ಮೂಡಲಗಿ: ಬಾಲ್ ಬ್ಯಾಡಮಿಟನ್ ಮತ್ತು ಜುಡೋ ಕ್ರೀಡೆಯಲ್ಲಿ ರಾಜ್ಯ ಪಟ್ಟಕ್ಕೆ ಆಯ್ಕೆ
ಮೂಡಲಗಿ: ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಶ್ರೀ ಶಿವಬೋಧರಂಗ ಪದವಿ ಪೂರ್ವ ಮಹಾವಿದ್ಯಾಲಯದ ಕ್ರೀಡಾಪಟ್ಟುಗಳು ಜಿಲ್ಲೆಯ ರಾಭಾಗದ ಕೆ.ಎಲ್.ಇ ಮಲಗೌಡ ಪಾಟೀಲ ಪ.ಪೂ ಕಾಲೇಜಿನ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಬಾಲ್ ಬ್ಯಾಡಮಿಟನ್ ಕ್ರೀಡೆಯಲ್ಲಿ ಮತ್ತು ಬಿ.ಎಮ್.ಚೌಗಲಾ ಕಾಲೇಜಿನಲ್ಲಿ ಜರುಗಿದ ಜುಡೋ ಕ್ರೀಡೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲ್ ಬ್ಯಾಡಮಿಟನ್ ಕ್ರೀಡಾ ಪಟ್ಟುಗಳಾದ ಹುಸೇನ ತುಂಬಗಿ, ಗೋಪಾಲ ದರೂರ, ಶಕೀಲ ಡಾಂಗೆ, ಸಯ್ಯದ ಮದಭಾಂವಿ, ಪ್ರವೀಣ ಪೂಜೇರಿ, ರಮಜಾನ್ ನದಾಫ್, ಅಕ್ಬರ ಡಾಂಗೆ ವಿಕಾಸ ತಳವಾರ ಮತ್ತು ಜುಡೋ ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿನಾಯ್ಕ ನಾಯ್ಕ ಅವರಿಗೆ ಪ್ರಮಾಣ ಪತ್ರವನ್ನು ಮೂಡಲಗಿ ಶಿಕ್ಷಣ ಸಂಸ್ಥೆಯ ಚೇರಮನ್ನ ವಿಜಯಕುಮಾರ ಅ.ಸೋನವಾಲಕ್ಕರ, ಉಪಾಧ್ಯಕ್ಷ ಎಸ್.ಆರ್.ಸೋನವಾಲ್ಕರ, ಕಾಲೇಜಿನ ಪ್ರಾರ್ಚಾಯ ಎಸ್.ಡಿ.ತಳವಾರ ಮತ್ತು ಕಾಲೇಜಿನ ಕ್ರೀಡಾ ವಿಭಾಗದ ಅಧ್ಯಕ್ಷ ಎಮ್.ಎಸ್.ಪಾಟೀಲ ಅವರು ವಿತರಿಸಿದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಚೇರಮನ್ನ ವಿಜಯಕುಮಾರ ಸೋನವಾಲ್ಕರ ಮತ್ತು ಉಪಾಧ್ಯಕ್ಷ ಎಸ್.ಆರ್.ಸೋನವಾಲ್ಕರ, ಅವರು ಕ್ರೀಡಾಪಟ್ಟುಗಳು ರಾಜ್ಯ ಮಟ್ಟದ ಕ್ರೀಡೆಯಲ್ಲಿ ವಿಜಯಶಾಲಿಗಳಾಗಿರಿ ಎಂದು ಶುಭ ಹಾರೈಸಿದರು.