ಮೂಡಲಗಿ : ವಕೀಲರೇ ಇಡಿ ದೇಸದ ವ್ಯಾಪ್ತಿ ಹೋರಾಟ ಮಾಡಿದರೆ ಮಾತ್ರ ನಮಗೆ ನ್ಯಾಯ ಸಿಗುತ್ತದೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ವಕೀಲರ ಮೇಲೆ ನಡೆಯುತಿರುವ ಹಲ್ಲೆ ಪ್ರಕರಣಗಳು ಇಂದಲ್ಲಾ ನಾಳೆ ನಮಗೆ ನಮ್ಮ ಮುಂದಿನ ಪಿಳಿಗೆಗೆಯಾದರು ನ್ಯಾಯ ಸಿಗುವುದು. ನಮ್ಮ ವಕೀಲರ ಸಂರಕ್ಷಣಾ ಕಾಯ್ದ ಜಾರಿಯಾಗುದುವವರೆಗೂ ನಿರಂತರ ಅವಿಶ್ರಾಂತವಾಗಿ ನಮ್ಮ ಹೊರಾಟವನ್ನು ಮಾಡಲೆಬೇಕು ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಪಿ. ಮಗದುಮ್ಮ ಹೇಳಿದರು.
ಅವರು ದಿವಾಣಿ ಹಾಗೂ ಜೆ.ಎಮ್.ಎಪ್.ಸಿ. ನ್ಯಾಯಾಲಯದ ಆವರಣದಲ್ಲಿ ವಿಜಯನಗರ ಜಿಲ್ಲೆ ಹೊಸಪೇಟೆ ನ್ಯಾಯಾಲಯದ ಆವರಣದಲ್ಲಿ ಕರ್ತವ್ಯ ನಿರತ ವಕೀಲರಾದ ವೆಂಕಟೇಶ ತಾರಹಳ್ಳಿ ಕೊಲೆಯ ಪ್ರಕರಣವನ್ನು ಖಂಡಿಸಿ ಎಲ್ಲಾ ವಕೀಲರು ನ್ಯಾಯಾಲಯದ ಕಾರ್ಯ ಕಲಾಪಗಳಿಂದ ಹೊರಗುಳಿದ ಪ್ರತಿಭಟಿಸಿ ಮಾತನಾನಾಡಿತ್ತಾ ಆರೋಪಿ ಮನೋಜ ಇತನ ಮೇಲೆ ಸೂಕ್ತ ಕಾನೂನು ಕ್ರ,ಮ ಕೈಗೊಳ್ಳಬೇಕೆಂದರು ಹಿರಿಯ ವಕೀಲ ಆರ್.ಆರ್ .ಭಾಗೋಜಿ ಮಾತನಾಡುತ ಕೋರ್ಟ ಆವರಣದಲ್ಲಿ ಕೊಲೆಯಾಗಿರುವ ಘಟನೆ ಅತ್ಯಂತ ಹೀನ ಹಾಗೂ ಪೈಶಾಚೀಕ ಕೃತ್ಯವಾಗಿದೆ ಈ ಕೂಡಲೆ ಸರ್ಕಾರವೂ ವಕೀಲರ ರಕ್ಷಣಾ ಕಾಯ್ದಯನ್ನು ರೂಪಿಸಿ ಜಾರಿಗೊಳಿಸಬೇಕೆಂದು ಹೇಳಿದರು.
ನ್ಯಾಯವಾದಿಗಳ ಸಂಘದ ಪ್ರಧನ ಕಾರ್ಯದರ್ಶಿ ಎಲ್.ವಾಯ್.ಅಡಿಹುಡಿ ಮಾತನಾಡುತ ವಕೀಲರ ಮೇಲೆ ಹಲ್ಲೆ ಮತ್ತು ಇಂತಹ ದುರ್ಘಟನೆ ಮಾಡಿದ ಆರೋಪಿತರ ಪರವಾಗಿ ವಕೀಲರು ವಕಾಲತನ್ನು ಹಾಕಬಾರದು ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕಾದರೆ, ಇಂತಹ ಆರೋಪಿತರಿಗೆ ಕಠಿಣ ಶಿಕ್ಷೆ ವಿದಿಸಬೇಕು ಮತ್ತು ವಕೀಲರ ಮೇಲೆ ಹಲ್ಲೆ ಮಾಡುವ ಪ್ರತಿಯೊಬ್ಬ ಆರೋಪಿಗೆ ಇದೊಂದು ಪಾಠವಾಗಬೇಕು ಎಂದು ಮಾತನಾಡಿದರು.
ಪ್ರತಿಭಟನೆಯಲ್ಲಿ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಸ್.ವಾಯ್. ಹೊಸಟ್ಟಿ ಸಹಕಾರ್ಯದರ್ಶಿ ಡಿ.ಎಸ್.ರೊಡ್ಡನವರ .ಬಿ.ಎಚ್.ಮಳ್ಳಿವಡೇರ ಖಜಾಂಚಿ. ವಿ.ಕೆ. ಪಾಟೀಲ. ಹಿರಿಯ ವಕೀಲರಾದ. ಎಸ್.ಎಸ್. ಗೊಡಿಗೌಡರ, ವಿ.ವಿ.ನಾಯಕ, ವಿ.ಸಿ.ಗಾಡವಿ, ಎಲ್.ಬಿ. ವಡೇಯರ, ಎಸ್.ಎಲ್. ಪಾಟೀಲ, ಬಿ.ವಾಯ್. ಹೇಬ್ಬಾಳ, ಪಿ.ಎಸ್. ಮಲ್ಲಾಪೂರ, ಆರ್.ಆರ್. ಕಾವಲ್ದಾರ, ಎ.ಎಸ್.ಕೌಜಲಗಿ, ಎಸ್.ಎಸ್. ತುಪ್ಪದ, ಆರ್.ಬಿ. ಕುಳ್ಳೂರ,ವಾಯ್.ಎಸ್. ಖಾನಟ್ಟಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.
Home / Recent Posts / ವಕೀಲರ ಸಂರಕ್ಷಣಾ ಕಾಯ್ದ ಜಾರಿಯಾಗುದುವವರೆಗೂ ನಿರಂತರ ನಮ್ಮ ಹೊರಾಟವನ್ನು ಮಾಡಲೆಬೇಕು – ಕೆ.ಪಿ. ಮಗದುಮ್ಮ
Check Also
ನ.22 ರಂದು ಕನ್ನಡ ರಾಜ್ಯೋತ್ಸವ ಭವ್ಯ ಮೇರವಣಿಗೆ
Spread the love ಇಂದು ಕನ್ನಡ ರಾಜ್ಯೋತ್ಸವ ಭವ್ಯ ಮೇರವಣಿಗೆ ಮೂಡಲಗಿ: ಮೂಡಲಗಿ ತಾಲೂಕಾ ಕನ್ನಡ ರಾಜ್ಯೋತ್ಸ ಸಮಿತಿ ಆಶಯದಲ್ಲಿ …