ಕಲ್ಲೋಳಿ : ಉತ್ತರ ಕರ್ನಾಟಕದ ಲಕ್ಷಾಂತರ ಭಕ್ತರ ಆರಾಧ್ಯ ದೈವ ಹಾಗೂ ಜಾಗೃತ ಕ್ಷೇತ್ರವೆಂದು ಪ್ರಸಿದ್ಧಿ ಪಡೆದ ತಾಲೂಕಿನ ಸುಕ್ಷೇತ್ರ ಕಲ್ಲೋಳಿ ವೀರಭದ್ರೇಶ್ವರ ಮಹಾರಥೋತ್ಸವ ಗುರುವಾರ ಸಂಜೆ ನೂರಾರು ಭಕ್ತರ ಹರ್ಷೋದ್ಗಾರದ ಮಧ್ಯ ಅತ್ಯಂತ ವೈಭವದಿಂದ ಜರುಗಿತು.
ಸಂಜೆ 5 ಗಂಟೆಗೆ ಜರುಗಿದ ರಥೋತ್ಸವದಲ್ಲಿ ಪಾದಯಾತ್ರೆಯ ಮೂಲಕ ಅಪಾರ ಜನಸ್ತೋಮ ಸೇರಿ ಜಾತ್ರಾ ಉತ್ಸವಕ್ಕೆ ಮೆರುಗು ನೀಡಿದರು. ನಂದಿಕೋಲು, ವೀರಗಾಸೆ, ಸಂಬಾಳ, ವೀರ ಪುರವಂತರು, ಸಕಲ ಮಂಗಲ ವಾದ್ಯಮೇಳಗಳೊಂದಿಗೆ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು.