ಶ್ರೀ ಶ್ರೀನಿವಾಸ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳೊಂದಿಗೆ ಡಾ. ಯತೀಶ ಪೂಜಾರ ಸಂವಾದ
ಮೂಡಲಗಿ:- ಇಲ್ಲಿಯ ಶ್ರೀ ಶ್ರೀನಿವಾಸ ಸ್ಕೂಲ್ ನಲ್ಲಿ ಮಂಗಳವಾರದಂದು 6ರಿಂದ 8ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ರಬಕವಿಯ ಆರೋಗ್ಯ ಅಕಾಡೆಮಿ ಸದಸ್ಯ ಡಾ. ಯತೀಶ ಪೂಜಾರ ‘ಕೊವಿಡ್ 19 ಪರಿಸ್ಥಿತಿಯಲ್ಲಿ ಹದಿಹರೆಯದ ವಿದ್ಯಾರ್ಥಿಗಳಲ್ಲಿ ಒತ್ತಡ ಸಹಿಷ್ಣುತೆ ಎಂಬ ವಿಷಯದ ಮೇಲೆ ಸಂವಾದ ನಡೆಸಿದರು.
ನಂತರ ವಿದ್ಯಾರ್ಥಿಗಳಲ್ಲಿ ಆರೋಗ್ಯ, ಶುಚಿತ್ವಪಾಲನೆ, ಉತ್ತಮ ಹವ್ಯಾಸಗಳು ಹಾಗೂ ಅಧ್ಯಯನದ ಮಹತ್ವಗಳ ಬಗ್ಗೆ ಹೇಳಿದರು. ಹಾಗೂ ವಿದ್ಯಾರ್ಥಿಗಳು ‘ಕೊವಿಡ್ 19’ ಪರಿಸ್ಥಿತಿಯಲ್ಲಿ ಅನುಭವಿಸಿದ ಒತ್ತಡಗಳನ್ನು ಮುಕ್ತವಾಗಿ ವೈದ್ಯರೊಂದಿಗೆ ಹಂಚಿಕೊಂಡ ಬಗ್ಗೆ ವಿಚಾರಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
‘ಕೊವಿಡ್ 19’ ಕುರಿತಾದ ಚಿತ್ರಕಲೆ ಹಾಗೂ ಕವನ ರಚನಾ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿ ವಿಜೇತರಿಗೆ ಡಾ. ಪೂಜಾರ ಬಹುಮಾನ ವಿತರಿಸಿದರು. ನಂತರ ಕಾರ್ಯದರ್ಶಿ ವೆಂಕಟೇಶ ಪಾಟೀಲ ಡಾ. ಪೂಜಾರ ಅವರನ್ನು ಸನ್ಮಾನಿಸಿದರು. ರಘು ಜಕಾತಿ, ಪ್ರಾಚಾರ್ಯ ಮನೋಜ ಭಟ್ಟ,ಶಿಕ್ಷರು,ಸಿಬ್ಬಂದಿ ವರ್ಗದವರು ಹಾಜರಿದ್ದರು.
ವಿದ್ಯಾರ್ಥಿ ವೈಭವ ವಾಲಿ ಸ್ವಾಗತಿಸಿದರು. ನಾಗವೀರೇಂದ್ರಬಾಬು ವಂದಿಸಿದರು. ರಮ್ಯಾ ಗಿರಡ್ಡಿ ನಿರೂಪಿಸಿದರು.