ಬೆಟಗೇರಿ ಗ್ರಾಮದ ಶ್ರೀ ಸಿದ್ಧಾರೂಢರ ಭಕ್ತರು ಪಾದಯಾತ್ರೆ ಮೂಲಕ ಹುಬ್ಬಳ್ಳಿಗೆ ಪಯಣ
ಬೆಟಗೇರಿ:ಹುಬ್ಬಳ್ಳಿ ಸದ್ಗುರು ಶ್ರೀ ಸಿದ್ಧಾರೂಢರ ಮಠದಲ್ಲಿ ಜರುಗಲಿರುವ ಮಹಾಶಿವರಾತ್ರಿ ಜಾತ್ರೆಗೆ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸದ್ಗುರು ಶ್ರೀ ಸಿದ್ಧಾರೂಢರ ಭಕ್ತರು ಪಾದಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮ ಸೋಮವಾರದಂದು ಸ್ಥಳೀಯ ಶ್ರೀ ಬಸವೇಶ್ವರ ವೃತ್ತದಲ್ಲಿ ನಡೆಯಿತು.
ಸ್ಥಳೀಯ ಸದ್ಗುರು ಶ್ರೀ ಸಿದ್ಧಾರೂಢರ ಪಾದಯಾತ್ರೆ ವ್ಯವಸ್ಥಾಪಕ ಸಮಿತಿ ಸಂಚಾಲಕ ಈಶ್ವರ ಬಳಿಗಾರ ಪ್ರಾಸ್ತಾವಿಕವಾಗಿ ಮಾತನಾಡಿ, ಯುವಕರು ಸೇರಿದಂತೆ ನೂರಾರು ಜನ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ಬೆಟಗೇರಿ ಗ್ರಾಮದಿಂದ ಅಕ್ಕಿಸಾಗರ ಮಾರ್ಗವಾಗಿ ಯರಗಟ್ಟಿ, ಸವದತ್ತಿ, ಅಮ್ಮಿನಬಾವಿ, ಚಂದನಮಟ್ಟಿ ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ, ಬುಧವಾರ ಮಾ.10 ರಂದು ರಾತ್ರಿ ಹುಬ್ಬಳ್ಳಿ ಸಿದ್ಧಾರೂಢರ ಮಠ ಪಾದಯಾತ್ರೆ ತಲುಪಲಿದೆ ಎಂದರು.
ಸ್ಥಳೀಯ ಶರಣರಾದ ಈಶ್ವರ ಬಳಿಗಾರ, ಮಲ್ಲಪ್ಪ ಪಣದಿ, ಅರ್ಜುನ ಅಂದಾನಿ, ವೀರಸಂಗಪ್ಪ ದೇಯಣ್ಣವರ, ಸುರೇಶ ಬಾಣಸಿ, ಗೌಡಪ್ಪ ಮಾಳೇದ, ಶಿವಲಿಂಗ ಮುಧೋಳ, ಬಾಳು ಕನೋಜಿ, ಮಂಜು ಕಂಬಿ, ಹಜರತ್ ಮಿರ್ಜಾನಾಯ್ಕ, ಸಿದ್ದಪ್ಪ ಹೊರಟ್ಟಿ ಸೇರಿದಂತೆ ಸ್ಥಳೀಯ ಸದ್ಗುರು ಶ್ರೀ ಸಿದ್ಧಾರೂಢರ ಪಾದಯಾತ್ರೆ ವ್ಯವಸ್ಥಾಪಕ ಸಮಿತಿ ಸದಸ್ಯರು, ಯುವಕರು, ಮಹಿಳೆಯರು, ಸದ್ಗುರು ಶ್ರೀ ಸಿದ್ಧಾರೂಢರ ಭಕ್ತರು ಇದ್ದರು.