ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ
ಮೂಡಲಗಿ: ಎಲ್ಲಾ ಅಡೆತಡೆಗಳನ್ನು ಮೀರಿ ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ನೃತ್ಯ, ರಾಜಕೀಯ, ಆರ್ಥಿಕ, ಸಾಮಾಜಿಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಇಂದು ಮಹಿಳೆಯರು ದಾಪುಗಾಲಿಡುತ್ತಿದ್ದು, ಪುರುಷರಿಗೆ ಸರಿಸಮಾನವಾಗಿ ಬೆಳೆಯುತ್ತಿದ್ದು ಮುಂಬರುವ ದಿನಗಳಲ್ಲಿ ಅಚ್ಚರಿಯರೀತಿಯಲ್ಲಿ ಅವಳು ಮುಂದುವರೆಯುತ್ತಾಳೆ ಎಂದು ಪ್ರಾಧ್ಯಾಪಕಿ ಶ್ರೀಮತಿ ಗಾಯತ್ರಿ ಸಾಳೋಖೆ ಹೇಳಿದರು. .
ಪಟ್ಟಣದ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಲಿ ನಡೆದ ಆಯ್.ಕ್ಯೂ.ಎ.ಸಿ. ಹಾಗೂ ಮಹಿಳಾ ವೇದಿಕೆಯ ವತಿಯಿಂದ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, “ಹೆಣ್ಣು ಅಬಲೆಯಲ್ಲ ಸಬಲೆ; ಸಕಲ ರಂಗಗಳಲ್ಲಿಯೂ ತನ್ನಛಾಪು ಮೂಡಿಸಿರುವ ಹೆಣ್ಣು ತಾಯಿಯಾಗಿ, ಸಹೋದರಿಯಾಗಿ, ಮಡದಿಯಾಗಿ, ಮಗಳಾಗಿ ಪುರುಷನ ಜೀವನವನ್ನು ರೂಪಿಸುತ್ತಾಳೆ. ಭೂಮಿತಾಯಿಯ ಪ್ರತಿರೂಪ ಹೆಣ್ಣು ಅವಳನ್ನು ಎಲ್ಲರೂ ಗೌರವದಿಂದಕಾಣಿ ಎಂದರು.
ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಶಾನೂರಕುಮಾರ ಗಾಣಿಗೇರ ಮಾತನಾಡಿ, ಮಹಿಳೆಯರು ಇಂದು ಪುರುಷರಿಗೆ ಸರಿ ಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದು ಅವರ ಆಶೋತ್ತರಗಳಿಗೆ ತಕ್ಕಂತೆ ಪುರುಷರು ತಮ್ಮ ಮನೋಭಾವನೆಯನ್ನು ಬದಲಾಯಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಪಕಿ ಶೀತಲ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾವಿದ್ಯಾಲಯದ ಶ್ರೀಮತಿ ಶಿವಲೀಲಾ ಎಚ್., ವೀಣಾ ಮೂಗನೂರ, ಶ್ರೀಮತಿ ಅಶ್ವಿನಿ ಎಸ್, ರಾಧಾಎಂ.ಎನ್. ಆರ್.ಆಯ್. ಆಸಂಗಿ, ಪರ್ವಿನ್ ಅತ್ತಾರ, ಚೇತನರಾಜ್ ಬಿ ಮತ್ತಿತತರು ಇದ್ದರು.
ಹನುಮಂತ ಕಾಂಬಳೆ ನಿರೂಪಿಸಿದರು. ಪಾರ್ವತಿ ಸೋಮಣ್ಣನವರ ಸ್ವಾಗತಿಸಿದರು. ವೇದಾ ದೇಶಪಾಂಡೆ ವಂದಿಸಿದರು.