ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಭೂಷಿತಳಾಗಿರುವಳು-
ನಿಪ್ಪಾಣಿ ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ
ಮೂಡಲಗಿ: ‘ಸಹನೆ, ಕರುಣೆಯನ್ನು ಹೊಂದಿರುವ ಮಹಿಳೆಯು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಭೂಷಿತಳಾಗಿದ್ದಾಳೆ’ ಎಂದು ನಿಪ್ಪಾಣಿಯ ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ ಹೇಳಿದರು.
ಇಲ್ಲಿಯ ಲಯನ್ಸ ಕ್ಲಬ್ ಮೂಡಲಗಿ ಪರಿವಾರದಿಂದ ಆಚರಿಸಿದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಮಹಿಳೆಯು ಅಪಾರವಾದ ಆತ್ಮಸ್ಥೈರ್ಯವನ್ನು ಹೊಂದಿದ್ದಾಳೆ ಎಂದರು.
ಪ್ರತಿ ಮಹಿಳೆಯು ಶಿಕ್ಷಣವನ್ನು ಹೊಂದಿದರೆ ಅದು ಕೇವಲ ಕುಟುಂಬಕ್ಕೆ ಅಷ್ಟೆ ಅಲ್ಲ ಇಡೀ ಸಮಾಜಕ್ಕಕೆ ಬೆಳಕ್ನು ಮೂಡಿಸುವ ಸಾಮಥ್ರ್ಯವನ್ನು ಹೊಂದಿರುತ್ತಾಳೆ ಎಂದರು.
ಸಮಾರಂಭದಲ್ಲಿ 82 ವಯಸ್ಸಿನ ಹಿರಿಯ ಜೀವಿ, ದೇಸಿ ವೈದ್ಯೆ ಕಲ್ಲವ್ವ ಲಕ್ಷ್ಮಣ ಹುಣಚ್ಯಾಳ ಹಾಗೂ ಶಬಾನಾ ಇಸ್ಮಾಯಿಲ್ ನಗಾರಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಅಧ್ಯಕ್ಷತೆವಹಿಸಿದ್ದ ಲಯನ್ಸ್ ಕ್ಲಬ್ ಪರಿವಾರದ ಅಧ್ಯಕ್ಷ ಪುಲಕೇಶ ಸೋನವಾಲಕರ ಮಾತನಾಡಿ ಲಯನ್ಸ್ ಕ್ಲಬ್‍ವು ಪ್ರತಿ ವರ್ಷವು ಮಹಿಳಾ ದಿನಾಚರಣೆ ಆಚರಿಸುವ ಮೂಲಕ ಮಹಿಳೆಯರನ್ನು ಗೌರವಿಸುವ ಕಾರ್ಯಮಾಡಲಾಗುತ್ತಿದೆ ಎಂದು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಕಾರ್ಯದರ್ಶಿ ಸಂಜಯ ಮೋಕಾಶಿ, ಖಜಾಂಚಿ ಸಂಜಯ ಮಂದ್ರೋಳಿ ಇದ್ದರು.
ಗೀತಾ ಎಂ. ಸೋನವಾಲಕರ, ಡಾ. ಬನಶಂಕರಿ ಗಿರಡ್ಡಿ, ತನುಜಾ ಸಲ್ಲಾಗೋಳ, ಕವಿತಾ ಗುಜಗೊಂಡ, ಕವಿತಾ ಗುಗ್ಗರಿ, ನಿರ್ಮಲಾ ಪಾಟೀಲ, ನೀಲಕ್ಕ ಕಪ್ಪಲಗುದ್ದಿ, ಕಸ್ತೂರಿ ರಡ್ಡಿ ಹಾಗೂ ಲಯನ್ಸ್ ಕ್ಲಬ್‍ದ ಸದಸ್ಯರು ಇದ್ದರು.
ಗಾಯತ್ರಿ ಹಿರೇಮಠ, ಐಶ್ವರ್ಯ ತಳವಾರ ಪ್ರಾರ್ಥಿಸಿದರು, ಮಂಜುಳಾ ಸೋನವಾಲಕರ ಸ್ವಾಗತಿಸಿದರು, ರಜನಿ ಬಂದಿ ವಂದಿಸಿದರು.