ಕೆಎಲ್‍ಇ ಆಸ್ಪತ್ರೆಯ ತಜ್ಞ ವೈದ್ಯರಿಂದ ಕಲ್ಲೋಳಿಯಲ್ಲಿ ಮಾ. 3ರಂದು ಉಚಿತ ಆರೋಗ್ಯ ತಪಾಸಣೆ
ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಪ್ರಿಯದರ್ಶಿನಿ ಕೋ.ಆಪ್ ಕ್ರೆಡಿಟ್ ಸೊಸೈಟಿ, ಬಸವೇಶ್ವರ ಶಿಕ್ಷಣ ಸಂಸ್ಥೆ ಇವರ ಆಶ್ರಯದಲ್ಲಿ ಬೆಳಗಾವಿಯ ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದವರಿಂದ ಮಾ. 3ರಂದು ಬೆಳಿಗ್ಗೆ 9.30ರಿಂದ ಸಂಜೆ 4ರ ವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬಸವೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿರುವರು.
ಶಿಬಿರದಲ್ಲಿ ಹೃದಯ ಸಂಬಂಧಿ ಕಾಯಲೆ, ನರರೋಗ ಶಾಸ್ತ್ರ, ಎಲುಬು ಕೀಲು ಮರುಜೋಡಣೆ, ವೈದ್ಯಕೀಯ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ, ಸ್ತ್ರೀರೋಗ, ಮಕ್ಕಳ ಕಾಯಲೆಗಳು, ಕಣ್ಣು ತಪಾಸಣೆ, ಕಿವಿ, ಮೂಗು, ಗಂಟಲು ತಪಾಸಣೆ, ಚರ್ಮರೋಗ, ಫಿಜಿಯೋಥೆರಪಿ, ಅಸ್ಥಮಾ ಈ ಎಲ್ಲ ಕಾಯಲೆಗಳಿಗೆ ಕೆಎಲ್‍ಇ ಆಸ್ಪತ್ರೆಯ ತಜ್ಞ ವೈದ್ಯರು ತಪಾಸಣೆ ಮಾಡುವರು ಎಂದು ಸಂಘಟಕ ಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಮೇಶ ಈರಪ್ಪ ಬೆಳಕೂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಬಿರದ ಸದುಪಯೋಗವನ್ನು ಮೂಡಲಗಿ ಮತ್ತು ಗೋಕಾಕ ತಾಲ್ಲೂಕು ಮತ್ತು ಸುತ್ತಮುತ್ತಲಿನ ಜನರು ಪಡೆದುಕೊಳ್ಳಲು ತಿಳಿಸಿರುವರು. ಅಧಿಕ ಮಾಹಿತಿಗಾಗಿ ಮೊ. 9449000623 ಸಂಪರ್ಕಿಸಲು ತಿಳಿಸಿದ್ದಾರೆ.