್ರಜ್ಞಾನಗಳ ಬಳಕೆ ಮಾಡಿಕೊಂಡು ಮಕ್ಕಳ ಕಲಿಕೆಗೆ ಅನುವು ಮಾಡಿಕೊಡಬೇಕು ಎಂದು ನುಡಿದರು.
ಮೂಡಲಗಿ ಬಿಇಒ ಅಜಿತ ಮನ್ನಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಕಲಿಕೆಯ ಹಿತದೃಷ್ಠಿಯನ್ನಿಟ್ಟಕೊಂಡು ಅವರಿಗೆ ಪೂರಕ ಕಲಿಕಾ ವ್ಯವಸ್ಥೆ ಕೈಗೊಳ್ಳಲಾಗಿದೆ. ನೂರಿತ ಉತ್ತಮ ರೀತಿಯಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಪರೀಕ್ಷಾ ತಯಾರಿ ಕುರಿತು ತರಭೇತಿ ದೊರಕಿಸಿಕೊಟ್ಟಿದ್ದೇವೆ. ವಲಯ ವ್ಯಾಪ್ತಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಹೆಚ್ಚಿಸುವಲ್ಲಿ ಕೈಗೊಂಡ ಕಾರ್ಯಗಳ ಕುರಿತು ವಿವರಿಸದರು.
ಕಾರ್ಯಾಗಾರದಲ್ಲಿ ಜಿಲ್ಲಾ ಎಸ್.ಎಸ್.ಎಲ್.ಸಿ ಪರೀಕ್ಷಾ ನೋಡ¯ ಅರಿಹಂತ ಬಿರಾದಾರ ಪಾಟೀಲ, ಮೇಘಾ ಸಂಸ್ಥೆ ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಇಸಿಒಗಳಾದ ಟಿ. ಕರಿಬಸವರಾಜು, ಸತೀಶ ಬಿ.ಎಸ್ ಹಾಗೂ ವಲಯದ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢ ಶಾಲೆಗಳ ಎಸ್.ಎಸ್.ಎಲ್.ಸಿಯ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಬೋಧಿಸುವ ಶಿಕ್ಷಕರು ಹಾಜರಿದ್ದರು.
