ಮಹಿಳೆ ಸ್ವಾಭಿಮಾನದ ಪ್ರತೀಕ
: ಶ್ರೀಮತಿ ಪೂಜಾ. ಡೊಣವಾಡೆ
ಮೂಡಲಗಿ : ಮಹಿಳೆ ಸ್ವಾಭಿಮಾನದ ಪ್ರತೀಕವಾಗಿದ್ದಾಳೆ. ಇಂದಿನ ಸಮಾಜದಲ್ಲಿ ಮಹಿಳಾ ಸ್ಥಾನಮಾನಗಳು ಹೆಚ್ಚಾಗುತ್ತಿದ್ದು ಮಹಿಳೆ ಅಬಲೆ ಅಲ್ಲಾ ಅವಳು ಸಬಲೇ ಎಂಬುವದನ್ನು ಇಡೀ ಸಮಾಜಕ್ಕೆ ಇಂದಿನ ಯುಗದಲ್ಲಿ ತೋರಿಸಿಕೊಡುವಷ್ಟು ಸಾಮಥ್ರ್ಯವನ್ನು ಹೊಂದಿರುತ್ತಾಳೆ. ನಮ್ಮ ಭಾರತೀಯ ಸಂಸ್ಕøತಿಯು ಮಹಿಳೆಯರಿಗೆ ದೇವತಾ ಸ್ಥಾನಮಾನ ನೀಡಿ ತಾಯಿ, ತಂಗಿ, ಅಕ್ಕ, ಹೆಂಡತಿಯ ರೂಪದಲ್ಲಿ ಗೌರವಿಸಿ ಮಹಿಳಾ ಪ್ರಾಮುಖ್ಯತೆಯನ್ನು ನೀಡುತ್ತಿರುವುದು ಒಂದು ಮುಖ್ಯ ಬೆಳವಣಿಗೆಯಾಗಿದೆ ಎಂದು ಬೆಲ್ಲದ ಬಾಗೇವಾಡಿಯ ಶ್ರೀ ವಿ.ಎಂ. ಕತ್ತಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯದ ಉಪನ್ಯಾಸಕಿ ಶ್ರೀಮತಿ ಪೂಜಾ ಎಂ. ಡೋಣವಾಡೆ ಅಭಿಪ್ರಾಯಪಟ್ಟರು.
ಸವರು ಸ್ಥಳೀಯ ಆರ್.ಡಿ.ಎಸ್. ಬಿ.ಎಸ್.ಡಬ್ಲ್ಯೂ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅತಿಥಿ ಸ್ಥಾನವನ್ನು ವಹಿಸಿಕೊಂಡು ಮಾತನಾಡಿ ಇಂದು ಮಹಿಳೆ ಪುರುಷರಷ್ಟೇ ಸ್ವಾಭಿಮಾನದ ಜೀವನ ರೂಪಿಸಿಕೊಂಡು ಶೈಕ್ಷಣಿಕ, ತಾಂತ್ರಿಕ, ವೈಜ್ಞಾನಿಕ ರಂಗದಲ್ಲಿ ಮುನ್ನುಗುತ್ತಿರುವದು ಒಳ್ಳೆಯ ಸಂಗತಿ. ಇನ್ನಷ್ಟು ಮಹಿಳೆ ಬಲಾಡ್ಯವಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಕೊಳ್ಳಲು ನಮ್ಮ ಸಮಾಜ ಬೆಂಬಲ ನೀಡುವುದು ಅವಶ್ಯಕವಾಗಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಹಿಡಿಯುವುದು ಅವಶ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಪೂಜಾ ಸಂತೋಷ ಪಾರ್ಶಿ ವಹಿಸಿಕೊಂಡು ಮಾತನಾಡಿ ಸಮಾಜದಲ್ಲಿ ಮಹಿಳೆಗೆ ಪೂಜ್ಯತಾ ಮನೋಭಾವನೆ ನೀಡಿದರೆ ಅಲ್ಲಿ ಮಹಿಳೆಗೆ ಗೌರವ ಸಿಕ್ಕಂತೆ, ಮಹಿಳೆಗೆ ಗೌರವ ನೀಡುವ ಸಂಸ್ಕøತಿ ನಮ್ಮ ಭಾರತದ ಸಂಸ್ಕøತಿಯಾಗಿದ್ದು ಮಹಿಳಾ ಸ್ಥಾನಮಾನ ಹೆಚ್ಚಿಸುವ ದೃಷ್ಟಿಯಲ್ಲಿ ನಮ್ಮ ಸಮಾಜ ಗಮನಹರಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎಸ್.ಬಿ.ಗೋಟೂರ, ಉಪನ್ಯಾಸಕಿಯರಾದ ಶ್ರೀಮತಿ ಶಿಲ್ಪಾ ನಿಪ್ಪಾಣಿ. ಸುನೀತಾ ಸುಳ್ಳನ್ನವರ ಹಾಗೂ ಇನ್ನಿತರ ಸಿಬ್ಬಂದಿ ವರ್ಗದವರು ಹಾಜರಿದ್ದರು. ವಿದ್ಯಾರ್ಥಿ ಸತ್ತೆಪ್ಪಾ ಮುಗಳಖೋಡ ನಿರೂಪಿಸಿದರು ಉಪನ್ಯಾಸಕಿ ಶ್ರೀಮತಿ ಲಕ್ಷ್ಮೀ ಹಂದಿಗುಂದ ಸ್ವಾಗತಿಸಿದರು. ವಿದ್ಯಾರ್ಥಿ ಶಿವು ಹಂದಿಗುಂದ ವಂದಿಸದರು.