ಬೆಟಗೇರಿ:ಕೃಷಿ ಇಲಾಖೆ ಸಹಯೋಗದಲ್ಲಿ ಸರ್ಕಾರದಿಂದ ದೂರಕುವ ವಿವಿಧ ಯೋಜನೆ ಮತ್ತು ಸೌಲಭ್ಯಗಳ ಮಾಹಿತಿಯನ್ನು ರೈತರಿಗೆ ನೇರವಾಗಿ ಕಲ್ಪಿಸುವ ಹಿನ್ನಲೆಯಲ್ಲಿ ಗೋಕಾಕ ತಹಶೀಲ್ದಾರ ಹಾಗೂ ಕೃಷಿ ಇಲಾಖೆಯ ಮೇಲಾಧಿಕಾರಿಗಳ ಮಾರ್ಗದರ್ಶನದ ಸಲಹೆ, ಸೂಚನೆಯಂತೆ ರೈತರ ಬ್ಯಾಂಕ್ ಪಾಸ್ ಬುಕ್ಕ್ ಮತ್ತು ಆಧಾರ ಕಾರ್ಡ್ ಹಾಗೂ ಮೊಬೈಲ್ ನಂಬರ್ ಜೋಡಣೆಗೆ ದಾಖಲಾತಿಗಳು ಅವಶ್ಯಕವಾಗಿದ್ದು, ಆದಕಾರಣ ಬೆಟಗೇರಿ ಗ್ರಾಮದ ರೈತರು ತಮ್ಮ ಹೆಸರಿನಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‍ನ ಎಸ್‍ಬಿ ಪಾಸಬುಕ್ಕ್, ಆಧಾರ ಕಾರ್ಡ್ ಒಂದೂಂದು ನಕಲು ಪ್ರತಿ, ಈಗ ಬಳಕೆಯಲ್ಲಿರುವ ರೈತರು ತಮ್ಮ ಮೊಬೈಲ್ ನಂಬರ್‍ನ್ನು ಬೇಗನೆ ಸ್ಥಳೀಯ ಗ್ರಾಮಲೆಕ್ಕಾಧಿಕಾರಿಗಳ ಕಾರ್ಯಾಲಯಕ್ಕೆ ತಂದು ಕೊಡಬೇಕು ಎಂದು ಗ್ರಾಮಲೆಕ್ಕಾಧಿಕಾರಿ ಜೆ.ಎಂ.ನದಾಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
