ಮೂಡಲಗಿ: ಸರಕಾರಿ ನೌಕರ ಯಶಸ್ವಿಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಇಲಾಖೆಗಳ ಆಶಯಗಳು ಪೂರ್ಣಗೊಳ್ಳುತ್ತವೆ. ಸೇವಾ ಸೌಲಭ್ಯಗಳನ್ನು ಕಛೇರಿಯ ಸಿಬ್ಬಂದಿ ಹಾಗೂ ಅಧಿಕಾರಿ ವರ್ಗದವರು ತಕ್ಷಣ ಕಾರ್ಯ ಮಾಡಿಕೊಟ್ಟಾಗ ಮಾತ್ರ ನೌಕರರು ತಮ್ಮ ಸೇವೆಯಲ್ಲಿ ಯಶಸ್ವಿಯಾಗಿ ನಿರ್ವಹಿಸುವರು ಎಂದು ಚಿಕ್ಕೋಡಿ ಸಾರ್ವನಿಕ ಶಿಕ್ಷಣ ಇಲಾಖೆ ಉಪನಿರ್ಧೇಶಕ ಗಜಾನನ ಮನ್ನಿಕೇರಿ ಹೇಳಿದರು.
ಅವರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ಶಿಕ್ಷಣ ಸ್ಪಂದನ ಕಾರ್ಯಕ್ರಮದ ತಾಲೂಕಿನ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ವಿಭಾಗೀಯ ಮಟ್ಟದಲ್ಲಿ ಶಿಕ್ಷಣ ಸ್ಪಂದನ ಕಾರ್ಯಕ್ರಮದ ಮೂಲಕ ಶಿಕ್ಷಕರ ಸೇವಾ ಸೌಲಭ್ಯಗಳನ್ನು ಆಲಿಸಿ ಪ್ರಕರಣ ಇತ್ಯರ್ಥಪಡಿಸುವದಾಗಿದೆ. ಪ್ರಮುಖವಾಗಿ ವಾರ್ಷಿಕ ಬಡ್ತಿ, ಕಾಲಮಿತಿ ನಿಗದಿ, ಮುಂಬಡ್ತಿ, ಗಳಿಕೆ ರಜೆಗಳು ಹಾಗೂ ತಂತ್ರಾಂಶದಲ್ಲಿಯ ನ್ಯೂನ್ಯತೆ ಸರಿಪಡಿಸುವದಾಗಿದೆ. ನೇರವಾಗಿ ಕಛೇರಿಗೆ ಆಗಮಿಸಿ ಶಿಕ್ಷಣ ಸ್ಪಂದನ ಕಾರ್ಯಕ್ರಮದಡಿ ಅರ್ಜಿ ಸಲ್ಲಿಸಿ ತ್ವರಿತಗತಿಯಲ್ಲಿ ತಮ್ಮಯ ಸೇವಾ ಸೌಲಭ್ಯಗಳನ್ನು ಪಡೆಯಬೇಕು. ಪ್ರಕರಣಗಳು ತಾಲೂಕು, ಜಿಲ್ಲೆ, ವಿಭಾಗೀಯ ಮಟ್ಟಗಳಲ್ಲಿ ಚರ್ಚಿತವಾಗಿ ನಿಖರ ಕಾರಣ ತಮಗೆ ತಿಳಿಯುತ್ತದೆ ಎಂದು ಹೇಳಿದರು.
ಬಿಇಒ ಅಜಿತ ಮನ್ನಿಕೇರಿ ಮಾತನಾಡಿ, ಮಾರ್ಚ್ 01 ರಂದು ವಿಭಾಗೀಯ ಹಂತದ ಪ್ರಕರಣ ವಿಲೆವಾರಿ ನಡೆಯುತ್ತದೆ. ತಾಲೂಕು ಹಂತದಲ್ಲಿ ಫೇ.24 ರಂದು ಸಾಂಯಕಾಲ 04-00 ಗಂಟೆಯವರೆಗೆ ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಕರ ಹೊಸ ಹಾಗೂ ಬಾಕಿ ಪ್ರಕರಣಗಳಿದ್ದಲ್ಲಿ ಲಿಖಿತ ರೂಪದಲ್ಲಿ ಕಛೇರಿಗೆ ಸಲ್ಲಿಸಬೇಕು. ಬ್ಲಾಕ್ ಹಂತದಲ್ಲಿ ಬಗೆಹರಿಯುವ ಪ್ರಕರಣಗಳನ್ನು ಮುಗಿಸಿ ಮುಂದಿನ ಹಂತದಲ್ಲಿ ಪರಿಹಾರಕ್ಕಾ ಅರ್ಜಿಗಳನ್ನು ರವಾನಿಸುತ್ತೆವೆ. ಖಂಡಾಯವಾಗಿ ಕೆ.ಜಿ.ಐಡಿ ನಂ, ಮೊಬೈಲ್ ನಂಬರ ನಮೂದಿಸಿ ಅರ್ಜಿ ಸಲ್ಲಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕ ಪಿ.ಎಚ್ ಒಚಿಟಿ, ಇಸಿಒ ಟಿ ಕರಿಬಸವರಾಜು, ಸತೀಶ ಬಿ.ಎಸ್ ಹಾಗೂ ಮೂಡಲಗಿ ತಾಲೂಕಿನ ಸರಕಾರಿ ನೌಕರರ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ನೌಕರರ, ಪತ್ತಿನ ಸಹಕಾರಿ, ಎನ್.ಪಿ.ಎಸ್, ಎಸ್.ಸಿ.ಎಸ್ಟಿ, ಮುಖ್ಯ ಶಿಕ್ಷಕರ, ಸಿ.ಆರ್.ಪಿ ಬಿಆರ್.ಪಿ, ದೈಹಿಕ ಶಿಕ್ಷಕರ, ವಿಕಲಚೇತನ , ಟಿಜಿಟಿ, ಎಜಿಟಿ, ಪದವಿಧರ, ಅನುಧಾನಿತ ಪ್ರಾಥಮಿಕ ಮತ್ತು ಪ್ರೌಢ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
Home / Recent Posts / ಸರಕಾರಿ ನೌಕರ ಯಶಸ್ವಿಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಇಲಾಖೆಗಳ ಆಶಯಗಳು ಪೂರ್ಣಗೊಳ್ಳುತ್ತವೆ -ಉಪನಿರ್ಧೇಶಕರು ಗಜಾನನ ಮನ್ನಿಕೇರಿ
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …