Breaking News
Home / Recent Posts / ಶ್ರೀ ಶೂನ್ಯ ಸಂಪಾದನ ಮಠದ 16 ನೇ ಶರಣ ಸಂಸ್ಕøತಿ ಉತ್ಸವ

ಶ್ರೀ ಶೂನ್ಯ ಸಂಪಾದನ ಮಠದ 16 ನೇ ಶರಣ ಸಂಸ್ಕøತಿ ಉತ್ಸವ

Spread the love

ಗೋಕಾಕ : ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರಂತಹ ಮಹನೀಯರು ಜನಿಸಿದ ನಮ್ಮ ದೇಶ ಸಂಸ್ಕಾರವಂತ ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು ಸೋಮವಾರದಂದು ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಆವರಣದಲ್ಲಿ ಇಲ್ಲಿನ ಶ್ರೀ ಶೂನ್ಯ ಸಂಪಾದನ ಮಠದ 16 ನೇ ಶರಣ ಸಂಸ್ಕøತಿ ಉತ್ಸವದ ಷಟಸ್ಥಲ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು. ನಮ್ಮ ದೇಶ ಸ್ವಾವಲಂಬಿಯಾಗಿ ಯುದ್ಧಗಳನ್ನು ಬೆಂಬಲಿಸದೆ ಮಾನವೀಯ ಮೌಲ್ಯಗಳಿಂದ ಜಗತ್ತಿನಲ್ಲಿ ಮಾದರಿಯಾಗಿದೆ. ರಾಜ್ಯದಲ್ಲೇ ದೊಡ್ಡ ಜಿಲ್ಲೆಯಾದ ಬೆಳಗಾವಿ ಜಿಲ್ಲೆಯಲ್ಲಿ ಸಾರ್ವಜನಿಕ ಸೇವಯನ್ನು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನದೊಂದಿಗೆ ಸಾದ ಮುಂದೆ ಇದೆ. ಪ್ರಭಾವಿ ಜಿಲ್ಲೆಯಲ್ಲಿ ಎಲ್ಲರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಗಳು ಉತ್ತಮವಾಗಿ ನಡಿಯುತ್ತಿವೆ. ಇಲ್ಲಿನ ಶ್ರೀಮಠದ ಕಾರ್ಯಕ್ರಮಗಳು ಸಮಾಜ ಮುಖಿಯಾಗಿದ್ದು, ಇಲ್ಲರಿಗೂ ಪ್ರೇರಣೆಯಾಗಿವೆ. ಇಂತಹ ಪುಣ್ಯ ಕಾರ್ಯಗಳಲ್ಲಿ ನಾವೆಲ್ಲರೂ ಪಾಲ್ಗೋಳೊಣಾ ಎಂದರು. ವಿದ್ಯಾರ್ಥಿಗಳು ವಿಷಯಗಳಲ್ಲಿ ಪರಿಣಿತರಾಗಿ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದರಿಂದ ಐಎಎಸ್ ನಂತಹ ಸ್ವರ್ಧಾತ್ಮಕ ಪರೀಕ್ಷೆಗಗಳಲ್ಲಿ ಉತ್ತೀರ್ಣರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಿದೆ. ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಪ್ರಯತ್ನಶೀಲರಾಗಿರೆಂದು ಕರೆ ನೀಡಿದರು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುಪ್ಪಯ್ಯನ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ರಾಜ್ಯ ಸಭಾ ಸದಸ್ಯ ಹಾಗೂ ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ ಈರಣ್ಣ ಕಡಾಡಿ ವಹಿಸಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ