ಯಾದವಾಡದಲ್ಲಿ ಜಾರಕಿಹೊಳಿ ಬೆಂಬಲಿಗರಿಂದ ಪ್ರತಿಭಟನೆ
ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ಜಾರಕಿಹೊಳಿ ಅಭಿಮಾನಿಗಳು ಗ್ರಾಮದ ಬಸ್ವೇಶ್ವರ ವೃತ್ತದಲ್ಲಿ ಟಾಯರಗೆ ಬೆಂಕಿ ಹಚ್ಚಿ ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧದ ಷಡ್ಯಂತ್ರ ಖಂಡಿಸಿ ಪ್ರತಿಭಟನೆ ನಡೆಸಿ ಗ್ರಾ.ಪಂ ಪಿಡಿಒ ಮುಖಾಂತರ ಸರಕಾರಕ್ಕೆ ಮನವಿಸಲ್ಲಿಸಿದರು
ಈ ಸಮಯದಲ್ಲಿ ಯಾದವಾಡ ಗ್ರಾ.ಪಂ ಸದಸ್ಯ ಕಲ್ಮೇಶ ಗಾಣಗೇರ ಮಾತನಾಡಿ, ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಬಗ್ಗೆ ಅಶೀಲ ಸಿಡಿ ಬೀಡುಗಡೆ ಮಾಡಿ ಜಾರಕಿಹೊಳಿ ಅವರ ರಾಜಕೀಯ ತೆಜೋವದೆ ಮಾಡಿರುವರ ಮೇಲೆ ಸರಕಾರ ನಿಗಾವಹಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಸಿಬಿಐ ಯಿಂದ ತನಿಖೆ ನಡೆಸಿ ಸತ್ಯಾಸತ್ಯತೆ ಹೊರತಂದು ಜಾರಕಿಹೊಳಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹನಮಂತ ಹಾವನ್ನವರ, ರಮೇಶ ಜಾರಕಿಹೊಳಿ ಅವರ ಜನಪ್ರೀಯತೆಯನ್ನು ಸಹಿಸದ ಕೆಲ ಪ್ರಭಾವಿ ವ್ಯಕ್ತಿಗಳು ಷಡ್ಯಂತ್ರ ರೂಪಿಸಿದ್ದು, ಸಿ.ಡಿ.ಬಗ್ಗೆ ಸತ್ಯ ಸಂಗತಿ ಹೊರಬರಬೇಕೆಂದು ಆಗ್ರಹಿಸಿದರು.
ಈ ಸಮಯದಲ್ಲಿ ಬಸವರಾಜ ಕೇರಿ, ರಂಗಪ್ಪ ಇಟನ್ನವರ, ಶಂಕರ ಬೆಳಗಲಿ, ರಮೇಶ ಉದಪುಡಿ, ಸುರೇಶ ಸಾವಳಗಿ, ಹನಮಂತ ಹಾವನ್ನವರ, ದರೆಪ್ಪ ಮೂಧೋಳ, ನಾಗಪ್ಪ ಹಡಪದ, ಮಲ್ಲಪ್ಪ ಕೌಜಲಗಿ ಮತ್ತಿತರು ಇದ್ದರು.