Breaking News
Home / Recent Posts / ಕಬಡ್ಡಿ ಆಟದ ಪುರಾತನ ವೈಭವ ಮರಳಬೇಕು-ಕಡಾಡಿ

ಕಬಡ್ಡಿ ಆಟದ ಪುರಾತನ ವೈಭವ ಮರಳಬೇಕು-ಕಡಾಡಿ

Spread the love

ಕಬಡ್ಡಿ ಆಟದ ಪುರಾತನ ವೈಭವ ಮರಳಬೇಕು-ಕಡಾಡಿ

ಮೂಡಲಗಿ: ಯುವಕರಲ್ಲಿ ಧೈರ್ಯ ಮತ್ತು ಕ್ಷಾತ್ರತೇಜತೆಯನ್ನು ಹೆಚ್ಚಿಸಬಲ್ಲ ಕಬಡ್ಡಿ ಆಟದಲ್ಲಿ ಯುವಕರು ಹೆಚ್ಚಾಗಿ ಪಾಲ್ಗೊಂಡು ಭಾರತದ ಅತ್ಯಂತ ಪುರಾತನ ಕ್ರೀಡೆಯ ಗತ ವೈಭವವನ್ನು ಮರಳಿ ತರಲು ಯುವಕರು ಮುಂದಾಗಬೇಕೆಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಹೇಳಿದರು.


ಶನಿವಾರ (ಮಾ 13) ರಂದು ಮೂಡಲಗಿ ತಾಲೂಕಿನ ನಾಗನೂರ ಪಟ್ಟಣದಲ್ಲಿ ಸೈನಿಕ ಟ್ರೋಪಿ ಕಬಡ್ಡಿ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಂದಿನ ತಲೆಮಾರಿನ ಯುವಕರು ಪಾಶ್ಚಾತ್ಯ ಕ್ರೀಡೆಗಳು ಮತ್ತು ಮೊಬೈಲ್‍ನಲ್ಲಿನ ಆಟಗಳಿಂದ ಹೊರಬಂದು ಕಬಡ್ಡಿ, ಕುಸ್ತಿಯಂತಹ ದೈಹಿಕ ಮತ್ತು ಮಾನಸಿಕ ಕ್ಷಮತೆ ಹೆಚ್ಚಿಸಬಲ್ಲ ಆಟಗಳಲ್ಲಿ ತೊಡಗುವುದರ ಮೂಲಕ ಸದೃಢ ವ್ಯಕ್ತಿತ್ವವನ್ನು ರೂಡಿಸಿಕೊಂಡು ಜವಾಬ್ದಾರಿಯುತ ನಾಗರಿಕರಾಗಿ ಬೆಳೆದು ದೇಶ ಮತ್ತು ಧರ್ಮವನ್ನು ರಕ್ಷಿಸುವ ಹೊಣೆಗಾರಿಕೆಯನ್ನು ನಿಭಾಯಿಸಬೇಕೆಂದು ಯುವಕರಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವೀರ ಅಭಿಮನ್ಯು ಮತ್ತು ಚಂದ್ರಗುಪ್ತ ಮೌರ್ಯನ ಜೀವನ ಘಟನೆಗಳ ಉದಾಹರಣೆ ನೀಡುವ ಮೂಲಕ ಕ್ರೀಡಾಕೂಟದಲ್ಲಿ ಭಾಗವಹಿಸಲು ಬಂದ ಆಟಗಾರರನ್ನು ಹುರಿದುಂಬಿಸಿದರು. ಇಂತಹ ಕ್ರೀಡಾಕೂಟಗಳ ಮೂಲಕ ಗ್ರಾಮೀಣ ಪ್ರತಿಭೆಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಆಡುವಂತೆ ಬೆಳೆಯಬೇಕೆಂದರು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಗೋಕಾಕ ಶೂನ್ಯಸಂಪಾದ ಮಠದ ಪೂಜ್ಯ ಶ್ರೀ ಮುರಘರಾಜೆಂದ್ರ ಮಹಾಸ್ವಾಮೀಗಳು ವಹಿಸಿದ್ದರು. ಮಾಜಿ ಶಾಸಕ ಆರ್. ಎಂ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಹಕಾರಿ ಸಂಘಗಳ ಉಪಾಧ್ಯಕ್ಷ ಬಿ.ಆರ್.ಪಾಟೀಲ, ಸರ್ವೋತ್ತಮ್ ಜಾರಕಿಹೊಳಿ, ಪಟ್ಟಣ ಪಂಚಾಯತ ಉಪಾಧ್ಯಕ್ಷೆ ಮಂಗಲಾ ಕೌಜಲಗಿ, ಬಸಪ್ಪ ತಡಸನ್ನವರ, ಪರಸಪ್ಪ ಬಬಲಿ, ದಾಸಪ್ಪ ನಾಯಕ, ಧನಂಜಯ ಜೊಕಿ, ದುಂಡಪ್ಪ ನಂದಗಾಂವಿ, ಶಿವಾನಂದ ಗೋಟುರ, ಪರಸಪ್ಪ ಗುಡೆನ್ನವರ, ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಹಳಿಗೌಡರ, ಪಿ.ಎಸ್.ಆಯ್ ಹಾಲಪ್ಪ ಬಾಲದಂಡಿ ಸೇರಿದಂತೆ ಮುಂತಾದ ಪ್ರಮುಖರು ಉಪಸ್ಥಿತರಿದ್ದರು. ಮಹಾಂತೇಶ ಪೂಜೇರಿ ಸ್ವಾಗತಿಸಿದರು, ಚಂದ್ರು ಕೆಂಚನ್ನವರ ಕಾರ್ಯಕ್ರಮ ನಿರೂಪಿಸಿದರು, ಮಹಾದೇವ ಮುನ್ಯಾಳ ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ