ಲಯನ್ಸ್ ಕ್ಲಬ್ ರೀಜನ್ ಮೀಟ್‍ದ ಉದ್ಘಾಟನೆ
‘ಸಮಾಜಕ್ಕೆ ಅರ್ಪಿಸಿಕೊಂಡವರು ನಿಜವಾದ ಶ್ರೀಮಂತರು’
ಮೂಡಲಗಿ: ‘ನಿಸ್ವಾರ್ಥದಿಂದ ಮಾಡುವ ಸಮಾಜ ಸೇವೆಯಲ್ಲಿರುವಷ್ಟು ತೃಪ್ತಿ, ಆನಂದ ಬೇರೆ ಎಲ್ಲಿಯೂ ದೊರೆಯುವುದಿಲ್ಲ’ ಎಂದು ನೇಜ್‍ದ ಚಿಂತಕ ವೀರೇಶ ಪಾಟೀಲ ಹೇಳಿದರು.
ಇಲ್ಲಿಯ ಸಾಯಿ ವಸತಿ ನಿಲಯದ ಆವರಣದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಆತಿಥ್ಯದಲ್ಲಿ ಜರುಗಿದ ‘ಲಯನ್ಸ್ ಕ್ಲಬ್ ರೀಜನ್ ಮೀಟ್-5’ರ ಪ್ರಾಂತೀಯ ಸಮಾವೇಶದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸಮಾಜಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡವರು ಈ ಭೂಮಿಯ ಮೇಲಿನ ನಿಜವಾದ ಶ್ರೀಮಂತರು ಎಂದರು.
ಮನುಷ್ಯನಿಗೆ ಸಮಾಧಾನ, ಇನ್ನೊಬ್ಬರಿಗೆ ಖೇಡು ಬಯಸದೆ, ಪರಸ್ಪರ ಪ್ರೀತಿಯ ಮಾತು ಹೇಳುತ್ತಾ, ತಮ್ಮಲ್ಲಿಯ ಜ್ಞಾನವನ್ನು ಸಮಾಜದ ಸತ್ಕಾರ್ಯಗಳಿಗೆ ಮಾಡಿಕೊಂಡರೆ ಮನುಷ್ಯ ಜೀವನ ಸಾರ್ಥಕವಾಗುತ್ತದೆ ಎಂದರು.
ಸಮಾವೇಶವನ್ನು ಉದ್ಘಾಟಿಸಿದ ಲಯನ್ಸ್ ಕ್ಲಬ್ ವೈಸ್ ಜಿಲ್ಲಾ ಗವರ್ನರ್ ಗದಗದ ಸುಗ್ಗಲಾ ಯೆಲಿಮಳಿ ಮಾತನಾಡಿ ಮೂಡಲಗಿಯ ಲಯನ್ಸ್ ಕ್ಲಬ್ ಪರಿವಾರವು ಕಡಿಮೆ ಅವಧಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡಿದ್ದು ಶ್ಲಾಘನೀಯವಾಗಿದೆ ಎಂದರು.
ಲಯನ್ಸ್ ಕ್ಲಬ್‍ನ ಸದಸ್ಯರ ಸಂಖ್ಯೆ ಹೆಚ್ಚಿಸುವುದು, ಲಿಯೋ ಮತ್ತು ಮಹಿಳಾ ಸದಸ್ಯರ ಸಂಖ್ಯೆ ಹೆಚ್ಚಿಸಬೇಕಾಗಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ರೀಜನ್ ಚೇರ್‍ಪರಸನ ವೆಂಕಟೇಶ ಸೋನವಾಲಕರ ಮಾತನಾಡಿ ರೀಜನ್ 5ರಲ್ಲಿ ಬರುವ 12 ಕ್ಲಬ್‍ಗಳು ಪ್ರಸಕ್ತ ಸಾಲಿನಲ್ಲಿ ಉತ್ತಮ ಕಾರ್ಯಮಾಡಿದ್ದು, ಜನರ ಹಸಿವು ನೀಗಿಸುವಂತ ಅಧಿಕ ಕಾರ್ಯಕ್ರಮಗಳನ್ನು ಮಾಡುವಲ್ಲಿ ಆಸಕ್ತಿವಹಿಸಬೇಕು ಎಂದರು.
ವಿಜಯಲಕ್ಷ್ಮೀ ವೆಂಕಟೇಶ ಸೋನವಾಲಕರ, ಜೋನ್ ಚೇರ್‍ಪರಸನ್‍ರಾದ ರಾಜೇಂದ್ರ ನಾಯಿಕ, ಡಾ. ವಿಕಾಸ ದಡ್ಡೆನ್ನವರ ವೇದಿಕೆಯಲ್ಲಿದ್ದರು.
ಸಮಾವೇಶದ ಸಂಘಟನಾ ಅಧ್ಯಕ್ಷ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.
ಮೂಡಲಗಿ ಪರಿವಾರ ಅಧ್ಯಕ್ಷ ಪುಲಕೇಶ ಸೋನವಾಲಕರ ಸ್ವಾಗತಿಸಿದರು,
ಡಾ. ಅನಿಲ್ ಪಾಟೀಲ, ಡಾ. ಎಸ್.ಎಸ್. ಪಾಟೀಲ, ಡಾ. ಸಂಜಯ ಶಿಂಧಿಹಟ್ಟಿ ಪರಿಚಯಿಸಿದರು, ಸಂದೀಪ ಸೋನವಾಲಕರ, ಶಿವಾನಂದ ಗಾಡವಿ ಧ್ವಜವಂದನೆ ಸಲ್ಲಿಸಿದರು, ಮಲ್ಲಿನಾಥ ಶೆಟ್ಟಿ, ಮಹಾವೀರ ಸಲ್ಲಾಗೋಳ, ಸೋಮು ಹಿರೇಮಠ ನಿರೂಪಿಸಿದರು, ವೆಂಕಟೇಶ ಪಾಟೀಲ ವಂದಿಸಿದರು.