ಜೋಕಾನಟ್ಟಿ ಪಿಕೆಪಿಎಸ್‍ಗೆ ಅಧ್ಯಕ್ಷ-ಉಪಾಧ್ಯಕ್ಷ ಅವಿರೋಧ ಆಯ್ಕೆ
ಮೂಡಲಗಿ: ತಾಲೂಕಿನ ಜೋಕಾನಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕುಭೇಂದ್ರ ಶಿವಪ್ಪ ತೇಗ್ಗಿ ಮತ್ತು ಉಪಾಧ್ಯಕ್ಷರಾಗಿ ಮುತ್ತೇಪ್ಪ ಸಿದ್ದಪ್ಪ ಶಾಬಾನಿ ಆವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಈ ಸಂಧರ್ಭದಲ್ಲಿ ಸಂಘದ ನಿರ್ದೇಶಕರಾದ ಲಕ್ಕಪ್ಪ ಮುಡ್ಡೆಪ್ಪನ್ನವರ, ಶಂಕರ ಮಾಲಪ್ಪಗೋಳ, ವಿಟ್ಟಪ್ಪ ಭೀ ಪಾಟೀಲ, ಸಿದ್ದಪ್ಪ ಮೊಖಾಶಿ, ಚಂದ್ರಕಾಂತ ಬೀದರಿ, ಶಿವಗೊಂಡ ಪಾಟೀಲ, ಸಿದ್ರಾಯ ಕಂಬಳಿ, ಪಾರ್ವತಿ ಕರಿಗೌಡ್ರ, ಪಾರ್ವತಿ ಅಳಗೋಡಿ, ರಾಣಪ್ಪ ಮಾದರ, ಪದವ್ವ ಕವಡಪ್ಪಗೋಳ ಹಾಗೂ ಗ್ರಾಮ ಮುಖಂಡರಾದ ನಾರಾಯಣ ಸನದಿ, ಪರಮಾನಂದ ಬೀದರಿ, ಭೀಮಪ್ಪ ಜಡ್ಲಪ್ಪಗೋಳ, ತುಕಾರಾಂ ದೊಡಶಿವಪ್ಪಗೋಳ, ಲಗಮಪ್ಪ ಮೊಖಾಶಿ, ಗುಂಡುರಾವ ಗುಜನಟ್ಟಿ, ಶಾಬಪ್ಪ ಬಂಡ್ರೋಳಿ, ಸಿದಾರೂಡ ಮುಕ್ಕನ್ನವರ, ಪವಾಡೇಪ್ಪ ಕುರಿಬಾಗಿ, ಬಸು ಮುಸಪ್ಪಗೋಳ , ಕಾರ್ಯದರ್ಶಿ ಸಿದ್ಧಾರೂಢ ಬೀದರಿ ಮತ್ತಿತರು ಇದ್ದರು.
ನೂತನ ಅಧ್ಯಕ್ಷ ಶಿವಪ್ಪ ತೇಗ್ಗಿ ಮಾತನಾಡಿ, ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಹಾಯ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ಸಂಘದ ಸದಸ್ಯರಿಗೆ ಸೌಲಭ್ಯ ಕಲ್ಪಿಸಿ ರೈತರ ಅಭಿವೃದ್ಧಿಗೆ ಶ್ರಮಿಸಿಸುವದಾಗಿ ಹೇಳಿದರು.
ಸಂಘದಿಂದ ಅಧ್ಯಕ್ಷ-ಉಪಾಧ್ಯಕ್ಷರನ್ನು ಮತ್ತು ನಿರ್ದೇಶಕರನ್ನು ಸತ್ಕರಿ ಗೌರವಿಸಲ್ಲಾಯಿತು.
IN MUDALGI Latest Kannada News