ಕೃಷಿ ಕ್ಷೇತ್ರಕ್ಕೆ ಬಂಪರ ಕೊಡುಗೆ- ಬಜೆಟ್ ಕುರಿತು ಕಡಾಡಿ ಅವರ ಹೇಳಿಕೆ
ಮೂಡಲಗಿ: ಕಳೆದ ಒಂದು ವರ್ಷದಿಂದ ಕರೋನಾ ಹೊಡೆತಕ್ಕೆ ಸಿಕ್ಕೂ ಆರ್ಥಿಕ ಸಂಕಷ್ಟ ಎದುರಾದರೂ ಕೂಡಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು 2021-22ನೇ ಸಾಲಿನ ಬಜೆಟ್ ಮಂಡಿಸುವುದರ ಮೂಲಕ ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬ ನೀತಿಯನ್ನು ಎತ್ತಿ ಹಿಡಿದಿದ್ದು, ಪ್ರಮುಖವಾಗಿ ಕೃಷಿ, ಆರೋಗ್ಯ, ಶಿಕ್ಷಣ, ಕೈಗಾರಿಕೆ, ಪ್ರವಾಸೋದ್ಯಮ ಹೀಗೆ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದೆ ಎಂದು ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಬಜೆಟ್ ಕುರಿತು ಹರ್ಷ ವಕ್ತಪಡಿಸಿದರು.
ಈ ವರ್ಷದ ಬಜೆಟ್‍ನಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಆಚರಿಸುವ ಈ ದಿನದಂದೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ರೂ.4531 ಕೋಟಿ ಮೀಸಲಿಡುವ ಮೂಲಕ ಮಹಿಳೆಯರಿಗೂ ಗೌರವ ಸಲ್ಲಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ರೂ 16036 ಕೋಟಿ ಹಾಗೂ ಕೃಷಿ ವಲಯಕ್ಕೆ ರೂ. 31,021 ಕೋಟಿ ಅನುದಾನ ಮೀಸಲಿಡಲಾಗಿದ್ದೂ, ಫಸಲ್ ಭೀಮಾ ಯೋಜನೆಗೆ ರೂ. 900 ಕೋಟಿ, ಕೃಷಿ ಸಿಂಚಾಯ್ ಯೋಜನೆಗೆ ರೂ. 831 ಕೋಟಿ, ಸಾವಯವ ಕೃಷಿಗೆ ರೂ. 500 ಕೋಟಿ, ಗೊಬ್ಬರ ವಿತರಣೆಗೆ ರೂ. 10 ಕೋಟಿ, ಕೃಷಿ ವಿವಿಯಲ್ಲಿ ಶಿಕ್ಷಣಕ್ಕಾಗಿ ರೈತರ ಮಕ್ಕಳಿಗೆ ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಇದು ರೈತ ಪರ ಸರ್ಕಾರ ಎಂದು ಮತ್ತೋಮ್ಮೆ ಸಾಭಿತಾಗಿದೆ.
ಧಾರವಾಡ-ಕಿತ್ತೂರು-ಬೆಳಗಾವಿ ಹೊಸ ರೈಲು ಮಾರ್ಗ ನಿರ್ಮಿಸಲು ರೂ.463 ಕೋಟಿ ಅನುದಾನ. ಬೆಳಗಾವಿ ರಿಂಗ್‍ರೋಡ್ ನಿರ್ಮಾಣಕ್ಕೆ ರೂ. 140 ಕೋಟಿ, ಗೋಹತ್ಯೆ ತಡೆಯಲು ಜಿಲ್ಲೆಗೊಂದು ಗೋ ಶಾಲೆ ನಿರ್ಮಾಣ, ಅಯೋಧ್ಯ ಶ್ರೀರಾಮ ಜನ್ಮ ಭೂಮಿಯಲ್ಲಿ ಕರ್ನಾಟಕ ಯಾತ್ರಿ ನಿವಾಸಕ್ಕೆ ರೂ 10 ಕೋಟಿ. ಕಳಸಾ-ಬಂಡೂರಿ ಮಹದಾಯಿ ನಾಲಾ ತೀರುವು ಯೋಜನೆಗೆ ರೂ. 1677 ಕೋಟಿ ಹೀಗೆ ಎಲ್ಲಾ ವಲಯಕ್ಕೆ ಹೆಚ್ಚಿನ ಅನುದಾನ ನೀಡಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ ಪ್ರಸ್ತುತ್ ಬಜೆಟ್‍ನ್ನು ಈರಣ್ಣ ಕಡಾಡಿ ಶ್ಲಾಘೀಸಿದ್ದಾರೆ ಮತ್ತು ಸ್ವಾಗತಿಸಿದ್ದಾರೆ. ಹೊಸ ತೆರಿಗೆ ಹಾಕದ ಯಾರಿಗೂ ಹೋರೆಯಾಗದ ಪ್ರಾದೇಶಿಕವಾಗಿ ಎಲ್ಲ ಜಿಲ್ಲೆಗಳಿಗೂ ಆದ್ಯತೆ ನೀಡಿದ ಇದೊಂದು ಜನಸ್ನೇಹಿ ಬಜೆಟ್ ಆಗಿದೆ ಎಂದು ಹೊಗಳಿದರೂ.