ನಮ್ಮ ಆಧ್ಯಾತ್ಮಿಕ ಶಕ್ತಿಯಿಂದಲೇ ನಮ್ಮ ರಕ್ಷಣೆ ಸಾಧ್ಯ
ಬಿ.ಇ.ಓ ಅಜೀತ ಮನ್ನಿಕೇರಿ
ಮೂಡಲಗಿ : ನಮ್ಮ ಆಧ್ಯಾತ್ಮಿಕ ಶಕ್ತಿಯಿಂದಲೇ ನಮ್ಮ ರಕ್ಷಣೆಯಾಗುತ್ತಿದ್ದು ಆಧ್ಯಾತ್ಮಿಕ ಶಕ್ತಿ ನಮ್ಮ ಭಾರತದ ಶಕ್ತಿಯಾಗಿದ್ದು ನಮ್ಮ ನಾಡಿನ ಆಧ್ಯಾತ್ಮಿಕ ಭಕ್ತಿ ವಿಶ್ವಕ್ಕೆ ಉತ್ತಮ ಸಂದೇಶ ನೀಡುತ್ತಿದ್ದು ಸಾಯಿಬಾಬಾರ ಎರಡು ಅವತಾರಗಳು ಜನರ ಕಲ್ಯಾಣದಲ್ಲಿ ದೇವರನ್ನು ಕಾಣಬಹುದು ಎಂಬುವದನ್ನು ತೋರಿಸಿವೆ ಅವರ ಸಾತ್ವಿಕ ಚಿಂತನೆಗಳು ಸ್ಪೂರ್ತಿಯಾಗಿದ್ದು ಸಾಯಿಬಾಬಾರ ದೈವಿಕ ಶಕ್ತಿ ನಮ್ಮಲ್ಲಿ ಆಧ್ಯಾತ್ಮದ ಬಲ ನೀಡುತ್ತದೆ ಎಂದು ಮೂಡಲಗಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ್ ಮನ್ನಿಕೇರಿ ಹೇಳಿದರು
ಅವರು ಸ್ಥಳಿಯ ಶ್ರೀಸತ್ಯಸಾಯಿ ಸೇವಾ ಸಮಿತಿಯ 14ನೇಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಾಯಿಬಾಬಾರ ನಂಬಿಕೆ ಮತ್ತು ಸೇವೆಕಾರ್ಯವು ಸತ್ಯ, ಧರ್ಮ, ಶಾಂತಿ, ಪ್ರೇಮ ಅಹಿಂಸೆಗಳಂಬ ಸಿದ್ದಾಂತಗಳಿಂದ ಕೂಡಿದ್ದು ಇವುಗಳು ನಮ್ಮನ್ನು ರಕ್ಷಿಸುವ ಶಕ್ತಿಗಳಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಶಿಕ್ಷಕರಾದ ಸಿ.ಎಂ. ಹಂಜಿ ಮಾತನಾಡುತ್ತಾ ಮೂಡಲಗಿಯ ಶ್ರೀಸತ್ಯಸಾಯಿ ಸೇವಾ ಸಮಿತಿಯು ಶಾಸಕರಾದ ಶ್ರೀ ಬಾಲಚಂದ್ರ ಲ ಜಾರಕಿಹೊಳಿ ಹಾಗೂ ಸ್ಥಳಿಯ ಎಲ್ಲ ಸಮುದಾಯದ ನಾಯಕರ ಹಾಗೂ ಅಧಿಕಾರಿಗಳ, ದಾನಿಗಳ ಸಹಕಾರದೊಂದಿಗೆ ಲಕ್ಷ್ಮೀ ನಗರದಲ್ಲಿ ಭವ್ಯವಾದ ಎರಡು ಅವತಾರಗಳನ್ನು ಒಳಗೊಂಡ ಸಾಯಿಮಂದಿರ ನಿರ್ಮಾಣ ಮಾಡಲಾಗುತ್ತಿದ್ದು ಮಂದಿರ ನಿರ್ಮಾಣಕ್ಕೆ ಸಹಾಯ ಸಹಕಾರ ನೀಡಿದವರನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ಅಧ್ಯಕ್ಷತೆಯನ್ನು ಬೆಳಗಾವಿ ವಿಭಾಗದ ಸಂಪನ್ಮೂಲ ವ್ಯಕ್ತಿಗಳಾದ ಸುರೇಶ ಕಬ್ಬೂರ ಮಾತನಾಡಿ ಶ್ರೀಸಾಯಿಬಾಬರ ದೈವಿಕ ಪವಾಡ ಪುರಷರಾಗಿದ್ದು ಯಾರು ಅವರನ್ನು ಪೂಜಿಸುತ್ತಾರೆ ಅವರಿಗೆ ಸಾಯಿಬಾಬ ದೈವಿಕ ಶಕ್ತಿಯನ್ನು ನೀಡುತ್ತಾನೆ ಮತ್ತು ಸಾಯಿಬಾಬರ ಸೇವಾ ಕಾರ್ಯವನ್ನು ನಮ್ಮ ಸಮಿತಿಯವರು ಉತ್ತಮವಾಗಿ ಸಂಘಟಿಸುತ್ತಿರುವದು ಉತ್ತಮ ಬೆಳವಣಿಗೆ ಎಂದರು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಸುಣದೋಳಿಯ ಶ್ರೀಜಡಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಶಿವಾನಂದ ಮಹಾಸ್ವಾಮಿಗಳು ಆರ್ಶೀವಚನ ನೀಡುತ್ತಾ ಕಷ್ಟದಲ್ಲಿ ದುಖಃದಲ್ಲಿ ಇದ್ದ ವ್ಯಕ್ತಿಗೆ ಸಹಾಯ ಮಾಡುವದರಿಂದ ಪರಮಾತ್ಮನನ್ನು ಕಾಣಬಹುದು ಪರಮಾತ್ಮನ ಧ್ಯಾನ ಮಾಡುತ್ತಿರುವಾಗ ಮನಸ್ಸಿನಿಂದ ಮತ್ಸರ ಮತ್ತು ಲೋಬದ ಗುಣಗಳು ಮಾಯವಾಗುತ್ತವೆ ಶ್ರೆದ್ದೆ ಮತ್ತು ನಿಷ್ಠೆಯ ಕಾಯಕದಲ್ಲಿ ಸಾಯಿಬಾಬರನ್ನು ಕಾಣಬಹುದು ಎಂದರು.
ಕಾರ್ಯಕ್ರಮದಲ್ಲಿ ಆರ್.ಡಿ.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ, ಮೂಡಲಗಿ ಪುರಸಭೆ ಅಧ್ಯಕ್ಷರಾದ ಹಣಮಂತ ಗುಡ್ಲಮನಿ ಪುರಸಭೆ ಸದಸ್ಯರಾದ ಸಂತೋಷ ಸೋನವಾಲ್ಕರ ಮೂಡಲಗಿ ವಲಯ ಬಿಸಿಯೂಟ ಅಧಿಕಾರಿ ಎ.ಬಿ. ಮಲಬನ್ನವರ ಹಾಗೂ ಮೂಡಲಗಿಯ ಶ್ರೀಸತ್ಯಸಾಯಿ ಸೇವಾ ಸಮಿತಿಯ ಸದಸ್ಯರು ಹಾಗೂ ಬೆಳಗಾವಿ ಜಿಲ್ಲೆ ವಿವಿಧ ತಾಲೂಕಾ ಶ್ರೀಸತ್ಯಸಾಯಿ ಸೇವಾ ಸಮಿತಿಯ ಸಂಚಾಲಕರು ಸಾಯಿಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶ್ರೀಮತಿ ರುಕ್ಮಣಿ ಗುಡ್ಡೇನ್ನವರ ಸ್ವಾಗತಿಸಿದರು ಶ್ರೀಮತಿ ರೇಣುಕಾ ದೊಡ್ಡಮನಿ ನಿರೂಪಿಸಿದರು ಎಲ್. ಎನ್. ಪಂಚಗಾವಿ ವಂದಿಸಿದರು